ಮಾಂಸದ ಅಂಗಡಿಯಲ್ಲೇ ಡ್ರಗ್ಸ್ ದಂಧೆ ; ಇಬ್ಬರು ಯುವಕರು ಖಾಕಿ ಬಲೆಗೆ, 10.60 ಲಕ್ಷ ರೂ. ಮೌಲ್ಯದ ಎಂಡಿಎಂಎ ವಶಕ್ಕೆ

30-09-26 10:03 am       HK News Staffer   ಕ್ರೈಂ

ಮಾದಕ ಪದಾರ್ಥಗಳ ಮಾರಾಟ ದಂಧೆಗೆ ಬ್ರೇಕ್ ಹಾಕಲು ಬೆಂಗಳೂರು ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ. ಆಘಾತಕಾರಿ ಎಂಬಂತೆ ದೈನಂದಿನ ವ್ಯಾಪಾರದ ನೆಪದಲ್ಲಿ ಮಾಂಸದ ಅಂಗಡಿಯನ್ನೇ ಮಾದಕ ಪದಾರ್ಥಗಳ ಮಾರಾಟದ ತಾಣವನ್ನಾಗಿ ಮಾಡಿಕೊಂಡಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜುನೈದ್ ಪಾಷಾ (30) ಹಾಗೂ ರಿಜ್ವಾನ್ ಬೇಗ್ (30) ಬಂಧಿತ ಆರೋಪಿಗಳಾಗಿದ್ದು, 10.60 ಲಕ್ಷ ರೂ. ಮೌಲ್ಯದ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು, ಸೆ 30: ಮಾದಕ ಪದಾರ್ಥಗಳ ಮಾರಾಟ ದಂಧೆಗೆ ಬ್ರೇಕ್ ಹಾಕಲು ಬೆಂಗಳೂರು ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ. ಆಘಾತಕಾರಿ ಎಂಬಂತೆ ದೈನಂದಿನ ವ್ಯಾಪಾರದ ನೆಪದಲ್ಲಿ ಮಾಂಸದ ಅಂಗಡಿಯನ್ನೇ ಮಾದಕ ಪದಾರ್ಥಗಳ ಮಾರಾಟದ ತಾಣವನ್ನಾಗಿ ಮಾಡಿಕೊಂಡಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜುನೈದ್ ಪಾಷಾ (30) ಹಾಗೂ ರಿಜ್ವಾನ್ ಬೇಗ್ (30) ಬಂಧಿತ ಆರೋಪಿಗಳಾಗಿದ್ದು, 10.60 ಲಕ್ಷ ರೂ. ಮೌಲ್ಯದ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ನೈಜೀರಿಯಾ ಪ್ರಜೆಯ ಬಳಿ ಎಂಡಿಎಂಎ ಖರೀದಿಸುತ್ತಿದ್ದರು. ನಂತರ ಸಾರ್ವಜನಿಕರಿಗೆ ಅನುಮಾನ ಬಾರದಂತೆ, ತಮ್ಮ ಮಟನ್ ಶಾಪ್‌ ಅನ್ನೇ ಮಾದಕ ವಸ್ತುಗಳ ಅಕ್ರಮ ವಿತರಣೆ ಮತ್ತು ಮಾರಾಟದ ಕೇಂದ್ರವಾಗಿ ಬಳಸಿಕೊಳ್ಳುತ್ತಿದ್ದರು.

ಆರೋಪಿಗಳ ಕೃತ್ಯದ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ವಿದ್ಯಾರಣ್ಯಪುರ ಠಾಣೆ ಪೊಲೀಸರು ದಾಳಿ ನಡೆಸಿದಾಗ ಸಂಪೂರ್ಣ ಸಂಚು ಬಯಲಾಗಿದೆ.​ ದಾಳಿಯ ಸಂದರ್ಭದಲ್ಲಿ ಆರೋಪಿಗಳಿಂದ ಅಂದಾಜು 10 ಲಕ್ಷದ 60 ಸಾವಿರ ರೂಪಾಯಿ ಮೌಲ್ಯದ 106 ಗ್ರಾಂ ಎಂಡಿಎಂಎ, ಇದರೊಂದಿಗೆ ಕೃತ್ಯಕ್ಕೆ ಬಳಸುತ್ತಿದ್ದ ಎರಡು ಮೊಬೈಲ್ ಫೋನ್‌ಗಳು, 2,590 ರೂಪಾಯಿ ನಗದು ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Bengaluru police have arrested two men for allegedly using a meat shop as a base to sell and distribute the banned drug MDMA, police said.