ಬ್ರೇಕಿಂಗ್ ನ್ಯೂಸ್
31-10-26 02:25 pm HK News Staffer ಕರಾವಳಿ
ಉಳ್ಳಾಲ, ಅ. 31: ಉದ್ಘಾಟನೆಗೂ ಮುನ್ನವೇ ರಾಷ್ಟ್ರೀಯ ಹೆದ್ದಾರಿ ಪಾಲಾಗುವ ಹಂತದಲ್ಲಿರುವ ಕೋಟೆಕಾರಿನ ಇಂದಿರಾ ಕ್ಯಾಂಟೀನ್ ಬಗ್ಗೆ ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಆಡಳಿತ ಬಿಜೆಪಿ ಹಾಗೂ ವಿಪಕ್ಷ ಸದಸ್ಯರು ತಟಸ್ಥರಾಗಿದ್ದರೆ, ಬಿಜೆಪಿಯಿಂದ ಉಚ್ಚಾಟಿತ ಸದಸ್ಯರಾದ ಸುಜಿತ್ ಮಾಡೂರು ಮಾತ್ರ ಕ್ಯಾಂಟೀನ್ಗೆ ಜನರ ತೆರಿಗೆಯ 15 ಲಕ್ಷ ರೂಪಾಯಿ ಅನುದಾನವನ್ನು ವಿನಿಯೋಗಿಸಿ ದುರುಪಯೋಗ ಪಡಿಸಿದವರ ವಿರುದ್ಧ ಲೋಕಾಯುಕ್ತ ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕೋಟೆಕಾರ್ ಹೆದ್ದಾರಿ ಬದಿಯಲ್ಲಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿಗಾಗಿ ತೆರವುಗೊಳ್ಳಲಿದ್ದು, ಕ್ಯಾಂಟೀನ್ ಗೆ ಆವರಣ ಗೋಡೆ, ಶೌಚಾಲಯ ನಿರ್ಮಾಣಕ್ಕಾಗಿ ಪಟ್ಟಣ ಪಂಚಾಯತ್ ಹದಿನೈದು ಲಕ್ಷ ರೂಪಾಯಿ ಅನುದಾನ ದುರುಪಯೋಗ ಪಡಿಸಲಾಗಿರುವ ವಿಚಾರವು ಕಳೆದ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದ್ದು, ಆ ನಿಟ್ಟಿನಲ್ಲಿ ಈ ಪ್ರಕರಣವನ್ನು ಲೋಕಾಯುಕ್ತಕ್ಕೆ ನೀಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ಆದರೆ ಲೋಕಾಯುಕ್ತಕ್ಕೆ ದೂರು ನೀಡುವ ನಿರ್ಣಯವನ್ನು ಕೈಬಿಡಬೇಕೆಂದು ವಿಪಕ್ಷ ನಾಯಕರಾದ ಅಹಮ್ಮದ್ ಬಾವ ಅಜ್ಜಿನಡ್ಕ ಸಭೆಯಲ್ಲಿ ಮನವಿ ಮಾಡಿದ್ದಲ್ಲದೆ, ಇಂತಹ ನಡೆಯಿಂದ ನಮ್ಮ ಪಂಚಾಯತ್ ಆಡಳಿತದ ವಿರುದ್ಧವೇ ಲೋಕಾಯುಕ್ತ ತನಿಖೆ ನಡೆಸುವ ಪರಿಸ್ಥಿತಿ ಬಂದೊದಗುತ್ತದೆಯೆಂದು ಕಳವಳ ವ್ಯಕ್ತಪಡಿಸಿದರು. ಇಂದಿರಾ ಕ್ಯಾಂಟೀನ್ ನಿರ್ಮಾಣಗೊಂಡ ಪ್ರದೇಶವನ್ನ ಸರಕಾರಿ ಜಾಗ ಅಂತ ಗುರುತಿಸಿ ಅಲ್ಲಿ ಉದ್ದೇಶಿತ ಕ್ಯಾಂಟೀನ್ ನಿರ್ಮಿಸಲು ಅವಕಾಶ ಮಾಡಿ ಕೊಟ್ಟಿದ್ದೇವೆ. ಆರ್ ಟಿಸಿಯಲ್ಲೂ ಕ್ಯಾಂಟಿನ್ ನಿರ್ಮಿತ ಪ್ರದೇಶವು ಸರಕಾರಿ ಜಾಗವೆಂದೇ ಉಲ್ಲೇಖವಿದೆ. ಇಂದಿರಾ ಕ್ಯಾಂಟಿನನ್ನು ಉಳಿಸಲು ತಾಂತ್ರಿಕವಾಗಿ ನಾವೆಲ್ಲರೂ ಒಟ್ಟು ಸೇರಿ ಪ್ರಯತ್ನಿಸೋಣವೆಂದರು. ವಿಪಕ್ಷ ನಾಯಕರ ನಿಲುವಿಗೆ ಪಕ್ಷೇತರ ಸದಸ್ಯರಾದ ಹರೀಶ್ ರಾವ್ ಕೂಡ ಧ್ವನಿಗೂಡಿಸಿ ಬೆಂಬಲಿಸಿದರು.





ಈ ವೇಳೆ ಬಿಜೆಪಿಯಿಂದ ಉಚ್ಚಾಟಿಸಲ್ಪಟ್ಟ ಸದಸ್ಯರಾದ ಸುಜಿತ್ ಮಾಡೂರು ಮಾತನಾಡಿ ಎನ್ಒಸಿ ಇಲ್ಲದೆ ಹೆದ್ದಾರಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿರುವುದು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಈ ಬಗ್ಗೆ ಸಮರ್ಪಕವಾಗಿ ಪರಿಶೀಲನೆ ನಡೆಸದೆ ಪಟ್ಟಣ ಪಂಚಾಯತ್ ನಿಂದ ತರಾತುರಿಯಲ್ಲಿ ಟೆಂಡರ್ ಕರೆದು ಹೇಗೆ ಅನುದಾನ ಕೊಟ್ರಿ ಎಂದು ಮುಖ್ಯಾಧಿಕಾರಿ ಮಾಲಿನಿಯವರನ್ನ ಪ್ರಶ್ನಿಸಿದರು. ಹೆದ್ದಾರಿ ನಡುವಲ್ಲಿ ಮನೆ ನಿರ್ಮಿಸಬೇಕೆಂದರೂ ನೀವು ಅನುಮತಿ ನೀಡುತ್ತೀರಾ..? ನಾನು ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಆರಂಭದಲ್ಲೆ ಆಕ್ಷೇಪ ವ್ಯಕ್ತಪಡಿಸಿದ್ದೆ. ಪಂಚಾಯತ್ ಅನುದಾನ ವಿನಿಯೋಗಿಸೋದಾದರೆ ಕ್ಯಾಂಟಿನ್ಗೆ ವಾಜಪೇಯಿ ಅವರ ಹೆಸರನ್ನ ಕೂಡ ಇಡುವಂತೆ ಒತ್ತಾಯಿಸಿದ್ದೆ. ಕ್ಯಾಂಟೀನ್ ತೆರವಿನಿಂದ ರಾಜ್ಯ ಸರಕಾರಕ್ಕೆ ಯಾವುದೇ ನಷ್ಟವಿಲ್ಲ. ಕ್ಯಾಂಟಿನ್ ನಿರ್ಮಾಣಕ್ಕೆ ಬಳಸಲಾದ ಪರಿಕರಗಳನ್ನ ಕಳಚಿ ಬೇರೆಡೆಗೆ ಸ್ಥಳಾಂತರಿಸಲು ಸಾಧ್ಯವಿದೆ. ಆದರೆ ಪಂಚಾಯತ್ ಅನುದಾನದಲ್ಲಿ ನಿರ್ಮಾಣಗೊಂಡ ಶೌಚಾಲಯ, ಆವರಣ ಗೋಡೆಗಳನ್ನ ಬೇರೆಡೆಗೆ ಸ್ಥಳಾಂತರಿಸಲು ಸಾಧ್ಯವೇ? ಪಂಚಾಯತ್ ಅಧ್ಯಕ್ಷರು ಕೂಡ ಹಿಂದು ಮುಂದು ನೋಡದೆ ಟೆಂಡರಿಗೆ ಸಹಿ ಹಾಕಿದ್ದು, ಈ ವಿಚಾರದಲ್ಲಿ ಅಧ್ಯಕ್ಷರ ಸಹಿತ ಅಧಿಕಾರಿಗಳನ್ನ ಲೋಕಾಯುಕ್ತ ತನಿಖೆಗೊಳಪಡಿಸಬೇಕಾಗಿದೆ ಎಂದು ಆಗ್ರಹಿಸಿದರು.
ಜನರ ತೆರಿಗೆಯ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣಗೊಂಡಿರುವ ಕ್ಯಾಂಟೀನನ್ನು ಉಳಿಸೋದಾದರೆ ನನ್ನ ಆಕ್ಷೇಪವೇನೂ ಇಲ್ಲ. ನಾವು ಭ್ರಷ್ಟಾಚಾರ ಎಸಗದಿದ್ದರೆ ಲೋಕಾಯುಕ್ತ ತನಿಖೆಗೆ ನೀಡಲು ಭಯವೇಕೆ. ನಿಮ್ಮ ಸ್ವಂತ ಹಣವನ್ನು ಈ ರೀತಿ ದುರಪಯೋಗ ಮಾಡುತ್ತೀರಾ ಎಂದು ಮುಖ್ಯಾಧಿಕಾರಿಗಳನ್ನ ಪ್ರಶ್ನಿಸಿದರು. ನಮಗೆ ವಾರ್ಡ್ ಅಭಿವೃದ್ಧಿ ನಡೆಸಲು ಮಾತ್ರ ಪಂಚಾಯತಲ್ಲಿ ಅನುದಾನವಿಲ್ಲ. ಇಷ್ಟೊಂದು ಗಂಭೀರ ವಿಚಾರದಲ್ಲಿ ನಾನೊಬ್ಬನೆ ಧ್ವನಿ ಎತ್ತುತ್ತಿದ್ದೇನೆಯೇ ಹೊರತು ಬಹುತೇಕ ಕೌನ್ಸಿಲರ್ಗಳು ಯಾಕೆ ಮೌನವಾಗಿದ್ದಾರೆಂಬುವುದೇ ಗೊತ್ತಾಗುತ್ತಿಲ್ಲವೆಂದರು.
ಸುಜಿತ್ ಅವರ ವಿರುದ್ಧ ಹರಿಹಾಯ್ದ ವಿಪಕ್ಷ ನಾಯಕ ಅಹ್ಮದ್ ಬಾವಾ ಅವರು ಈ ಸದಸ್ಯನಿಗೆ ಕಡಿವಾಣ ಹಾಕಲೇಬೇಕಿದೆ. ಇದುವರೆಗೆ ಇವರ ಮಾತಿನಿಂದ ಏನೂ ಲಾಭ ಆಗಿಲ್ಲ. ಈತ ಒಂದು ರಾಷ್ಟ್ರೀಯ ಪಕ್ಷದಿಂದ ಉಚ್ಛಾಟನೆಗೊಂಡ ಸದಸ್ಯನೆಂದು ಕುಟುಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಜಿತ್ ಅವರು ವಿಪಕ್ಷ ನಾಯಕರು ಹಿರಿಯರಾಗಿದ್ದು ಅನೇಕ ವರ್ಷಗಳ ರಾಜಕೀಯ ಅನುಭವ ಹೊಂದಿರುತ್ತಾರೆ. ಅವರು ಧರಿಸಿರುವ ಶ್ವೇತ ವಸ್ತ್ರಕ್ಕೆ ಇದುವರೆಗೂ ಯಾವುದೇ ಭ್ರಷ್ಟಾಚಾರದ ಕಲೆಗಳೂ ಅಂಟಿರಲಿಕ್ಕಿಲ್ಲ. ಆದರೆ ಈ ವಿಚಾರದಲ್ಲಿ ವಿಪಕ್ಷ ನಾಯಕರು ಅಧಿಕಾರಿಗಳೊಂದಿಗೆ ಶಾಮೀಲಾಗಿದ್ದಾರ ಅನ್ನುವ ಅನುಮಾನ ಕಾಡುತ್ತಿದೆಯೆಂದರು.
ಈ ವೇಳೆ ಮಧ್ಯ ಪ್ರವೇಶಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಕುಸಾಲ್ ನಗರ ಮಾತನಾಡಿ ಯಾವುದೇ ಸದಸ್ಯರ ಆಕ್ಷೇಪ ಇಲ್ಲದ ಕಾರಣ ಹದಿನೇಳು ಮಂದಿ ಸದಸ್ಯರ ಸರ್ವಾನುಮತದಿಂದ ಇಂದಿರಾ ಕ್ಯಾಂಟಿನ್ಗೆ ಅನುದಾನ ನೀಡಲು ನಿರ್ಣಯ ಕೈಗೊಳ್ಳಲಾಗಿತ್ತು. ಈಗ ಲೋಕಾಯುಕ್ತ ತನಿಖೆಗೆ ಕೊಡುವುದು ಸರಿಯಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕುತ್ತರಿಸಿದ ಸುಜಿತ್ ಅವರು ಕ್ಯಾಂಟೀನ್ ಅನುದಾನ ಪ್ರಸ್ತಾಪ ಸ್ಥಿರೀಕರಣ ಹಂತದಲ್ಲಿ ನಾನು ಮತ್ತು ಸದಸ್ಯರಾದ ರಾಘವ ಗಟ್ಟಿ ಆಕ್ಷೇಪ ಎತ್ತಿದ್ದೆವು. ಅದನ್ನ ಅಧಿಕಾರಿಗಳು ಮಾತ್ರ ಸಾಮಾನ್ಯ ಸಭೆ ನಿರ್ಣಯದಲ್ಲಿ ನಮೂದಿಸಿಲ್ಲವೆಂದರು.
ಈ ವೇಳೆ ವಿಪಕ್ಷ ಸದಸ್ಯ ಇಸಾಕ್ ಅವರು ಮಾತನಾಡಿ ಇಂದಿರಾ ಕ್ಯಾಂಟೀನ್ ಅನುದಾನ ದುರುಪಯೋಗದ ಬಗ್ಗೆ ಸದಸ್ಯ ಸುಜಿತ್ ಅವರು ಸಭೆಯಲ್ಲಿ ಪ್ರಸ್ತಾಪ ಮಾತ್ರ ಮಾಡಿದ್ದರೇ ಹೊರತು ಈ ಬಗ್ಗೆ ಚರ್ಚೆ ನಡೆದಿಲ್ಲ.ಯಾವುದೇ ಚರ್ಚೆ ನಡೆಯದೆ ಲೋಕಾಯುಕ್ತಕ್ಕೆ ನೀಡುವ ನಿರ್ಣಯವನ್ನ ಹೇಗೆ ಕೈಗೊಳ್ಳಲಾಯಿತೆಂದು ಅಧ್ಯಕ್ಷರಲ್ಲಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ದಿವ್ಯ ಶೆಟ್ಟಿ ಇಂದಿರಾ ಕ್ಯಾಂಟೀನ್ಗೆ ಅನುದಾನ ಕೊಟ್ಟ ವಿಚಾರವಲ್ಲ,ಕ್ಯಾಂಟೀನ್ ನಿರ್ಮಾಣಕ್ಕೆ ಜಾಗ ಗುರುತಿಸಿದ ಲೋಪದಡಿ ಲೋಕಾಯುಕ್ತ ತನಿಖೆಗೆ ನಿರ್ಣಯ ಕೈಗೊಳ್ಳಲಾಗಿದೆಯೆಂದರು.
30-10-26 08:26 pm
HK News
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
'ಮೈಸೂರು ಅರಮನೆ ಸರ್ಕಾರಕ್ಕೆ ಸೇರಿದ್ದು' ತನ್ನ ಹೇಳಿಕ...
28-10-26 10:52 pm
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
31-10-26 02:25 pm
HK News Staffer
ಸೌಜನ್ಯಾ ಮರು ತನಿಖೆ ; ಎಸ್ಐಟಿ ಮುಖ್ಯಸ್ಥರಾಗಿ ಚೇತನ್...
30-10-26 12:51 pm
ಸೌಜನ್ಯಾ ಪ್ರಕರಣ ತನಿಖೆಯಲ್ಲಿ ಭಾಗಿಯಾಗಿದ್ದ ಎಲ್ಲ ಪೊ...
30-10-26 12:19 pm
UPSCಯಲ್ಲಿ 42ನೇ ರ್ಯಾಂಕ್ನಿಂದ ರಫೇಲ್ ಪೈಲಟ್ ವರೆ...
30-10-26 12:16 pm
ಕುಸುಮಾವತಿಯೇ, ಇಂದಿರಾವತಿಯೇ ? ಸರ್ಕಾರಿ ಜಮೀನು ಅಕ್ರ...
29-10-26 08:19 pm
31-10-26 01:16 pm
HK News Staffer
ಕಾರವಾರದ ಮುದಗಾ ಬಂದರಿನಲ್ಲಿ ಮತ್ತೆ ವಿಷಾನಿಲ ದುರಂತ:...
31-10-26 01:05 pm
ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್ ; ಕಾಂಗ್ರೆ...
30-10-26 11:01 pm
Cyprian Pinto, Mangalore: 50ಕ್ಕೂ ಹೆಚ್ಚು ಬಾಲಕರ...
30-10-26 09:57 pm
ಆನ್ಲೈನಲ್ಲಿ ಕೇರಳ ಲಾಟರಿ ಗೆದ್ದ ಮಂಗಳೂರಿನ ವ್ಯಕ್ತಿಗ...
30-10-26 05:16 pm