ಬ್ರೇಕಿಂಗ್ ನ್ಯೂಸ್
08-05-26 08:05 pm HK News Staffer ಕರ್ನಾಟಕ
ಹೈದರಾಬಾದ್, ಮೇ 8: ತೆಲಂಗಾಣದಲ್ಲಿ 12ನೇ ಶತಮಾನದಲ್ಲಿ ಸ್ಥಾಪಿಸಿದ್ದು ಎನ್ನಲಾದ ಕಾಕತೀಯರ ಕಾಲದ ಪುರಾತನ ಶಿವ ದೇವಾಲಯವನ್ನು ಶಾಲಾ ಮೈದಾನಕ್ಕಾಗಿ ಧ್ವಂಸಗೊಳಿಸಲಾಗಿದ್ದು ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗುತ್ತಿದ್ದಂತೆ ವಿವಾದಕ್ಕೆ ಕಾರಣವಾಗಿದೆ.
ವಾರಂಗಲ್ ಜಿಲ್ಲೆಯ ಖಾನಾಪುರ ಮಂಡಲದ ಅಶೋಕ ನಗರದಲ್ಲಿ ಈ ಘಟನೆ ನಡೆದಿದೆ. 800 ವರ್ಷಗಳ ಇತಿಹಾಸದ ದೇವಾಲಯವನ್ನು ಧ್ವಂಸ ಮಾಡಿರುವುದಕ್ಕೆ ಸಾರ್ವಜನಿಕರು, ಹಿಂದು ಸಂಘಟನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಶಾಲೆಯ ನೂತನ ಕಟ್ಟಡ ಮತ್ತು ಮೈದಾನಕ್ಕಾಗಿ ಭೂಮಿಯನ್ನು ಸಮತಟ್ಟು ಮಾಡುವ ವೇಳೆ ಜೆಸಿಬಿ ಬಳಸಿ ಹಳೆಯ ಪಾಳು ಬಿದ್ದ ಸ್ಥಿತಿಯಲ್ಲಿದ್ದ ಶಿವ ದೇವಾಲಯವನ್ನು ನೆಲಸಮ ಮಾಡಲಾಗಿದೆ.
ಶಿವ ದೇವಾಲಯ 13ನೇ ಶತಮಾನದ ಕಾಕತೀಯರ ದೊರೆ ಗಣಪತಿ ದೇವನ ಕಾಲದಲ್ಲಿ ನಿರ್ಮಾಣವಾಗಿತ್ತು. ಕ್ರಿ.ಶ. 1231ರಲ್ಲಿ ಬರೆದ ಏಳು ಸಾಲುಗಳ ತೆಲುಗು ಶಾಸನವೂ ಇದೇ ದೇವಾಲಯದಲ್ಲಿ ದೊರಕಿತ್ತು. ಅದರಲ್ಲಿ ರಾಜನನ್ನು 'ಮಹಾರಾಜ' ಮತ್ತು 'ರಾಜಾಧಿರಾಜುಲು' ಎಂದು ಕರೆಯಲಾಗಿತ್ತು. ಇದನ್ನು ಗುರುತಿಸಿ 1965ರಲ್ಲಿ ರಾಜ್ಯದ ಪುರಾತತ್ವ ಮತ್ತು ಮುಜರಾಯಿ ಇಲಾಖೆಗೆ ಸೇರಿಸಲಾಗಿತ್ತು.
ಸಾರ್ವಜನಿಕರ ಪ್ರತಿಭಟನೆ ಮತ್ತು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರಕ್ಕೆ ಕೆಲವರು ದೂರು ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸ್ಥಳೀಯ ಜಿಲ್ಲಾ ಮಟ್ಟದ ಅಧಿಕಾರಿಗಳು ದೇಗುಲ ಮರು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ. ಬೇಕೆಂದೇ ದೇವಾಲಯವನ್ನು ನಾವು ಧ್ವಂಸ ಮಾಡಿಲ್ಲ. 30 ಎಕರೆ ಜಾಗದಲ್ಲಿ ಪೊದೆಗಳನ್ನು ಸ್ವಚ್ಛಗೊಳಿಸುವಾಗ ಶಿಥಿಲಗೊಂಡ ದೇವಾಲಯ ನೆಲಸಮ ಆಗಿದೆ. ಇದೇನೂ ಅಧಿಕೃತವಾಗಿ ರಕ್ಷಿತ ಸ್ಮಾರಕ ಎಂದು ದಾಖಲೆಯಲ್ಲಿ ಇರಲಿಲ್ಲ ಎಂದು ಅಧಿಕಾರಿಗಳು ವಾದಿಸಿದ್ದಾರೆ. ಜನರ ಆಕ್ರೋಶ ಹೆಚ್ಚುತ್ತಿದ್ದಂತೆ ದೇಗುಲ ಮರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm