ಬ್ರೇಕಿಂಗ್ ನ್ಯೂಸ್
26-11-26 01:01 pm HK News Staffer ಕ್ರೈಂ
ಮಂಗಳೂರು, ನ.26: ದುಬೈನಿಂದ ಚಿನ್ನ ಸ್ಮಗ್ಲಿಂಗ್ ಮಾಡುವವರಿಗೆ ನೆರವು ನೀಡುತ್ತಿದ್ದ ಆರೋಪದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ನೌಕರರು ಸೇರಿದಂತೆ ಒಟ್ಟು ಮೂವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹2 ಕೋಟಿ ಮೌಲ್ಯದ 1.65 ಕೆ.ಜಿ ಚಿನ್ನ, ₹73 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಲಾದ ಒಂದು ಕಾರು ಮತ್ತು ದ್ವಿಚಕ್ರ ವಾಹನವನ್ನು ಅಧಿಕಾರಿಗಳು ವಶಪಡಿಸಿದ್ದಾರೆ.
ದುಬೈನಿಂದ ಬರುವ ಅಪರಿಚಿತ ಪ್ರಯಾಣಿಕರು ತಮ್ಮೊಂದಿಗೆ ಬಚ್ಚಿಟ್ಟು ತರುತ್ತಿದ್ದ ಚಿನ್ನವನ್ನು ಇಮಿಗ್ರೇಷನ್ ಕೌಂಟರ್ ಬಳಿ ತಪಾಸಣೆಗೂ ಮುನ್ನ ಶೌಚಾಲಯದಲ್ಲಿ ಬಾಕ್ಸ್ ರೂಪದಲ್ಲಿ ಬಚ್ಚಿಡುತ್ತಿದ್ದರು. ಇದನ್ನು ವಿಮಾನ ನಿಲ್ದಾಣದ ಸಿಬ್ಬಂದಿಯೇ ಹೊರಗೆ ನಿಂತಿದ್ದ ವ್ಯಕ್ತಿಗೆ ತಲುಪಿಸುತ್ತಾರೆ ಎಂಬ ಖಚಿತ ಮಾಹಿತಿ ಡಿಆರ್ಐ ಅಧಿಕಾರಿಗಳಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಿಂದ ಹೊರಗೆ ಬರುವ ದ್ವಾರದಲ್ಲಿ ತೀವ್ರ ನಿಗಾ ಇರಿಸಲಾಗಿತ್ತು.
ನವೆಂಬರ್ 23ರಂದು ಬೆಳಗ್ಗೆ ಶೌಚಾಲಯದಿಂದ ಚಿನ್ನ ಹೊಂದಿದ್ದ ಬಾಕ್ಸ್ ಹೊರಗೆ ತರುತ್ತಿದ್ದ ಮಂಗಳೂರು ಮೂಲದ ಗುತ್ತಿಗೆ ಕಾರ್ಮಿಕನನ್ನು ತಡೆದು ತಪಾಸಣೆ ನಡೆಸಿದಾಗ, ಪೇಸ್ಟ್ ರೂಪದಲ್ಲಿದ್ದ ಎರಡು ಚಿನ್ನದ ಗಟ್ಟಿಗಳು ಪತ್ತೆಯಾಗಿವೆ. ಈತ ಚಿನ್ನವನ್ನು ಕಾಸರಗೋಡು ಮೂಲದ ಮತ್ತೊಬ್ಬ ಸಿಬ್ಬಂದಿಗೆ ಹಸ್ತಾಂತರಿಸಿ, ಆಮೂಲಕ ವಿಮಾನ ನಿಲ್ದಾಣದಿಂದ 2 ಕಿ.ಮೀ ದೂರದಲ್ಲಿ ಕಾಯುತ್ತಿದ್ದ ಕಾಸರಗೋಡು ಮೂಲದ ಮೂರನೇ ವ್ಯಕ್ತಿಗೆ ತಲುಪಿಸಲು ಸಂಚು ರೂಪಿಸಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ಕಸ್ಟಮ್ಸ್ ಕಾಯ್ದೆ ಅಡಿಯಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಡಿಸೆಂಬರ್ 7ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಕಳೆದ ನವೆಂಬರ್ 14ರಂದು ದುಬೈನಿಂದ ಮಂಗಳೂರಿಗೆ ಬಂದಿಳಿದಿದ್ದ ಕಾಸರಗೋಡು ಮೂಲದ ಇಬ್ಬರು ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ, ಗುದನಾಳದಲ್ಲಿ ಬಚ್ಚಿಟ್ಟುಕೊಂಡಿದ್ದ ಐದು ಗುಳಿಗೆ ರೂಪದಲ್ಲಿದ್ದ ₹1.77 ಕೋಟಿ ಮೌಲ್ಯದ 1,306 ಗ್ರಾಂ ಮೆದು ಚಿನ್ನ ಪತ್ತೆಯಾಗಿತ್ತು. ಈ ಸಂಬಂಧ ಇಬ್ಬರನ್ನೂ ಬಂಧಿಸಲಾಗಿತ್ತು.
ಇದೇ ವೇಳೆ, ಮಸ್ಕತ್ನಿಂದ ಮಂಗಳೂರಿಗೆ ಬಂದಿದ್ದ ಕಾಸರಗೋಡು ಮೂಲದ ವ್ಯಕ್ತಿಯೊಬ್ಬನ ಬ್ಯಾಗ್ ಪರಿಶೀಲಿಸಿದ ಕಸ್ಟಮ್ಸ್ ಮತ್ತು ಡಿಆರ್ಐ ಅಧಿಕಾರಿಗಳು, ಚಿಪ್ಸ್ ಪ್ಯಾಕೆಟ್ಗಳ ಒಳಗೆ ಬಚ್ಚಿಡಲಾಗಿದ್ದ 1,333 ಗ್ರಾಂ ತೂಕದ 14 ಪ್ಯಾಕೆಟ್ಗಳನ್ನು ವಶಪಡಿಸಿದ್ದಾರೆ. ಪರೀಕ್ಷೆ ವೇಳೆ ಅದು ‘ಆಂಫೆಟಮೈನ್’ ಮಾದಕ ವಸ್ತು ಎಂಬುದು ದೃಢಪಟ್ಟಿದ್ದು, ಸಾಗಣೆದಾರ ಹಾಗೂ ಅದನ್ನು ಹಸ್ತಾಂತರಿಸಿದ್ದ ಕೇರಳದ ಮುನ್ನಾರ್ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.
26-11-26 08:34 pm
HK News Staffer
ಆನೆ ಸ್ಥಳಾಂತರಕ್ಕೆ ಚಿಕ್ಕಮಗಳೂರು ಶಾಸಕರ ವಿರೋಧ ; ಯಾ...
25-11-26 07:48 pm
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ;...
25-11-26 02:11 pm
ಯೋಗಿಶ್ ಗೌಡ ಕೊಲೆ ಪ್ರಕರಣ ; ಕಾಂಗ್ರೆಸ್ ಶಾಸಕ ವಿನಯ...
25-11-26 02:10 pm
ಹಾಸನ ಜಿಲ್ಲಾಧಿಕಾರಿ ಬಗ್ಗೆ ಲಂಚದ ಆರೋಪ ; ಕೇಂದ್ರ ಸಚ...
24-11-26 08:43 pm
25-11-26 11:53 am
HK News Staffer
Alwyn Joel Noronha, Mangalore: ಉದ್ಯಮಿ ಆಲ್ವಿನ್...
24-11-26 09:44 pm
ಮುಂಬೈ ನೌಕಾನೆಲೆಯಿಂದ ಮಾಹಿತಿ ಸೋರಿಕೆ ; 90 ರಹಸ್ಯ ವ...
24-11-26 08:45 pm
ಮಾಜಿ ಸಿಎಂ ಸ್ಟಾಲಿನ್ ಸೋಲಿಸಿದ್ದ ನಾಯಕನಿಗೆ ಭಾವಪೂರ್...
21-11-26 11:44 am
ಜಾಗತಿಕ ಜನಸಂಖ್ಯೆಯಲ್ಲಿ ಇಸ್ಲಾಂ ಪಾರಮ್ಯ ; 2035ಕ್ಕೆ...
20-11-26 12:58 pm
26-11-26 09:00 pm
HK News Staffer
ಎಸ್ಐಟಿ ಕಚೇರಿಗೆ ಮಹೇಶ್ ಶೆಟ್ಟಿ ತಿಮರೋಡಿ ದಾಖಲೆ ಸಲ್...
26-11-26 03:53 pm
ಬ್ರಹ್ಮರಕೂಟ್ಲು ಟೋಲ್ ಕೇಂದ್ರಕ್ಕೆ ಎಸ್ಡಿಪಿಐ ಮುತ್ತಿ...
26-11-26 03:03 pm
ಹಾಸನ ಪೊಲೀಸರು ಮಾಧ್ಯಮದವ್ರಿಗೆ ನೋಟಿಸ್ ನೀಡಿದ್ದರಲ್ಲ...
25-11-26 06:58 pm
ಸೌಜನ್ಯಾ ಪ್ರಕರಣ ಅತ್ಯಂತ ಸೂಕ್ಷ್ಮ ; ವೈಜ್ಞಾನಿಕ ಆಧಾ...
25-11-26 06:29 pm
26-11-26 08:35 pm
HK News Staffer
ಶಾಲೆಯಿಂದ ನಡೆದು ಹೋಗುತ್ತಿದ್ದ ಎರಡನೇ ಕ್ಲಾಸ್ ವಿದ್ಯ...
26-11-26 07:47 pm
ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆ...
26-11-26 02:48 pm
ದುಬೈನಿಂದ ಚಿನ್ನ ಸ್ಮಗ್ಲಿಂಗ್ ; ಶೌಚಾಲಯದಲ್ಲಿ ಬಚ್ಚಿ...
26-11-26 01:01 pm
ಒಂದು ಟೀ ಶರ್ಟ್ ಕೊಂಡರೆ ಐ-ಫೋನ್ ಗಿಫ್ಟ್ ! ಶ್ರೀನಿವಾ...
25-11-26 01:30 pm