ಅರಬ್ಬೀ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಡ್ರಗ್ಸ್ ರಾಕೆಟ್ ಭೇದಿಸಿದ ಕೋಸ್ಟ್ ಗಾರ್ಡ್ ; 3 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ, ಐವರು ಪಾಕಿಸ್ತಾನಿ ಪ್ರಜೆಗಳ ಬಂಧನ

30-09-26 10:49 am       HK News Staffer   ದೇಶ - ವಿದೇಶ

ಅರಬ್ಬೀ ಸಮುದ್ರದ ಮೂಲಕ ಭಾರತಕ್ಕೆ ಭಾರೀ ಪ್ರಮಾಣದ ಡ್ರಗ್ಸ್ ಪೂರೈಸಲು ಬಂದಿದ್ದ ಇರಾನಿ ಬೋಟನ್ನು ಪತ್ತೆಹಚ್ಚಿದ ಕೋಸ್ಟ್ ಗಾರ್ಡ್ ಪಡೆಯು ಸುಮಾರು 3 ಸಾವಿರ ಕೋಟಿ ಮೌಲ್ಯದ ಹೆರಾಯಿನ್ ಮತ್ತು ಮೆಥಾಂಫೆಟಮೈನ್ ವಶಕ್ಕೆ ಪಡೆದು ಐವರು ಪಾಕ್ ಪ್ರಜೆಗಳನ್ನು ಬಂಧಿಸಿದ್ದಾರೆ.

ಮಂಗಳೂರು, ಸೆ.30: ಅರಬ್ಬೀ ಸಮುದ್ರದ ಮೂಲಕ ಭಾರತಕ್ಕೆ ಭಾರೀ ಪ್ರಮಾಣದ ಡ್ರಗ್ಸ್ ಪೂರೈಸಲು ಬಂದಿದ್ದ ಇರಾನಿ ಬೋಟನ್ನು ಪತ್ತೆಹಚ್ಚಿದ ಕೋಸ್ಟ್ ಗಾರ್ಡ್ ಪಡೆಯು ಸುಮಾರು 3 ಸಾವಿರ ಕೋಟಿ ಮೌಲ್ಯದ ಹೆರಾಯಿನ್ ಮತ್ತು ಮೆಥಾಂಫೆಟಮೈನ್ ವಶಕ್ಕೆ ಪಡೆದು ಐವರು ಪಾಕ್ ಪ್ರಜೆಗಳನ್ನು ಬಂಧಿಸಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ಲಕ್ಷದ್ವೀಪಕ್ಕಿಂತ ಪಶ್ಚಿಮಕ್ಕಿರುವ ಪ್ರದೇಶದಲ್ಲಿ ಇರಾನಿ ಬೋಟ್ ಬಗ್ಗೆ ಅನುಮಾನಗೊಂಡು ಕೋಸ್ಟ್ ಗಾರ್ಡ್ ಮತ್ತು ಗುಜರಾತಿ ಏಂಟಿ ಟೆರರಿಸ್ಟ್ ಸ್ಕ್ವಾಡ್ ಸೆ.25ರಂದು ಜಂಟಿಯಾಗಿ ದಾಳಿ ನಡೆಸಿತ್ತು. ಈ ವೇಳೆ, ಬೋಟಿನಲ್ಲಿ ಅಡಗಿಸಿಟ್ಟಿದ್ದ 526 ಕಿಲೋದಷ್ಟು ಹೆರಾಯಿನ್ ಮತ್ತು ಮೆಥಾಂಫೆಟಮೈನ್ ಪತ್ತೆಯಾಗಿದ್ದು ಇದರ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 3 ಸಾವಿರ ಕೋಟಿಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಆಮೂಲಕ ಅಂತಾರಾಷ್ಟ್ರೀಯ ಮಟ್ಟದ ನಾರ್ಕೋ ಟೆರರಿಸಂ ನೆಟ್ವರ್ಕ್ ಅನ್ನು ಕೋಸ್ಟ್ ಗಾರ್ಡ್ ಭೇದಿಸಿದೆ.

ಬೋಟಿನಲ್ಲಿದ್ದ ಶಸ್ತ್ರಾಸ್ತ್ರ ಸಜ್ಜಿತ ಐವರು ಪಾಕಿಸ್ತಾನಿ ಪ್ರಜೆಗಳನ್ನು ವಶಕ್ಕೆ ಪಡೆದು ಮುಂಬೈಗೆ ಒಯ್ಯಲಾಗಿದ್ದು, ವಿವಿಧ ತನಿಖಾ ಏಜನ್ಸಿಗಳ ವಿಚಾರಣೆಗೆ ಒಪ್ಪಿಸಲಾಗಿದೆ. ಕೋಸ್ಟ್ ಗಾರ್ಡ್ ಮಟ್ಟಿಗೆ ಅಂತಾರಾಷ್ಟ್ರೀಯ ಸಮುದ್ರ ಮಾರ್ಗದಲ್ಲಿ ಅತಿದೊಡ್ಡ ಕಾರ್ಯಾಚರಣೆ ಇದಾಗಿದ್ದು, ಕೇಂದ್ರ ಸರಕಾರದ ನಶಾ ಮುಕ್ತ ಅಭಿಯಾನದ ಭಾಗವಾಗಿ ಮಹತ್ವದ ಸಾಧನೆ ಮಾಡಲಾಗಿದೆ ಎಂದು ಕೋಸ್ಟ್ ಗಾರ್ಡ್ ಪಡೆಯ ಚೀಫ್ ಪಿಆರ್ ಓ ಕಮಾಂಡೆಂಟ್ ಅಮಿತ್ ಉನಿಯಾಲ್ ತಿಳಿಸಿದ್ದಾರೆ.

ಪಾಕಿಸ್ತಾನ ಕಡೆಯಿಂದ ಗುಜರಾತ್ ಮೂಲಕ ನಡೆಯುತ್ತಿದ್ದ ಡ್ರಗ್ಸ್ ರಾಕೆಟ್ ಬಗ್ಗೆ ಅಲ್ಲಿನ ಪೊಲೀಸರು ತೀವ್ರ ನಿಗಾ ಇಟ್ಟಿದ್ದರು. ಹಾಗಾಗಿ, ಭಾರತದ ದಕ್ಷಿಣ ರಾಜ್ಯಗಳ ಮೂಲಕ ಡ್ರಗ್ಸ್ ಕಳ್ಳಸಾಗಣೆಯ ಬಗ್ಗೆ ಅನುಮಾನಗಳಿದ್ದವು. ಗುಜರಾತ್ ಎಟಿಎಸ್ ಸೂಚನೆಯಂತೆ ಇಂಡಿಯನ್ ಕೋಸ್ಟ್ ಗಾರ್ಡ್ ಪಡೆಯು ಅರಬ್ಬಿ ಸಮುದ್ರದಲ್ಲಿ ಜಲಮಾರ್ಗದ ಸರಕು ಸಾಗಣೆ ವಿಚಾರದಲ್ಲಿ ತೀವ್ರ ನಿಗಾ ವಹಿಸಿತ್ತು. ಆಳಸಮುದ್ರದಲ್ಲಿ ನಿಗಾ ವಹಿಸಿದ್ದಾಗಲೇ ಇರಾನ್ ಬೋಟ್ ಪತ್ತೆಯಾಗಿದ್ದು ಮೀನುಗಾರಿಕೆ ನೆಪದಲ್ಲಿ ಲಕ್ಷದ್ಪೀಪಕ್ಕೆ ಡ್ರಗ್ಸ್ ತಲುಪಿಸುವ ಹುನ್ನಾರ ಹೊಂದಿದ್ದ ಪಾಕಿಸ್ತಾನದ ಕಂತ್ರಿಗಳನ್ನು ಕೋಸ್ಟ್ ಗಾರ್ಡ್ ಬಂಧಿಸಿದ್ದು, ನಾರ್ಕೋ ಟೆರರಿಸಂ ನೆಟ್ವರ್ಕ್ ಭೇದಿಸಿದೆ.

The Indian Coast Guard, in a joint operation with the Gujarat Anti-Terrorism Squad (ATS), intercepted an Iranian dhow in the Arabian Sea and seized around 526 kg of heroin and methamphetamine valued at more than ₹3,000 crore in the international market. Five Pakistani nationals aboard the vessel were detained.