ಬ್ರೇಕಿಂಗ್ ನ್ಯೂಸ್
26-09-26 07:01 pm HK News Staffer ದೇಶ - ವಿದೇಶ
ಚೆನ್ನೈ, ಸೆ.26: ಕರ್ನಾಟಕದಲ್ಲಿ 14 ವರ್ಷಗಳ ಹಿಂದೆ ಸಂಚಲನ ಎಬ್ಬಿಸಿದ್ದ ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶದನ್ವಯ ವಿಶೇಷ ತನಿಖಾ ತಂಡ ರಚನೆಯಾಗಿದ್ದರೂ, ಕೆಲವು ಅಧಿಕಾರಿಗಳ ನೇಮಕದ ಕಾರಣಕ್ಕೆ ಟೀಕೆಗೆ ಗುರಿಯಾಗಿದೆ.
ಇದೇ ವೇಳೆ, ತಮಿಳುನಾಡಿನಲ್ಲಿ ತೀವ್ರ ರಾಜಕೀಯ ಬಿರುಗಾಳಿ ಎಬ್ಬಿಸಿರುವ ಜೆಮ್ ಗ್ರಾನೈಟ್ಸ್ ದೊರೆ ಆರ್. ವೀರಮಣಿ ಮೇಲಿನ ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೇವಲ ಮಹಿಳಾ ಅಧಿಕಾರಿಗಳನ್ನೇ ಒಳಗೊಂಡ ಎಸ್ಐಟಿ ರಚಿಸಿರುವುದು ಮುಖ್ಯಮಂತ್ರಿ ಜೋಸೆಫ್ ವಿಜಯ್ ನಡೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ತಮಿಳುನಾಡು ಡಿಜಿಪಿ ಡಾ.ಮಹೇಶ್ ಕುಮಾರ್ ಅಗರ್ವಾಲ್ ಅವರು ಪೋಕ್ಸೋ ಪ್ರಕರಣದ ತನಿಖೆಗಾಗಿ ನಾಲ್ಕು ಹಿರಿಯ ಮಹಿಳಾ ಅಧಿಕಾರಿಗಳನ್ನು ಒಳಗೊಂಡ ಎಸ್ಐಟಿ ರಚಿಸಿದ್ದಾರೆ. ಚೆನ್ನೈ ಸೆಂಟ್ರಲ್ ಕ್ರೈಮ್ ಬ್ರಾಂಚ್ ಎಸಿಪಿ ಪಿ.ಸಿ.ತೆನಿಮೋಳಿ ತನಿಖಾ ತಂಡದ ನೇತೃತ್ವ ವಹಿಸಿದ್ದು, ಚೆನ್ನೈ ನಗರ ಪೊಲೀಸ್ ಜಂಟಿ ಕಮಿಷನರ್ ದಿಶಾ ಮಿತ್ತಲ್, ಡಿಜಿಪಿ ಕಚೇರಿಯಲ್ಲಿ ಎಸ್ಪಿ ಆಗಿರುವುದಲ್ಲದೆ, ಮೀಡಿಯಾ ರಿಲೇಶನ್ಸ್ ಆಫೀಸರ್ ಆಗಿರುವ ಜೆ.ಮುತ್ತರಸಿ ಮತ್ತು ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧ ತಡೆ ಘಟಕದ ಡಿಸಿಪಿ ಆಗಿರುವ ವಿ.ವಿ. ಗೀತಾಂಜಲಿ ಅವರನ್ನು ಎಸ್ಐಟಿ ಸದಸ್ಯರಾಗಿ ನೇಮಕ ಮಾಡಲಾಗಿದೆ.
ಜೆಮ್ ಗ್ರಾನೈಟ್ ಕಂಪನಿಯ ಚೇರ್ಮನ್ ಆಗಿರುವ ಆರ್.ವೀರಮಣಿ ಅವರು ನೂರಾರು ಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೆ ಗುರಿಪಡಿಸಿದ್ದಾರೆಂಬ ಪ್ರಕರಣ ತಮಿಳುನಾಡಿನಲ್ಲಿ ತೀವ್ರ ಬಿರುಗಾಳಿ ಎಬ್ಬಿಸಿದೆ. ಎರಡು ವರ್ಷಗಳ ಹಿಂದೆಯೇ ಪ್ರಕರಣದ ಫೋಟೋ, ವಿಡಿಯೋ ಹೊರಬಂದಿದ್ದರೂ, ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ವೀರಮಣಿಯನ್ನು ಕಾಪಾಡಿತ್ತು ಎಂಬ ಆರೋಪ ಡಿಎಂಕೆ ನಾಯಕರನ್ನು ಕಟಕಟೆಯಲ್ಲಿ ನಿಲ್ಲಿಸಿದೆ. ಅಂದಿನ ಪೊಲೀಸ್ ಅಧಿಕಾರಿಗಳು ಕೂಡ ಸಾಕಷ್ಟು ಸಾಕ್ಷ್ಯಗಳಿದ್ದರೂ ಗಂಭೀರ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪಗಳು ತೀವ್ರ ಚರ್ಚೆಗೀಡಾಗಿದ್ದು, ಅಂದಿನ ಅಧಿಕಾರಿಗಳು ಮತ್ತು ಡಿಎಂಕೆ ನಾಯಕರ ಕೊರಳು ಸುತ್ತಿಕೊಂಡಿದೆ. ಇದೇ ವೇಳೆ, ಸಿಎಂ ಜೋಸೆಫ್ ವಿಜಯ್ ಪ್ರಕರಣದಲ್ಲಿ ಎಷ್ಟೇ ದೊಡ್ಡವರಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮಕ್ಕಳ ಮೇಲಿನ ಗಂಭೀರ ದೌರ್ಜನ್ಯ ಪ್ರಕರಣವನ್ನು ಸ್ಟಾಲಿನ್ ಹಣಕ್ಕಾಗಿ ಹೊರಗೆ ಬರದಂತೆ ನೋಡಿಕೊಂಡಿದ್ದರು. ಧೈರ್ಯ ಇದ್ದರೆ ಈ ಬಗ್ಗೆ ಬಹಿರಂಗ ಹೇಳಿಕೆ ನೀಡಲಿ ಎಂದು ಸ್ಟಾಲಿನ್ ವಿರುದ್ಧ ಗುಡುಗಿದ್ದಾರೆ.
‘ತಮಿಳುನಾಡು ಎಫ್ ಸ್ಟೀನ್’ ಪ್ರಕರಣ
ಅಮೆರಿಕದಲ್ಲಿ ಎಪ್ಸ್ಟೀನ್ ಎಂಬಾತ ಹಲವಾರು ಮಹಿಳೆಯರು, ಮಕ್ಕಳೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂಬ ಕೃತ್ಯ ಜಗತ್ತಿನಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ತಮಿಳುನಾಡಿನಲ್ಲಿ ಗ್ರಾನೈಟ್ ದೊರೆಯೆಂದೇ ಖ್ಯಾತಿ ಪಡೆದಿರುವ ಜೆಮ್ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ, ಸಾವಿರಾರು ಕೋಟಿಗಳ ಒಡೆಯ ಆರ್.ವೀರಮಣಿ ವಿರುದ್ಧ ಕೇಳಿಬಂದಿರುವ ಪ್ರಕರಣವನ್ನು ಮಾಧ್ಯಮಗಳು ಎಫ್ ಸ್ಟೀನ್ ಆಫ್ ತಮಿಳುನಾಡು ಎಂದೇ ಬಿಂಬಿಸಿವೆ. 2024ರಲ್ಲೇ ವೀರಮಣಿ ಮಕ್ಕಳೊಂದಿಗೆ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದ ವಿಡಿಯೋಗಳ ಸ್ಕ್ರೀನ್ ಶಾಟ್ ಜಾಲತಾಣದಲ್ಲಿ ಓಡಾಡಿತ್ತು. ಆದರೆ ಅಂದಿನ ಸರ್ಕಾರವಾಗಲೀ, ಚೆನ್ನೈ ಪೊಲೀಸರಾಗಲೀ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದರಲ್ಲಿ ಕಾಣಿಸಿಕೊಂಡಿದ್ದ ಮಕ್ಕಳು ಯಾರು, ವಿಡಿಯೋಗಳ ಅಸಲಿತನ ತಿಳಿದುಬಂದಿಲ್ಲ ಎಂದು ಹೇಳಿ ಒಟ್ಟು ಪ್ರಕರಣವನ್ನು ಮುಚ್ಚಿ ಹಾಕಿದ್ದರು. ಆದರೆ, ಈ ಬಗ್ಗೆ 2024ರ ಫೆಬ್ರವರಿಯಲ್ಲೇ ಕಾಂಗ್ರೆಸ್ ಸಂಸದ ರಂಜನ್ ಕುಮಾರ್ ತಾನು ಚೆನ್ನೈ ಎಸಿಪಿಗೆ ಖುದ್ದಾಗಿ ಇದರ ವಿಡಿಯೋ ಕಳಿಸಿಕೊಟ್ಟು ತನಿಖೆಗೆ ಕೇಳಿಕೊಂಡಿದ್ದೆ ಎಂದು ಹೇಳಿರುವುದು ಮತ್ತು ದೂರು ಕೊಟ್ಟಿದ್ದರ ಸ್ಕ್ರೀನ್ ಶಾಟ್ ಗಳನ್ನು ಬಿಡುಗಡೆ ಮಾಡಿರುವುದು ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
84 ವರ್ಷದ ಮುದುಕನಿಗೆ ಚಪಲ
84 ವರ್ಷದ ವೀರಮಣಿ ಚೆನ್ನೈನಲ್ಲಿ ಬಾಡಿಗೆ ಮನೆ ಮಾಡಿಕೊಂಡು 12ರಿಂದ 16 ವರ್ಷ ಪ್ರಾಯದ ಅಪ್ರಾಪ್ತ ಬಡ ಮಕ್ಕಳನ್ನು ಲೈಂಗಿಕ ಶೋಷಣೆಗೆ ಒಳಪಡಿಸುತ್ತಿದ್ದ ಎಂಬ ಆರೋಪಗಳಿವೆ. ಇದಕ್ಕಾಗಿ ಆತನ ಸಹಚರೆಯಾಗಿದ್ದ ಶಾಂತಿ ಮತ್ತು ಮಹೇಂದ್ರ ಸಿಂಹನ್ ಬೆಂಬಲ ನೀಡಿದ್ದರು. ಬಡ ಮಕ್ಕಳನ್ನು ಹಣದಾಸೆ ತೋರಿಸಿ ವೀರಮಣಿಯ ಲೈಂಗಿಕ ತೃಷೆಗಾಗಿ ಆತನ ಬಾಡಿಗೆ ಮನೆಗೆ ಕರೆತರುತ್ತಿದ್ದರು. ಇದರ ಬಗ್ಗೆ 2025ರ ಅಕ್ಟೋಬರ್ ನಲ್ಲಿ ಪೆನ್ ಡ್ರೈವ್ ನಲ್ಲಿ ವಿಡಿಯೋ ದಾಖಲೆ ಸಹಿತ ಎನ್ ಜಿಓ ಸಂಘಟನೆಯೊಂದು ಚೆನ್ನೈ ಪೊಲೀಸರಿಗೆ ದೂರು ಕೊಟ್ಟಿತ್ತು. ಅದರ ಬಗ್ಗೆ ಎಫ್ಐಆರ್ ದಾಖಲಾಗಿ ಐದು ತಿಂಗಳ ಕಾಲ ಪೊಲೀಸರು ತನಿಖೆ ನಡೆಸಿದರೂ, ಸೂಕ್ತ ಸಾಕ್ಷ್ಯ ಲಭಿಸಿಲ್ಲ, ವಿಡಿಯೋದಲ್ಲಿರುವ ಮಕ್ಕಳು ಯಾರೆಂದು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿ ಕೇಸ್ ಕ್ಲೋಸ್ ಮಾಡಿದ್ದರು. ಆದರೆ ವಿಶೇಷ ಪೋಕ್ಸೋ ನ್ಯಾಯಾಲಯವು ಪೊಲೀಸರ ವರದಿಯನ್ನು ನಿರಾಕರಿಸಿ ಮರು ತನಿಖೆಗೆ ಆದೇಶ ಮಾಡಿತ್ತು.
ಆನಂತರದ ತನಿಖೆಯಲ್ಲಿ ಏಳು ಮಂದಿ ಯುವತಿಯರು ತಮ್ಮನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಹಣಕ್ಕಾಗಿ ತಮ್ಮನ್ನು ಈ ಕೃತ್ಯಕ್ಕೆ ಬಲವಂತ ಪಡಿಸಿದ್ದರೆಂದು ಹೇಳಿಕೆ ನೀಡಿದ್ದಾರೆ. ಇದರಂತೆ, ಬಡ ಮಕ್ಕಳನ್ನು ಪೂರೈಸುತ್ತಿದ್ದ ಮಹಿಳೆ ಶಾಂತಿ, ಮಹೇಂದ್ರ ಸಿಂಹನ್ ಮತ್ತು ವೀರಮಣಿ ಅವರನ್ನು ಆಗಸ್ಟ್ 29ರಂದು ಅರೆಸ್ಟ್ ಮಾಡಲಾಗಿತ್ತು. ತನಿಖೆ ಸಂದರ್ಭದಲ್ಲಿ ಚೆನ್ನೈ ನಗರದ ತಿನಾಂಪೇಟ್ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ಮತ್ತು ಅಲ್ಲಿಯೇ ವೀರಮಣಿಗೆ ತಿಳಿಯದಂತೆ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಇದೀಗ ಒಟ್ಟು ಪ್ರಕರಣದ ತನಿಖೆಗಾಗಿ ಜೋಸೆಫ್ ವಿಜಯ್ ಸರ್ಕಾರವು ಮಹಿಳಾ ಅಧಿಕಾರಿಗಳನ್ನೇ ಒಳಗೊಂಡ ಎಸ್ಐಟಿ ರಚಿಸಿದ್ದು, ಈ ಹಿಂದಿನ ತನಿಖೆಯಲ್ಲಿ ಆಗಿರುವ ಲೋಪಗಳು ಸೇರಿದಂತೆ ಪ್ರಕರಣ ಮುಚ್ಚಿ ಹಾಕಲು ಪೊಲೀಸರು ಸಹಕರಿಸಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಸಲಿದೆ. ಯಾವುದೇ ವ್ಯಕ್ತಿಯ ಪಾತ್ರ ಇದ್ದರೂ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ವಿಜಯ್ ಆದೇಶ ಮಾಡಿರುವುದು ತಮಿಳುನಾಡು ಪೊಲೀಸ್ ಇಲಾಖೆಯಲ್ಲೂ ಸಂಚಲನ ಮೂಡಿಸಿದೆ.

ಪೊಲೀಸ್ ಇಲಾಖೆಯಲ್ಲೇ ಸಂಚಲನ
ಎಸ್ಐಟಿ ರಚನೆ ಬೆನ್ನಲ್ಲೇ ವೀರಮಣಿ ಪ್ರಕರಣವನ್ನು ಹಳ್ಳ ಹಿಡಿಸಿದ್ದಾರೆಂಬ ಆರೋಪ ಹೊತ್ತಿರುವ ಎಡಿಜಿಪಿ ಎ.ಅರುಣ್, ಕೊಯಂಬತ್ತೂರು ಐಜಿ ಕಣ್ಣನ್ ಅವರ ಮೇಲೆ ತೂಗುಗತ್ತಿ ಎದುರಾಗಿದೆ. ತಮಿಳುನಾಡು ಸರ್ಕಾರವು ಈ ಇಬ್ಬರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿದ್ದು, ಎಸ್ಐಟಿ ಇವರನ್ನು ವಿಚಾರಣೆಗೆ ಗುರಿಪಡಿಸಲಿದೆ ಎನ್ನುವ ವದಂತಿ ಹರಡಿದೆ. ವೀರಮಣಿ ವಿರುದ್ಧ ಆರೋಪ ಕೇಳಿಬಂದಾಗ ಎಡಿಜಿಪಿ ಅರುಣ್ ಚೆನ್ನೈ ಕಮಿಷನರ್ ಆಗಿದ್ದರೆ, ಕಣ್ಣನ್ ಅವರು ಚೆನ್ನೈ ದಕ್ಷಿಣ ವಿಭಾಗದ ಎಸಿಪಿ ಆಗಿದ್ದರು. ತಮಿಳುನಾಡು ಕಾಂಗ್ರೆಸ್ ಎಸ್ಸಿ-ಎಸ್ಟಿ ಸೆಲ್ ಮುಖ್ಯಸ್ಥರೂ ಆಗಿದ್ದ ಸಂಸದ ರಂಜನ್ ಕುಮಾರ್, ಎಸಿಪಿ ಕಣ್ಣನ್ ಅವರಿಗೆ ಖುದ್ದಾಗಿ ಲೈಂಗಿದ ದೌರ್ಜನ್ಯದ ಸ್ಕ್ರೀನ್ ಶಾಟ್ ತೋರಿಸಿ ತನಿಖೆಗೆ ಸೂಚಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪ ಚರ್ಚೆಗೀಡಾಗಿದೆ.
ಇದೇ ವೇಳೆ, ಕೊಯಮೇಡು ನಗರದ ಎಸಿಪಿ ಎಂ.ಎ ಯಾಸ್ಮೀನ್ ವಿರುದ್ಧವೂ ತಮಿಳುನಾಡು ಪೊಲೀಸ್ ಇಲಾಖೆ ಕ್ರಮ ಜರುಗಿಸಿದೆ. ಎರಡನೇ ಬಾರಿ ಎಫ್ಐಆರ್ ದಾಖಲಾಗಿದ್ದ ವೇಳೆ ಪ್ರಕರಣದಲ್ಲಿ ಹುರುಳಿಲ್ಲವೆಂದು ಹೇಳಿ ಪೋಕ್ಸೋ ಕೋರ್ಟಿಗೆ ಬಿ ರಿಪೋರ್ಟ್ ಸಲ್ಲಿಸಿದ್ದು ಇದೇ ಯಾಸ್ಮಿನ್ ಆಗಿದ್ದು ಇದಕ್ಕಾಗಿ ಅವರನ್ನು ಹುದ್ದೆ ತೋರಿಸದೆ ವರ್ಗಾವಣೆ ಮಾಡಲಾಗಿದೆ. ಸದ್ಯಕ್ಕೆ ಈ ಮೂವರು ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಅವರ ಮೇಲೆ ಕ್ರಮ ಜರುಗಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ.

ಸೌಜನ್ಯಾ ಪ್ರಕರಣದಲ್ಲಿಯೂ ಪೊಲೀಸ್ ಅಧಿಕಾರಿಗಳು ಲೋಪ ಎಸಗಿದ್ದನ್ನು ಸುಪ್ರೀಂ ಕೋರ್ಟ್ ಕೂಡ ಪ್ರಶ್ನೆ ಮಾಡಿತ್ತು. ಅಲ್ಲದೆ, ಬೆಳ್ತಂಗಡಿ ಪೊಲೀಸರಿಂದ ಹಿಡಿದು ಸಿಬಿಐ ತನಿಖೆಯಲ್ಲೂ ಲೋಪ ಆಗಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಾಗಿದೆ. ಇದೀಗ 14 ವರ್ಷಗಳ ಹಿಂದಿನ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅಮಾನುಷ ಹತ್ಯೆ ಪ್ರಕರಣದ ಮರು ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ರಾಜ್ಯ ಸರ್ಕಾರ ಐವರು ಅಧಿಕಾರಿಗಳ ತಂಡವನ್ನು ನೇಮಿಸಿದ್ದರೂ, ಅಧಿಕಾರಿಗಳ ಬಗ್ಗೆಯೇ ಸಾರ್ವಜನಿಕ ವಲಯದಲ್ಲಿ ಅಪನಂಬಿಕೆ ಹುಟ್ಟುವಂತಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
Tamil Nadu Police have constituted a four-member, all-woman Special Investigation Team (SIT) to investigate the POCSO case involving Gem Granites founder R. Veeramani, 84, and examine related aspects of the earlier investigation. The move comes amid renewed scrutiny of how the case was initially handled.
25-09-26 04:49 pm
HK News Staffer
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
26-09-26 08:05 pm
HK News Staffer
ಸೌಜನ್ಯ ಪ್ರಕರಣದ ಮರು ತನಿಖೆ ; ಹಿಂದಿನ ತನಿಖಾ ಲೋಪಗಳ...
26-09-26 03:35 pm
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ವಿಚಾರಣೆ ; ಪ...
26-09-26 11:04 am
ಮೈಸೂರು ದಸರಾಕ್ಕೆ ಕರಾವಳಿಯ ಕಂಬಳದ ಮೆರುಗು ; ಅ.18-1...
25-09-26 07:31 pm
ಬಂಟ್ವಾಳ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಬಿಗ್...
25-09-26 07:05 pm
25-09-26 04:53 pm
HK News Staffer
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am
ಉಡುಪಿ ; ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಟಿ ಬಸ...
25-09-26 10:30 am
ಶ್ರೀನಿವಾಸ ಕಾಲೇಜಿನಲ್ಲಿ ರ್ಯಾಗಿಂಗ್ ; ಸೀನಿಯರ್ ಗುಂ...
25-09-26 08:57 am
ಪ್ರೀತಿ ನೆಪದಲ್ಲಿ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ದೌ...
24-09-26 05:10 pm