ಬ್ರೇಕಿಂಗ್ ನ್ಯೂಸ್
02-05-22 01:35 pm Source: Vijayakarnataka ಸಿನಿಮಾ
'ರಾಕಿ ಭಾಯ್' ಯಶ್ ಅಭಿನಯದ 'ಕೆಜಿಎಫ್: ಚಾಪ್ಟರ್ 2' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ತನ್ನ ದರ್ಬಾರ್ ಅನ್ನು ಮುಂದುವರಿಸಿದೆ. ಈಗಾಗಲೇ ಹಲವು ದಾಖಲೆಗಳನ್ನು ಸೃಷ್ಟಿಸಿರುವ ಈ ಸಿನಿಮಾ ತೆರೆಕಂಡು 18 ದಿನಗಳೇ ಕಳೆದಿವೆ. ಆದರೂ ಕೂಡ ಇದರ ಹವಾ ಮಾತ್ರ ಇನ್ನೂ ಕಮ್ಮಿ ಆಗಿಲ್ಲ. ಆಗುವ ಸಾಧ್ಯತೆಗಳೂ ಇಲ್ಲ! ಈಗಲೂ ಪ್ರತಿದಿನ ವಿಶ್ವಾದ್ಯಂತ 15-20 ಕೋಟಿ ರೂ. ಗಳಿಕೆ ಆಗುತ್ತಲೇ ಇದೆ. ವೀಕೆಂಡ್ನಲ್ಲಿ ಈ ಸಂಖ್ಯೆ ಇನ್ನೂ ಜಾಸ್ತಿ ಆಗುತ್ತಿದೆ. ಈ ಮಧ್ಯೆ ಕಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಮತ್ತೊಂದು ದಾಖಲೆ 'ಕೆಜಿಎಎಫ್: ಚಾಪ್ಟರ್ 2' ಕಡೆಯಿಂದ ಸೃಷ್ಠಿಯಾಗಿದೆ. ಹೌದು, ತಮಿಳುನಾಡಿನಲ್ಲಿ 100 ಕೋಟಿ ರೂ. ಗಳಿಕೆ ಮಾಡಿದ ಮೊದಲ ಕರ್ನಾಟಕದ ಸಿನಿಮಾ ಎಂಬ ಖ್ಯಾತಿಗೆ 'ಕೆಜಿಎಫ್: ಚಾಪ್ಟರ್ 2' ಪಾತ್ರವಾಗಿದೆ.
ಕಾಲಿವುಡ್ನಲ್ಲಿ ಹೊಸ ದಾಖಲೆ
ಸಾಮಾನ್ಯವಾಗಿ ತಮಿಳು ಸಿನಿಮಾಗಳೇ ತಮಿಳುನಾಡಿನಲ್ಲಿ 100 ಕೋಟಿ ರೂ. ಗಳಿಕೆ ಮಾಡಲು ಕಷ್ಟಪಡುತ್ತವೆ. ಅಲ್ಲಿನ ಸ್ಟಾರ್ ಸಿನಿಮಾಗಳು ಬಿಟ್ಟರೆ ಬೇರೆ ಸಿನಿಮಾಗಳಿಗೆ ಈ ದಾಖಲೆ ಮಾಡುವುದು ಕಷ್ಟವಿದೆ. ಆದರೆ ಕನ್ನಡದಿಂದ ತಮಿಳಿಗೆ ಡಬ್ ಆಗಿ, ಅಲ್ಲಿ 'ಬೀಸ್ಟ್'ನಂತಹ ಸ್ಟಾರ್ ನಟರ ಸಿನಿಮಾ ಇದ್ದಾಗಿಯೂ ಕೂಡ 'ಕೆಜಿಎಫ್ 2' ತನ್ನ ಹವಾ ತೋರಿಸಿದೆ. ಹದಿನೇಳು ದಿನಕ್ಕೆ ತಮಿಳುನಾಡು ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ 100 ಕೋಟಿ ರೂ. ಗಳಿಸಿ ಮುಂದೆ ಸಾಗಿದೆ.
'ಕೆಜಿಎಫ್: ಚಾಪ್ಟರ್ 2' ಸಿನಿಮಾವು ತಮಿಳುನಾಡು ಬಾಕ್ಸ್ ಆಫೀಸ್ನಲ್ಲಿ ಆರಂಭದಿಂದಲೂ ಉತ್ತಮವಾಗಿಯೇ ಗಳಿಕೆ ಮಾಡಿದೆ. ಮೊದಲ ವಾರ 59.84 ಕೋಟಿ ರೂ. ಗಳಿಸಿದರೆ, ಎರಡನೇ ವಾರ 32.65 ಕೋಟಿ ರೂ. ಗಳಿಸಿತ್ತು. ಇದೀಗ ಮೂರನೇ ವಾರಕ್ಕೆ ಒಟ್ಟಾರೆ ಗಳಿಕೆ 100 ಕೋಟಿ ರೂ. ದಾಟಿದೆ. ಕಳೆದ ಏಪ್ರಿಲ್ 30ರಂದು 'ಕೆಜಿಎಫ್ 2' ಸಿನಿಮಾ ಬರೋಬ್ಬರಿ 4.53 ಕೋಟಿ ರೂ. ಗಳಿಸಿದ್ದರೆ, 'ದಳಪತಿ' ವಿಜಯ್ ಅವರ 'ಬೀಸ್ಟ್' ಸಿನಿಮಾ ಗಳಿಸಿದ್ದು ಕೇವಲ 12 ಲಕ್ಷ ರೂ.! ವಿಜಯ್ ಅವರಂತಹ ಸ್ಟಾರ್ ನಟ ಇದ್ದರೂ ಕೂಡ 'ಬೀಸ್ಟ್' ತಮಿಳುನಾಡು ಬಾಕ್ಸ್ ಆಫೀಸ್ನಲ್ಲಿ ಈವರೆಗೂ ಗಳಿಸಿರುವುದು 64.97 ಕೋಟಿ ರೂ. ಮಾತ್ರ. ಈ ಸಿನಿಮಾ ಶತಕೋಟಿ ಕ್ಲಬ್ಗೆ ಸೇರುವ ಸಾಧ್ಯತೆಯೇ ಇಲ್ಲ. ಆದರೆ ಆ ಸಾಧನೆಯನ್ನು ಕರ್ನಾಟಕದ ಕೆಜಿಎಫ್ 2 ಮಾಡಿದೆ.
'ದಂಗಲ್' ದಾಖಲೆ ಮುರಿಯಲು ರಾಕಿ ಭಾಯ್ ರೆಡಿ
ಬಾಲಿವುಡ್ನಲ್ಲಿ ಅತ್ಯಧಿಕ ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನ 'ಬಾಹುಬಲಿ 2'ಗೆ ಇದೆ. ಈ ಸಿನಿಮಾವು 510.99 ಕೋಟಿ ರೂ. ಗಳಿಸಿದೆ. ನಂತರದ ಸ್ಥಾನ ಆಮಿರ್ ಖಾನ್ ಅವರ 'ದಂಗಲ್'ಗೆ ಇದೆ. ಈ ಸಿನಿಮಾವು 387.38 ಕೋಟಿ ರೂ. ಗಳಿಸಿದೆ. ಇದೀಗ ಯಶ್ ಅವರ 'ಕೆಜಿಎಫ್: ಚಾಪ್ಟರ್ 2' ಸಿನಿಮಾವು 369.58 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿದೆ. ದಂಗಲ್ ದಾಖಲೆ ಬ್ರೇಕ್ ಮಾಡಲು ಇನ್ನೂ 17 ಕೋಟಿ ರೂ. ಗಳಿಕೆ ಆಗಬೇಕಿದೆ. ಈಗ ಈದ್ ಹಬ್ಬದ ರಜೆ ಸಿಗುವುದರಿಂದ ಇನ್ನೆರಡು ದಿನಗಳಲ್ಲಿ ದಂಗಲ್ ದಾಖಲೆಯನ್ನು ಕೆಜಿಎಫ್ 2 ಬ್ರೇಕ್ ಮಾಡಲಿದೆ.
Yash Sanjay Dutt Raveena Tandon Starrer Kgf Chapter 2 Movie Bollywood And Kollywood Box Office Collection Report.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm