ಬ್ರೇಕಿಂಗ್ ನ್ಯೂಸ್
12-08-20 02:39 pm Mangalore Reporter ಕರಾವಳಿ
ಮಂಗಳೂರು ಆಗಸ್ಟ್ 12: ಬೆಂಗಳೂರಿನ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿಯಲ್ಲಿ ಗಲಭೆ ಎಬ್ಬಿಸಿದ ದುಷ್ಕರ್ಮಿಗಳ ಹಿಂದೆ ಮತಾಂಧ ಉಗ್ರಗಾಮಿ ಗುಂಪುಗಳ ಕೈವಾಡದ ಶಂಕೆಯಿದ್ದು ಮಾರಕಾಯುಧಗಳೊಂದಿಗೆ ಬಂದವರ ಮೇಲೆ ಗೋಲಿಬಾರ್ ಮಾಡಿ ಹುಟ್ಟಡಗಿಸುವುದೊಂದೇ ದಾರಿ. ಪೊಲೀಸ್ ಇಲಾಖೆ ಗಲಭೆ ಆರಂಭವಾಗುವ ಹಂತದಲ್ಲೇ ಹಿಂಸಾ ಪ್ರವೃತ್ತಿಯ ಅನಾಗರಿಕರ ಮೇಲೆ ಗೋಲಿಬಾರ್ ಮಾಡಿದ್ದರೆ ಇತರರಿಗೆ ಪಾಠವಾಗುತ್ತಿತ್ತು ಎಂದು ಶಾಸಕ ಡಾ.ಭರತ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಮತಾಂಧರು ಮಹಿಳೆ ಪೊಲೀಸ್ ಸಿಬ್ಬಂದಿಗಳೂ ಎಂದು ನೋಡದೆ ಹಲ್ಲೆ ಮಾಡಿದ್ದಾರೆ. ಬೆಂಕಿ ಹಚ್ಚಿ ಸಾಯಿಸಲು ಮುಂದಾಗಿದ್ದರು. ದಲಿತ ಹಿಂದೂ ಶಾಸಕನ ಮನೆ,ಆಸ್ತಿ ಹಾನಿ ಮಾಡಿದ್ದಾರೆ. ಇಂತಹವರ ವಿರುದ್ದ ಕ್ಷಮೆಯಿಲ್ಲದ ಕಠಿಣ ಕ್ರಮ ಅಗತ್ಯ.
ಈ ಗಲಭೆ ಹಿಂದೆ ಯಾರ ಕುಮ್ಮಕ್ಕು ಇದೆ ಎಂಬುದರ ಬಗ್ಗೆ ಸರಿಯಾದ ತನಿಖೆ ನಡೆಯಬೇಕಿದೆ. ಮತಾಂಧರನ್ನು ಗುರುತಿಸಿ ಅವರಿಂದ ಆಸ್ತಿ ನಷ್ಟದ ಪರಿಹಾರ ವಶಕ್ಕೆ ಪಡೆಯಬೇಕು. ಇದರ ಜತೆ ಹಿಂದೂಗಳ ಆರಾಧ್ಯ ದೇವನಾದ ಶ್ರೀಕೃಷ್ಣನನ್ನು ಅತ್ಯಾಚಾರಿ ಎಂದು ಬಿಂಬಿಸಿದ್ದು ಎಷ್ಟು ಸರಿ. ಇದರ ಮೇಲೆ ಕೂಲಂಕುಷ ತನಿಖೆಯಾಗಬೇಕಿದೆ.

ಕಾನೂನು, ಪೊಲೀಸ್ ಇಲಾಖೆ ಇರುವಾಗ ತಪ್ಪಿತಸ್ಥರ ವಿರುದ್ದ ದೂರು ನೀಡಿ ಒತ್ತಾಯಿಸುವ ಬದಲು ಏಕಾ ಏಕಿ ಗುಂಪು ಸೇರಿ ಶಾಸಕರ ಮನೆ ಮೇಲೆ, ಇದೀಗ ಕೊರೊನಾ ವೈರಸ್ ವಿರುದ್ದ ಸೆಣೆಸುತ್ತಾ ಸರ್ವರ ಮೆಚ್ಚುಗೆಗೆ ಪಾತ್ರವಾಗುತ್ತಿರುವ ಕಾನೂನು ವಾರಿಯರ್ಸ್ ಆದ ಪೊಲೀಸರ ಮೇಲೆ, ಇಲಾಖೆಯ ವಾಹನಗಳ ಮೇಲೆ ಬೆಂಕಿ ಹಚ್ಚಿ ಮತಾಂಧರು ದೌರ್ಜನ್ಯ ಎಸಗುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದು ಕಿಡಿಕಾರಿದ್ದಾರೆ.
ಮಾಜಿ ಸಚಿವ ಯು.ಟಿ ಖಾದರ್ ಎಸ್ಡಿಪಿಐ ಬಿಜೆಪಿಯ ರಾಜಕೀಯ ದಾಳ ಎಂದಿದ್ದಾರೆ. ಆದರೆ ದಲಿತ ಶಾಸಕನನ್ನು ನಿಂದಿಸಿ ಅವರ ಮೇಲೆ ಹಲ್ಲೆಯಾದರೂ ಕಾಂಗ್ರೆಸ್ ಮೌನ ಏಕೆ ? ಯು.ಟಿ ಖಾದರ್ ಮೊದಲು ಮತಾಂಧರ ಶಕ್ತಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಲಿ ಎಂದು ಅವರು ತಿರುಗೇಟು ನೀಡಿದ್ದಾರೆ.
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 09:46 pm
Mangalore Correspondent
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm