ಬ್ರೇಕಿಂಗ್ ನ್ಯೂಸ್
30-09-26 02:20 pm HK News Staffer ಕರಾವಳಿ
ಮಂಗಳೂರು, ಸೆ.30: ಎಂಆರ್ ಪಿಎಲ್ ತೈಲ ಸ್ಥಾವರ ಘಟಕದಲ್ಲಿ ಭೀಕರ ಸ್ಫೋಟ ಆಗಿರುವುದನ್ನು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ದೃಢಪಡಿಸಿದ್ದಾರೆ. ಹೈಡ್ರೋ ಸಲ್ಫರ್ ಟ್ರೀಟ್ಮೆಂಟ್ ಘಟಕದಲ್ಲಿ ಸ್ಪೋಟ ಉಂಟಾಗಿದ್ದು ಬೆಂಕಿ ಮತ್ತು ಹೊಗೆಯೊಂದಿಗೆ ಸ್ಫೋಟವಾಗಿದೆ. ಎಂಟು ಜನರು ಗಾಯಗೊಂಡಿದ್ದಾರೆ ಎಂದು ಕಮಿಷನರ್ ತಿಳಿಸಿದ್ದಾರೆ.
ಘಟನೆಯಲ್ಲಿ ಪೊಲೀಸರು ಎಂಟು ಮಂದಿ ಗಾಯ ಆಗಿರುವುದನ್ನು ದೃಢಪಡಿಸಿದ್ದಾರೆ. ರಾಜೇಶ್ ಬ್ಯಾಪ್ಟಿಸ್ಟ್(42) ಎಂಬವರಿಗೆ 35 ಶೇಕಡಾ ಸುಟ್ಟ ಗಾಯಗಳಾಗಿದ್ದು ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಸೇರಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಸದ್ಯಕ್ಕೆ ಬೆಂಕಿ ನಂದಿಸಲಾಗಿದೆ, ಆತಂಕ ಪಡುವ ಅಗತ್ಯವಿಲ್ಲ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.



ಇದಲ್ಲದೆ, ಘಟನೆಯಲ್ಲಿ ಇತರ ಏಳು ಮಂದಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುರತ್ಕಲ್ ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಇಂದ್ರಜಿತ್, ಪ್ರಸಾದ್, ರಮಣ್ ಎಂಬುವರನ್ನು ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆರೋಮ್, ಜಯರಾಮ್, ಅವಿನಾಶ್, ಅಕ್ಷಯ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಎಂಆರ್ ಪಿಎಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೂಲಿಂಗ್ ಪ್ಲಾಂಟ್ ನಲ್ಲಿ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ಮೂಲಗಳು ಹೇಳಿವೆ.
ಸ್ಥಳಕ್ಕೆ ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಓ ಭೇಟಿ ನೀಡಿದ್ದಾರೆ. ಜೋಕಟ್ಟೆ ಏರಿಯಾದಲ್ಲಿ ಸ್ಫೋಟ ಉಂಟಾಗಿದ್ದು ಇದರ ಶಬ್ದ ಸುತ್ತಲಿನ 15 ಕಿಮೀ ಪ್ರದೇಶದಲ್ಲಿ ಕೇಳಿದೆ. ಕಟೀಲು, ಮೂಲ್ಕಿ, ಕಿನ್ನಿಗೋಳಿ, 18 ಕಿಮೀ ದೂರದ ಮಂಗಳೂರು ನಗರದಲ್ಲಿಯೂ ಸ್ಫೋಟದ ಸದ್ದು ಕೇಳಿದ್ದು ಏನೋ ಗುಡ್ಡ ಕುಸಿದು ಬಂದ ರೀತಿಯ ಅನುಭವ ಆಯಿತು ಎಂದು ಕದ್ರಿ ಪರಿಸರದ ನಿವಾಸಿಗಳು ತಿಳಿಸಿದ್ದಾರೆ. ಮೂಡುಶೆಡ್ಡೆಯಲ್ಲಿ ಸ್ಫೋಟದ ತೀವ್ರತೆಗೆ ಕಿಟಕಿ, ಬಾಗಿಲುಗಳು ಅಲುಗಾಡಿವೆ. ಅದುರಿದ ಅನುಭವ ಆಗಿದೆಯೆಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಜೋಕಟ್ಟೆ ಪರಿಸರದಲ್ಲಿ ಕೆಲವು ಮನೆಗಳು ಬಿರುಕು ಬಿಟ್ಟಿದ್ದು ಅಲ್ಲಿನ ಜನ ಆತಂಕಕ್ಕೀಡಾಗಿದ್ದಾರೆ.
ಬಜ್ಪೆ ಏರ್ಪೋರ್ಟ್ ನಲ್ಲಿ ಕಂಪನ
ಎಂಆರ್ ಪಿಎಲ್ ಸ್ಥಾವರದಿಂದ ಏಳೆಂಟು ಕಿಮೀ ದೂರದಲ್ಲಿರುವ ಬಜ್ಪೆ ಏರ್ಪೋರ್ಟ್ ನಲ್ಲಿ ಸ್ಫೋಟದ ತೀವ್ರತೆಗೆ ಕಂಪನ ಉಂಟಾಗಿದೆ. ಅಲ್ಲಿರುವ ಸಿಬಂದಿ ಆತಂಕಗೊಂಡಿದ್ದಾರೆ. ಜೊತೆಗೆ, ಎಂಆರ್ ಪಿಎಲ್ ಸ್ಥಾವರದಿಂದ ಬೆಂಕಿ, ದಟ್ಟ ಹೊಗೆ ಬರುವುದು ಕಾಣಿಸಿದೆ. ಸದ್ಯಕ್ಕೆ ಏರ್ಪೋರ್ಟ್ ನಿರ್ವಹಣೆಗೆ ತೊಂದರೆಯಾಗಿಲ್ಲ. ವಿಮಾನಗಳ ಸಂಚಾರ ಯಥಾಸ್ಥಿತಿ ಇದೆ, ಆದರೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಏರ್ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
A major explosion occurred at the Mangalore Refinery and Petrochemicals Limited (MRPL) refinery, with Mangaluru City Police Commissioner Sudheer Kumar Reddy confirming that the incident took place at the Hydro Sulphur Treatment unit. The blast was followed by fire and thick smoke.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
30-09-26 10:49 am
HK News Staffer
ಡ್ರಗ್ಸ್ ಕಳ್ಳಸಾಗಣೆ ಆರೋಪ, ಸೌದಿಯಲ್ಲಿ ಕೇರಳದ ಯುವಕನ...
29-09-26 08:11 pm
ಸೌಜನ್ಯಾ ಮರು ತನಿಖೆಯೂ, ತಮಿಳುನಾಡಿನಲ್ಲಿ ಗ್ರಾನೈಟ್...
26-09-26 07:01 pm
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
30-09-26 03:37 pm
Mangaluru Staffer
Mrpl Fire, Mangalore: ಎಂಆರ್ ಪಿಎಲ್ ಘಟಕದಲ್ಲಿ ಭೀ...
30-09-26 02:20 pm
Mrpl Fire, Mangalore: ಎಂಆರ್ ಪಿಎಲ್ ತೈಲ ಸ್ಥಾವರದ...
30-09-26 12:59 pm
ಮಂಗಳೂರಿನಲ್ಲಿ ಒಳಚರಂಡಿ ಕಾಮಗಾರಿ ; 20 ವರ್ಷಗಳ ಹಿಂದ...
29-09-26 01:25 pm
ಬಿ.ಸಿ.ರೋಡ್ ಸಭೆಯಲ್ಲಿ ಕರಾವಳಿ ಶಾಸಕರು, ಸಂಸದರ ಬಗ್ಗ...
29-09-26 11:41 am
30-09-26 10:33 am
HK News Staffer
Udupi Body found, Accused: ಕೊಲೆ ಯತ್ನ ಪ್ರಕರಣದ...
30-09-26 10:04 am
ಮಾಂಸದ ಅಂಗಡಿಯಲ್ಲೇ ಡ್ರಗ್ಸ್ ದಂಧೆ ; ಇಬ್ಬರು ಯುವಕರು...
30-09-26 10:03 am
ಸ್ವರ್ಣಾ ನದಿಯಲ್ಲಿ ದುರಂತ ; ಹಿರ್ಗಾನ ಬಳಿ ಈಜಲು ತೆರ...
29-09-26 09:26 pm
Mangalore Accident: ನ್ಯಾಯಾಧೀಶರ ಕಾರಿಗೆ ಗೂಡ್ಸ್...
29-09-26 08:14 pm