ಬ್ರೇಕಿಂಗ್ ನ್ಯೂಸ್
20-10-26 01:18 pm HK News Staffer ದೇಶ - ವಿದೇಶ
ನಾಗಪುರ, ಅ.20: ಭಾರತದಲ್ಲಿ ಬೀದಿ ಪ್ರತಿಭಟನೆಗಳ ಮೂಲಕ 'ಆಡಳಿತ ಬದಲಾವಣೆ' ಮಾಡಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಆರ್ಎಸ್ಎಸ್ನ ವಾರ್ಷಿಕ ವಿಜಯದಶಮಿ ಉತ್ಸವದ ಭಾಷಣದಲ್ಲಿ ಅವರು ಈ ಮಹತ್ವದ ಹೇಳಿಕೆ ನೀಡಿದ್ದಾರೆ.
ಫ್ರಾನ್ಸ್, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಆಗಿರುವ ಬೆಳವಣಿಗೆಯಿಂದ ಪ್ರಭಾವಿತರಾಗಿ ಈ ಪ್ರತಿಭಟನೆಗಳನ್ನು ಮಾಡಲಾಗುತ್ತಿದೆ. ಆದರೆ ಇವೆಲ್ಲವೂ ದೇಶದ ಸಂವಿಧಾನದ ಅಡಿಯಲ್ಲೇ ಇರುವಂತೆ ನೋಡಿಕೊಳ್ಳಬೇಕು ಎಂದು ಭಾಗವತ್ ಹೇಳಿದರು.
ಪಶ್ಚಿಮದಲ್ಲಿ ಬಿರುಗಾಳಿಯೊಂದು ಎದ್ದಿದ್ದನ್ನು ನೋಡುತ್ತಿದ್ದೇವೆ. ಅಭಿವೃದ್ಧಿಗೊಂಡ ದೇಶಗಳೂ ಇದರಿಂದ ಬಾಧೆಗೊಳಗಾಗಿವೆ. ಫ್ರಾನ್ಸ್, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಏನಾಯಿತು ಎಂಬುದನ್ನು ನಾವು ಗಮನಿಸಬೇಕಾಗಿದೆ. ಫ್ರಾನ್ಸ್, ಬಾಂಗ್ಲಾದೇಶ ಮತ್ತು ನೇಪಾಳಗಳಲ್ಲಿ ಬೀದಿಗಿಳಿದು ಆಡಳಿತ ಬದಲಿಸಿದ ಘಟನೆಗಳನ್ನು ನಾವು ನೋಡಿದ್ದೇವೆ. ಭಾರತದಲ್ಲೂ ಅಂತಹದೇ ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಿವೆ. ಆದರೆ, ಭಾರತದಲ್ಲಿ ಆಡಳಿತ ಬದಲಾವಣೆ ಸಾಧ್ಯವಿಲ್ಲ. ಭಾರತವು ದೃಢ ಸಂಕಲ್ಪದೊಂದಿಗೆ ಸಾಗುತ್ತಿದೆ ಮತ್ತು ನಮ್ಮ ಸಮಾಜದ ಸಾಮೂಹಿಕ ಚೈತನ್ಯ ಜಾಗೃತಗೊಂಡಿದೆ ಎಂದು ಅವರು ಪ್ರತಿಪಾದಿಸಿದರು.
ಪ್ರಜಾಪ್ರಭುತ್ವದಲ್ಲಿ ಸಮಸ್ಯೆಗಳು ಉದ್ಭವಿಸಿದಾಗ ಪ್ರತಿಭಟನೆ ಸಹಜ. ಆದರೆ ಅವು ಸಮಾಜದಲ್ಲಿ ದ್ವೇಷ ಬಿತ್ತುವ ಬದಲಿಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಿರಬೇಕು. ಯಾವುದೇ ಹೋರಾಟವಾದರೂ ಅದು ಸಮಾಜದ ಸಭ್ಯತೆ ಮೀರಬಾರದು. ಕೇವಲ ಮತಬ್ಯಾಂಕ್ ರಾಜಕಾರಣ ಅಥವಾ ಅಗ್ಗದ ಜನಪ್ರಿಯತೆಗಾಗಿ ಚಳವಳಿಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಬೀದಿಗಿಳಿದು ಮಾಡುವ ಪ್ರತಿಭಟನೆಗಳಿಂದ ಮಾತ್ರ ದೇಶದ ಸಮಸ್ಯೆಗಳು ಬಗೆಹರಿಯುವುದಿಲ್ಲ. ಸಮಾಜದ ನಡುವಿನ ಸಕಾರಾತ್ಮಕ ಸಂವಾದ ಮತ್ತು ಪರಸ್ಪರ ಚರ್ಚೆಯಿಂದ ಮಾತ್ರ ನಿಜವಾದ ಪರಿಹಾರ ಸಾಧ್ಯ ಎಂದು ಭಾಗವತ್ ಕರೆ ನೀಡಿದರು.
20-10-26 06:06 pm
HK News Staffer
ಮೈಸೂರು ದಸರಾ ಕಂಬಳ ಸಂಪನ್ನ ; 16 ಗ್ರಾಂ ಚಿನ್ನ ಗೆದ್...
20-10-26 11:04 am
ಸಂಪುಟದಲ್ಲಿ ಮಹಿಳೆಗೆ ಸಿಗದ ಸ್ಥಾನ ; ಮಹಿಳಾ ಕಾಂಗ್ರ...
17-10-26 07:30 pm
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
20-10-26 01:18 pm
HK News Staffer
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
19-10-26 08:41 pm
HK News Staffer
ಸಹಕಾರಿ ಬ್ಯಾಂಕ್ ನಿರ್ದೇಶಕ ಸ್ಥಾನ 10 ವರ್ಷಕ್ಕೆ ಮಿತ...
19-10-26 07:10 pm
G I Bakery Raid, Mangalore: ಅವಧಿ ಮುಗಿದ ತಿಂಡಿಗ...
17-10-26 11:04 pm
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
20-10-26 05:06 pm
HK News Staffer
ಮಂಗಳೂರಿನ ಮಹಿಳಾ ಅಧಿಕಾರಿಗೆ ಅಶ್ಲೀಲ ವಿಡಿಯೋ ಕಳುಹಿಸ...
20-10-26 04:13 pm
ಮೊಗವೀರಪಟ್ನ ಶಾರದಾ ಮೆರವಣಿಗೆ ; ಟ್ಯಾಬ್ಲೋಗಳಿಗೆ ಬಾಂ...
20-10-26 03:10 pm
ಮೈಸೂರು ದಸರಾ ನೋಡಿ ವಾಪಸಾಗುತ್ತಿದ್ದ ವೇಳೆ ಬೆಳ್ತಂಗ...
20-10-26 10:56 am
ಉಪ್ಪಿನಂಗಡಿಯಲ್ಲಿ ತಲವಾರು ಝಳಪಿಸಿದ ಗ್ಯಾಂಗ್ ; ಕುಡಿ...
19-10-26 04:20 pm