ಒಂದು ಟೀ ಶರ್ಟ್ ಕೊಂಡರೆ ಐ-ಫೋನ್ ಗಿಫ್ಟ್ ! ಶ್ರೀನಿವಾಸ ಕಾಲೇಜಿನ ವೈದ್ಯನಿಗೆ ಸೈಬರ್ ಬಕ್ರಾ, ಗಿಫ್ಟ್ ತರಿಸಲು 1.65 ಲಕ್ಷ ಇನ್ಶೂರೆನ್ಸ್ ಕಟ್ಟಿಸಿ ದೋಖಾ

25-11-26 01:30 pm       HK News Staffer   ಕ್ರೈಂ

ಒಂದು ಟೀ ಶರ್ಟ್ ಕೊಂಡರೆ ಐ-ಫೋನ್ ಗಿಫ್ಟ್ ಎಂಬ ಆಫರ್ ಕೇಳಿ ಶ್ರೀನಿವಾಸ ಮೆಡಿಕಲ್ ಕಾಲೇಜಿನ ಪಿಜಿ ವೈದ್ಯರೊಬ್ಬರು ಬಕ್ರಾ ಆಗಿರುವ ಘಟನೆ ನಡೆದಿದ್ದು ಸೈಬರ್ ಖದೀಮರು ವೈದ್ಯನನ್ನು ನಂಬಿಸಿ ಗಿಫ್ಟ್ ನೆಪದಲ್ಲಿ 1.65 ಲಕ್ಷ ಪೀಕಿಸಿಕೊಂಡಿದ್ದಾರೆ.

ಮಂಗಳೂರು, ನ.25: ಒಂದು ಟೀ ಶರ್ಟ್ ಕೊಂಡರೆ ಐ-ಫೋನ್ ಗಿಫ್ಟ್ ಎಂಬ ಆಫರ್ ಕೇಳಿ ಶ್ರೀನಿವಾಸ ಮೆಡಿಕಲ್ ಕಾಲೇಜಿನ ಪಿಜಿ ವೈದ್ಯರೊಬ್ಬರು ಬಕ್ರಾ ಆಗಿರುವ ಘಟನೆ ನಡೆದಿದ್ದು ಸೈಬರ್ ಖದೀಮರು ವೈದ್ಯನನ್ನು ನಂಬಿಸಿ ಗಿಫ್ಟ್ ನೆಪದಲ್ಲಿ 1.65 ಲಕ್ಷ ಪೀಕಿಸಿಕೊಂಡಿದ್ದಾರೆ. 

ವೈದ್ಯ ತನ್ನ ಮೊಬೈಲ್ ನಲ್ಲಿ ಅ.31ರಂದು INDIA STORES FOR YOU ನೋಡುತ್ತಿದ್ದಾಗ ಒಂದು ಟೀ ಶರ್ಟ್ ಗೆ ಐ-ಫೋನ್ ಗಿಪ್ಟ್ ನೀಡುವುದಾಗಿ ಜಾಹೀರಾತು ಇದ್ದುದನ್ನು ಗಮನಿಸಿದ್ದರು. ಇದರಂತೆ, ಸದ್ರಿ ಟೀ ಶರ್ಟ್ ಅನ್ನು ರೂ.734/- ಹಣವನ್ನು ಫೋನ್ ಫೇ ಮಾಡಿ ಆನ್ ಲೈನ್ ವೆಬ್ ಸೈಟ್ ನಲ್ಲಿ ಬುಕ್ ಮಾಡಿದ್ದರು. ನಂತರ ಅದೇ ದಿನ ಮದ್ಯಾಹ್ನ 2-30 ಗಂಟೆಗೆ ಯಾರೋ ಅಪರಿಚಿತರು ಕರೆ ಮಾಡಿ ಟೀ ಶರ್ಟ್ ಜೊತೆಗೆ ಐ-ಫೋನ್ ಕೂಡ ಡಿಸ್ ಪ್ಯಾಚ್ ಆಗಲಿದ್ದು, ಸದ್ರಿ ಐ ಪೋನ್ ಗೆ ಇನ್ಸೂರೆನ್ಸ್ ಹಣ ಕಟ್ಟಬೇಕೆಂದು ಹಾಗೂ ಕಟ್ಟಿದ ಇನ್ಸೂರೆನ್ಸ್ ಹಣ ವಾಪಾಸ್ಸು ಜಮೆ ಆಗುತ್ತದೆ ಎಂದು ತಿಳಿಸಿದ್ದಾರೆ. 

ಅವರು ತಿಳಿಸಿದಂತೆ, Gurdit Singh Bhasin And Sons , Rinki Urf Gopal ಎಂಬ ಐಡಿಗೆ ಪೋನ್ ಪೇ ಮುಖಾಂತರ ಹಣವನ್ನು ಹಂತ ಹಂತವಾಗಿ ರೂ. 72,640 ವರ್ಗಾಯಿಸಿದ್ದಾರೆ. ನಂತರ ನ.22ರಂದು ಪುನಃ ಕರೆ ಮಾಡಿ 71,906/- ರೂ. ಹಣವನ್ನು ವರ್ಗಾಯಿಸುವಂತೆ ಹೇಳಿದ್ದು ನಂತರ ಹಣ ವಾಪಸ್ ನಿಮ್ಮ ಖಾತೆಗೆ ಮರು ವರ್ಗಾವಣೆ ಮಾಡುತ್ತೇವೆ ಎಂದು ನಂಬಿಸಿದ್ದರು. ಆತ ಹೇಳಿದಂತೆ, ಅದನ್ನೂ ವರ್ಗಾವಣೆ ಮಾಡಿದ್ದಾರೆ. ವರ್ಗಾಯಿಸಿದ ಎಲ್ಲಾ ಹಣವನ್ನು IMPS ಮಾಡಲು ಕಮಿಷನ್ ಚಾರ್ಜ್ ಎಂದು ಪುನಃ ರೂ. 20,856/-ಹಣವನ್ನು ಪೋನ್ ಪೇ ಮಾಡಿಸಿಕೊಂಡಿದ್ದಾರೆ. 

ನಂತರ ಇಲ್ಲಿಯವರೆಗೂ ಯಾವುದೇ ಹಣ ವಾಪಾಸ್ಸು ಇವರ ಖಾತೆಗೆ ಜಮೆ ಆಗಿರುವುದಿಲ್ಲ. ಅವರಿಗೆ ಕರೆ ಮಾಡಿದರೆ ಪ್ರತಿಕ್ರಿಯಿಸದೇ ಇದ್ದುದರಿಂದ ಮೋಸದ ಜಾಲ ಎಂಬುದು ಅರಿವಾಗಿ 1930 ಆನ್ ಲೈನ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ.