ಬ್ರೇಕಿಂಗ್ ನ್ಯೂಸ್
30-09-26 12:59 pm HK News Staffer ಕರಾವಳಿ
ಮಂಗಳೂರು, ಸೆ.30: ಎಂಆರ್ ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು ಆಸುಪಾಸಿನ ಬಜ್ಪೆ, ಕಳವಾರು, ಬೈಕಂಪಾಡಿ, ಜೋಕಟ್ಟೆ, ಸುರತ್ಕಲ್, ಕಾಟಿಪಳ್ಳ ಪ್ರದೇಶಗಳಲ್ಲಿ ಭೂಕಂಪದ ರೀತಿಯ ಅನುಭವ ಆಗಿದೆ. ಸುತ್ತಮುತ್ತಲಿನಲ್ಲಿ ಭಾರೀ ಹೊಗೆ ಆವರಿಸಿದೆ.
ತೈಲ ಸ್ಥಾವರದ ಮೂರನೇ ಪ್ಲಾಂಟ್ ಇರುವ ಜೋಕಟ್ಟೆ ಏರಿಯಾದಲ್ಲಿ ಸ್ಫೋಟ ಉಂಟಾಗಿದ್ದು ಅಲ್ಲಿಂದ ಭಾರೀ ಪ್ರಮಾಣದ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದೆ. ಜೋಕಟ್ಟೆ ಪಂಚಾಯತ್ ಕಟ್ಟಡ ಸೇರಿದಂತೆ ಅಲ್ಲಿನ ಸುತ್ತಮುತ್ತಲಿನ ಮನೆಗಳು ಅದುರಿದ್ದು ಜನರು ಆತಂಕದಿಂದ ಹೊರಗೆ ಓಡಿ ಬಂದಿದ್ದಾರೆ. ಕೆಲವು ಕಟ್ಟಡಗಳು ಬಿರುಕು ಬಿಟ್ಟಿವೆ. ಪಂಚಾಯತ್ ಕಟ್ಟಡದ ಬಳಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು ಆತಂಕದಲ್ಲಿದ್ದಾರೆಂದು ಡಿವೈಎಫ್ಐ ಪ್ರಮುಖರಾದ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.






ಮೂರನೇ ಪ್ಲಾಂಟ್ ಇರುವ ಕಟ್ಟಡದ ಕೆಳಭಾಗದಲ್ಲೇ ಬೆಂಕಿ, ದಟ್ಟ ಹೊಗೆ ಆವರಿಸಿದ್ದು ಒಳಗಡೆ ಏನಾಗಿದೆ ಎನ್ನುವ ಮಾಹಿತಿ ಇಲ್ಲ. ಭಾರೀ ಶಬ್ದ ಬೈಕಂಪಾಡಿ, ಸುರತ್ಕಲ್ ವರೆಗೂ ಕೇಳಿಬಂದಿದೆ. ಇದರಿಂದಾಗಿ ತೈಲ ಸ್ಥಾವರದಲ್ಲಿ ಏನೋ ಎಡವಟ್ಟು ಆಗಿದೆಯೆಂಬ ಶಂಕೆ ಇದೆ. ಮಂಗಳೂರು ಏರ್ಪೋರ್ಟ್ ಬಳಿಯೂ ದಟ್ಟ ಹೊಗೆಯಿಂದಾಗಿ ಆತಂಕ ನಿರ್ಮಾಣವಾಗಿದೆ. ಘಟನೆ ಬಗ್ಗೆ ಎಂಆರ್ ಪಿಎಲ್ ಅಧಿಕಾರಿಗಳು ಮಾಹಿತಿ ನೀಡಿಲ್ಲ.
ಮಂಗಳೂರು, ಪಾಂಡೇಶ್ವರ ಸೇರಿದಂತೆ ಆಸುಪಾಸಿನ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸುವ ಕೆಲಸ ಆಗುತ್ತಿದೆ. ಸಾವು ನೋವು ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
A loud explosion was reported at the Mangalore Refinery and Petrochemicals Limited (MRPL) refinery on Wednesday, triggering panic in several areas around the facility. Residents of Bajpe, Kalavaru, Baikampady, Jokatte, Surathkal and Katipalla reportedly experienced a strong tremor-like impact.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
30-09-26 10:49 am
HK News Staffer
ಡ್ರಗ್ಸ್ ಕಳ್ಳಸಾಗಣೆ ಆರೋಪ, ಸೌದಿಯಲ್ಲಿ ಕೇರಳದ ಯುವಕನ...
29-09-26 08:11 pm
ಸೌಜನ್ಯಾ ಮರು ತನಿಖೆಯೂ, ತಮಿಳುನಾಡಿನಲ್ಲಿ ಗ್ರಾನೈಟ್...
26-09-26 07:01 pm
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
30-09-26 12:59 pm
HK News Staffer
ಮಂಗಳೂರಿನಲ್ಲಿ ಒಳಚರಂಡಿ ಕಾಮಗಾರಿ ; 20 ವರ್ಷಗಳ ಹಿಂದ...
29-09-26 01:25 pm
ಬಿ.ಸಿ.ರೋಡ್ ಸಭೆಯಲ್ಲಿ ಕರಾವಳಿ ಶಾಸಕರು, ಸಂಸದರ ಬಗ್ಗ...
29-09-26 11:41 am
ಕಂಬಳ ಲೋಕದ ದಿಗ್ಗಜ ‘ನಂದಳಿಕೆ ಪಾಂಡು’ ಇನ್ನಿಲ್ಲ: 20...
29-09-26 10:45 am
ದೇಶದಲ್ಲಿ 13 ಕೋಟಿ ಮತ ಡಿಲೀಟ್ ಆಗಿದ್ದು ಹೇಗೆ ? ಆಳು...
28-09-26 11:08 pm
30-09-26 10:33 am
HK News Staffer
Udupi Body found, Accused: ಕೊಲೆ ಯತ್ನ ಪ್ರಕರಣದ...
30-09-26 10:04 am
ಮಾಂಸದ ಅಂಗಡಿಯಲ್ಲೇ ಡ್ರಗ್ಸ್ ದಂಧೆ ; ಇಬ್ಬರು ಯುವಕರು...
30-09-26 10:03 am
ಸ್ವರ್ಣಾ ನದಿಯಲ್ಲಿ ದುರಂತ ; ಹಿರ್ಗಾನ ಬಳಿ ಈಜಲು ತೆರ...
29-09-26 09:26 pm
Mangalore Accident: ನ್ಯಾಯಾಧೀಶರ ಕಾರಿಗೆ ಗೂಡ್ಸ್...
29-09-26 08:14 pm