ಬ್ರೇಕಿಂಗ್ ನ್ಯೂಸ್
29-09-26 09:26 pm HK News Staffer ಕ್ರೈಂ
ಉಡುಪಿ , ಸೆ.29: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ಯುವಕರು ಸ್ವರ್ಣಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಹೆರ್ಮುಂಡೆಯಲ್ಲಿ ನಡೆದಿದೆ. ಮೃತರನ್ನು ಭರತ್ ಪೂಜಾರಿ (29) ಹಾಗೂ ಹರ್ಷನ್ ಆಚಾರ್ಯ (23) ಎಂದು ಗುರುತಿಸಲಾಗಿದೆ.
ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಐವರು ಸ್ನೇಹಿತರು ಮಂಗಿಲಾರು ಮೂಲಕ ಸುಮಾರು ಎರಡು ಕಿಲೋಮೀಟರ್ಗಳಷ್ಟು ದುರ್ಗಮ ದಾರಿ ಕ್ರಮಿಸಿ ಸ್ವರ್ಣ ನದಿಯ ಬಳಿಗೆ ತೆರಳಿದ್ದರು. ಈ ವೇಳೆ ಈಜಲು ತೆರಳಿದ ಭರತ್ ಹಾಗೂ ಹರ್ಷನ್ ಆಳವಾದ ನೀರಿಗೆ ಸಿಲುಕಿ ಮುಳುಗಿದ್ದಾರೆ.
ಘಟನಾ ಸ್ಥಳಕ್ಕೆ ವಾಹನ ಸಂಚಾರಕ್ಕೆ ಯಾವುದೇ ದಾರಿ ಇಲ್ಲದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಮೂರು ಕಿಲೋಮೀಟರ್ಗಳಷ್ಟು ದೂರ ಕಾಲ್ನಡಿಗೆಯಲ್ಲಿ ತೆರಳಬೇಕಾಯಿತು. ಸ್ಥಳೀಯರ ಸಹಕಾರದೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಮೂರು ಗಂಟೆಗಳಿಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಇಬ್ಬರು ಯುವಕರ ಮೃತದೇಹಗಳನ್ನು ನೀರಿನಿಂದ ಮೇಲಕ್ಕೆತ್ತಿದರು. ಠಾಣಾಧಿಕಾರಿ ಸಂಜೀವ ದೇವಾಡಿಗ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯಿತು.
ಗೃಹ ಪ್ರವೇಶದ ಕನಸು ಕಾಣುತ್ತಿದ್ದ ಭರತ್
ಮೃತ ಭರತ್ ಪೂಜಾರಿ ಪೇಂಟಿಂಗ್ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದರು. ಸ್ವಂತ ಮನೆ ನಿರ್ಮಿಸುವ ಕನಸು ಕಂಡಿದ್ದ ಭರತ್, ಮನೆಯ ಕಾಮಗಾರಿಯನ್ನು ಬಹುತೇಕ ಪೂರ್ಣಗೊಳಿಸುವ ಹಂತದಲ್ಲಿದ್ದರು. ಮನೆಯ ಸ್ಲಾಬ್ ಕಾಮಗಾರಿ ಮುಗಿದಿದ್ದು, ಶೀಘ್ರದಲ್ಲೇ ಗೃಹ ಪ್ರವೇಶ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ ಸ್ವರ್ಣ ನದಿಯಲ್ಲಿ ಸಂಭವಿಸಿದ ದುರಂತ ಭರತ್ ಅವರ ಕುಟುಂಬದ ಕನಸುಗಳಿಗೆ ಆಘಾತ ನೀಡಿದೆ. ಇಬ್ಬರು ಯುವಕರ ಅಕಾಲಿಕ ಸಾವಿನಿಂದ ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ತೀವ್ರ ದುಃಖ ಆವರಿಸಿದೆ.
Two young men drowned while swimming in the Swarna River at Hermunde in Hirgana village of Karkala taluk after they had gone there with a group of friends.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
29-09-26 08:11 pm
HK News Staffer
ಸೌಜನ್ಯಾ ಮರು ತನಿಖೆಯೂ, ತಮಿಳುನಾಡಿನಲ್ಲಿ ಗ್ರಾನೈಟ್...
26-09-26 07:01 pm
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
29-09-26 01:25 pm
HK News Staffer
ಬಿ.ಸಿ.ರೋಡ್ ಸಭೆಯಲ್ಲಿ ಕರಾವಳಿ ಶಾಸಕರು, ಸಂಸದರ ಬಗ್ಗ...
29-09-26 11:41 am
ಕಂಬಳ ಲೋಕದ ದಿಗ್ಗಜ ‘ನಂದಳಿಕೆ ಪಾಂಡು’ ಇನ್ನಿಲ್ಲ: 20...
29-09-26 10:45 am
ದೇಶದಲ್ಲಿ 13 ಕೋಟಿ ಮತ ಡಿಲೀಟ್ ಆಗಿದ್ದು ಹೇಗೆ ? ಆಳು...
28-09-26 11:08 pm
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಕರಾವಳಿಗೇನು ಕೊಟ್ಟಿ...
28-09-26 09:33 pm
29-09-26 09:26 pm
HK News Staffer
Mangalore Accident: ನ್ಯಾಯಾಧೀಶರ ಕಾರಿಗೆ ಗೂಡ್ಸ್...
29-09-26 08:14 pm
ಶಿವಂ ಅಸೋಸಿಯೇಟ್ಸ್ ದೋಖಾ ; ವರ್ಷಕ್ಕೆ 36 ಪರ್ಸೆಂಟ್...
29-09-26 03:48 pm
ಕರಂಗಲ್ಪಾಡಿಯಲ್ಲಿ ಅಪಘಾತ ; ನ್ಯಾಯಾಧೀಶರಿದ್ದ ಕಾರಿಗೆ...
29-09-26 01:22 pm
ಪತಿಯನ್ನು ಬಿಟ್ಟು ಪ್ರತ್ಯೇಕ ವಾಸ ; ಮಾಂಸದಂಗಡಿ ಮಾಲೀ...
29-09-26 09:20 am