ಬ್ರೇಕಿಂಗ್ ನ್ಯೂಸ್
02-05-26 08:58 pm HK News Staffer ಕರಾವಳಿ
ಮಂಗಳೂರು, ಮೇ 2: ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದು ಅಣೆಕಟ್ಟಿನಲ್ಲಿ ಕೇವಲ 4 ಮೀಟರ್ಗೆ ಇಳಿಕೆಯಾಗುವ ಮೂಲಕ ನಗರದಲ್ಲಿ ಕೃತಕ ಜಲಕ್ಷಾಮವನ್ನು ಸೃಷ್ಟಿಸಲಾಗಿದೆ. ಕೂಡಲೇ ಎಎಂಆರ್ ಡ್ಯಾಮ್ ನಿಂದ ತುಂಬೆ ಡ್ಯಾಮ್ ಗೆ ನೀರು ಹರಿಸಿ ಜಲಕ್ಷಾಮ ನಿವಾರಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
ನೇತ್ರಾವತಿ ನದಿಯ ತುಂಬೆ ಡ್ಯಾಮ್ ಗೆ ಖುದ್ದು ಭೇಟಿ ನೀಡಿ ವೀಕ್ಷಣೆ ನಡೆಸಿದ ಶಾಸಕರು, ನಗರ ವ್ಯಾಪ್ತಿಯಲ್ಲಿ ಇಬ್ಬರು ಶಾಸಕರು ಇದ್ದರೂ ಯಾವುದೇ ಮಾಹಿತಿ ನೀಡದೇ ಜಿಲ್ಲಾಡಳಿತ ನೇತೃತ್ವದ ಪಾಲಿಕೆಯು ನೀರಿನ ರೇಷನಿಂಗ್ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ. ವಾಸ್ತವದಲ್ಲಿ ಆಪತ್ಕಾಲದ ಬಳಕೆಗೆ ಇರುವ ಎಎಂಆರ್ ಡ್ಯಾಮ್ ನಲ್ಲಿ ಸಾಕಷ್ಟು ನೀರಿದ್ದು ತುಂಬೆಗೆ ಹರಿಸಿ ನೀರಿನ ಮಟ್ಟ 6 ಮೀಟರ್ ವರೆಗೆ ಏರಿಸಿ ಜನರಿಗೆ ದಿನನಿತ್ಯ ನೀರು ಸರಬರಾಜು ಮಾಡಬಹುದು. ಇದನ್ನು ಬಿಜೆಪಿಯು ಹಿಂದಿನ ಪಾಲಿಕೆಯ ಆಡಳಿತದಲ್ಲಿ ಮಾಡಿ ತೋರಿಸಿರುವಾಗ, ಜನರನ್ನು ಹೀಗೆ ಭಯ ಭೀತಗೊಳಿಸುವುದು ಎಷ್ಟು ಸರಿ.? ನಾಳೆಯೊಳಗೆ ಎಎಂಆರ್ ಡ್ಯಾಮ್ ನಿಂದ ನೀರು ಬಿಡಬೇಕೆಂದು ಅಧಿಕಾರಿಗಳನ್ನು ಆಗ್ರಹಿಸಿದರು.

ಮಾಜಿ ಮೇಯರ್ ಗಳಾದ ಪ್ರೇಮಾನಂದ ಶೆಟ್ಟಿ ಹಾಗೂ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಖಂಡಿತ ನೀರಿನ ಸಮಸ್ಯೆ ಇಲ್ಲ. ಆಡಳಿತ ನಡೆಸುವವರು ಅನುಭವವಿಲ್ಲದೆ ಇಂತಹ ನಿರ್ಧಾರ ಕೈಗೊಂಡಂತಾಗಿದೆ. ಇನ್ನಿತರ ಬಳಕೆಗೆ ನೀರು ಬಳಸುವುದನ್ನು ತಡೆಯುವುದು ಬಿಟ್ಟು ಜನರ ಕುಡಿಯುವ ನೀರು ನಿಲ್ಲಿಸುವುದು ಎಷ್ಟು ಸರಿ? ನಗರದ ಹಲವೆಡೆ ನೀರೇ ಬರುತ್ತಿಲ್ಲ ಎಂಬ ಆರೋಪವಿದ್ದು 24 ಗಂಟೆ ಎಲ್ಲಾ ಮನೆಗಳಿಗೂ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದರು. ತುಂಬೆ ಡ್ಯಾಮ್ ನಲ್ಲಿ ನೀರು ಇಲ್ಲವೆಂದು ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು ಹರಿಸಲು ಮಹಾನಗರ ಪಾಲಿಕೆ ನಿರ್ಧಾರ ಕೈಗೊಂಡಿದ್ದು ನೀರು ಪೂರೈಕೆ ಕಡಿತ ಮಾಡಿದೆ.
ಈ ಸಂದರ್ಭದಲ್ಲಿ ಬಿಜೆಪಿ ನಿಕಟ ಪೂರ್ವ ಪಾಲಿಕೆ ಸದಸ್ಯರುಗಳಾದ ಪೂರ್ಣಿಮಾ, ಭಾನುಮತಿ, ವೀಣಾಮಂಗಳ, ಲೀಲಾವತಿ ಪ್ರಕಾಶ್, ಜಯಲಕ್ಷ್ಮಿ ಶೆಟ್ಟಿ, ಸಂದೀಪ್ ಗರೋಡಿ, ಭರತ್ ಕುಮಾರ್, ಶೈಲೇಶ್ ಶೆಟ್ಟಿ, ಗಣೇಶ್ ಕುಲಾಲ್, ಶೋಭಾ ಪೂಜಾರಿ, ಕಿಶೋರ್ ಕೊಟ್ಟಾರಿ, ಮನೋಹರ್ ಶೆಟ್ಟಿ, ಪ್ರಮುಖರಾದ ಅಶ್ವಿತ್ ಕೊಟ್ಟಾರಿ, ರಮೇಶ್ ಹೆಗ್ಡೆ, ಮೋಹನ್ ಪೂಜಾರಿ, ಪಾಲಿಕೆಯ ಹಿರಿಯ ಅಧಿಕಾರಿಗಳಾದ ನರೇಶ್ ಶೆಣೈ, ಅಶ್ವಿನ್ ಉಪಸ್ಥಿತರಿದ್ದರು.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm