Mrpl fire, One dead: ಎಂಆರ್ ಪಿಎಲ್ ತೈಲ ಸ್ಥಾವರದಲ್ಲಿ ಸ್ಫೋಟ ; ಮುಲ್ಕಿಯ ವ್ಯಕ್ತಿ ಸಜೀವ ದಹನ, ಸುಟ್ಟು ಹೋದ ಸ್ಥಿತಿಯಲ್ಲಿ ಶವ ಪತ್ತೆ ! ಸ್ಥಳಕ್ಕೆ ಸಂಸದ ಚೌಟ ಭೇಟಿ

30-09-26 05:33 pm       Mangaluru Staffer   ಕರಾವಳಿ

ಎಂಆರ್ ಪಿಎಲ್ ತೈಲ ಸ್ಥಾವರದಲ್ಲಿ ಉಂಟಾದ ಭಾರೀ ಪ್ರಮಾಣದ ಸ್ಫೋಟ ಮತ್ತು ಅಗ್ನಿ ಅವಘಡದಲ್ಲಿ ವ್ಯಕ್ತಿಯೊಬ್ಬರು ಸಜೀವ ದಹನವಾಗಿದ್ದಾರೆ. ಎಂಆರ್ ಪಿಎಲ್ ಘಟಕದಲ್ಲಿ ಗುತ್ತಿಗೆ ನೌಕರನಾಗಿದ್ದ ಮುಲ್ಕಿ ನಿವಾಸಿ ಮನೀಶ್ ಕರ್ಕೇರ(30) ಎಂಬವರು ಘಟನೆಯಲ್ಲಿ ನಾಪತ್ತೆಯಾಗಿದ್ದು, ಹುಡುಕಾಟದ ಬಳಿಕ ಪೂರ್ತಿ ಸುಟ್ಟು ಹೋದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಮಂಗಳೂರು, ಸೆ.30: ಎಂಆರ್ ಪಿಎಲ್ ತೈಲ ಸ್ಥಾವರದಲ್ಲಿ ಉಂಟಾದ ಭಾರೀ ಪ್ರಮಾಣದ ಸ್ಫೋಟ ಮತ್ತು ಅಗ್ನಿ ಅವಘಡದಲ್ಲಿ ವ್ಯಕ್ತಿಯೊಬ್ಬರು ಸಜೀವ ದಹನವಾಗಿದ್ದಾರೆ. ಎಂಆರ್ ಪಿಎಲ್ ಘಟಕದಲ್ಲಿ ಗುತ್ತಿಗೆ ನೌಕರನಾಗಿದ್ದ ಮುಲ್ಕಿ ನಿವಾಸಿ ಮನೀಶ್ ಕರ್ಕೇರ(30) ಎಂಬವರು ಘಟನೆಯಲ್ಲಿ ನಾಪತ್ತೆಯಾಗಿದ್ದು, ಹುಡುಕಾಟದ ಬಳಿಕ ಪೂರ್ತಿ ಸುಟ್ಟು ಹೋದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಅಗ್ನಿ ಅವಘಡ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ, ಹಲವರು ಗಾಯಗೊಂಡಿದ್ದಾರೆಂದು ಸ್ಥಳೀಯರು ಹೇಳುತ್ತಿದ್ದರು. ಆದರೆ ಇದನ್ನು ಪೊಲೀಸರು ದೃಢಪಡಿಸಿರಲಿಲ್ಲ. ಇದೀಗ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಒಬ್ಬರು ನಾಪತ್ತೆಯಾಗಿದ್ದು ಮತ್ತು ಅದೇ ವ್ಯಕ್ತಿ ಸುಟ್ಟು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದ್ದನ್ನು ದೃಢಪಡಿಸಿದ್ದಾರೆ. ಬೆಂಕಿ ನಿಯಂತ್ರಣಕ್ಕೆ ಬಂದಿದ್ದು ಹುಡುಕಾಟದ ಸಂದರ್ಭದಲ್ಲಿ ಕುಳಿತ ಸ್ಥಿತಿಯಲ್ಲೇ ವ್ಯಕ್ತಿ ಸಂಪೂರ್ಣ ಸುಟ್ಟು ಹೋಗಿರುವುದು ಪತ್ತೆಯಾಗಿದೆ.

ಎಂಆರ್ ಪಿಎಲ್ ಮೂರನೇ ಹಂತದ ವಿಸ್ತರಣೆ ಜೋಕಟ್ಟೆ ಭಾಗದಲ್ಲಿ ಆಗುತ್ತಿದ್ದು, ಅದೇ ಘಟಕದಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ ಭಾರೀ ಪ್ರಮಾಣದ ಸದ್ದಿನೊಂದಿಗೆ ಸ್ಫೋಟದ ಶಬ್ದ ಕೇಳಿಬಂದಿತ್ತು. ಆಸುಪಾಸಿನಲ್ಲಿ 20 ಕಿಮೀ ವ್ಯಾಪ್ತಿಯಲ್ಲಿ ಸ್ಫೋಟ ಕೇಳಿದ್ದು, ಜನರು ಬೆದರಿ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಜೋಕಟ್ಟೆ ಪರಿಸರದಲ್ಲಿ ಕೆಲವು ಮನೆ, ಶಾಲೆಗಳಲ್ಲಿ ಗೋಡೆ ಬಿರುಕು ಬಿಟ್ಟಿದ್ದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೋಕಟ್ಟೆ ಪಂಚಾಯತ್ ಕಟ್ಟಡದಲ್ಲೂ ಗೋಡೆ ಬಿರುಕು ಬಿಟ್ಟಿದ್ದು ಕಂಡುಬಂದಿದೆ.

ಘಟನೆಯಲ್ಲಿ ರಾಜೇಶ್ ಬ್ಯಾಪ್ಟಿಸ್ಟ್ ಎಂಬ ಒಬ್ಬರು 40 ಶೇಕಡಾ ಸುಟ್ಟ ಗಾಯಕ್ಕೀಡಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತರ ಏಳು ಮಂದಿ ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಸ್ಥಳಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಮತ್ತು ಪ್ರಮುಖ ಅಧಿಕಾರಿಗಳು ಭೇಟಿ ನೀಡಿದ್ದು ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಅಲ್ಲಿರುವ ಕಾರ್ಮಿಕರ ಬಳಿಯೂ ಮಾಹಿತಿ ಕೇಳಿದ್ದಾರೆ.

A contract worker was burnt to death in a massive explosion and fire that broke out at the Mangalore Refinery and Petrochemicals Limited (MRPL) oil facility in Jokatte on Tuesday afternoon.The deceased has been identified as Manish Karkera (30), a resident of Mulki, who was working as a contract employee at the MRPL facility. Manish was reported missing following the incident. After an extensive search, his body was found completely burnt at the site.