ಬ್ರೇಕಿಂಗ್ ನ್ಯೂಸ್
30-10-26 05:16 pm HK News Staffer ಕ್ರೈಂ
ಮಂಗಳೂರು, ಅ.30: ಆನ್ಲೈನ್ ಮೂಲಕ ಕೇರಳ ರಾಜ್ಯದ ಲಾಟರಿ ವಿಜೇತರಾಗಿದ್ದೀರಿ ಎಂದು ವ್ಯಕ್ತಿಯೊಬ್ಬರನ್ನು ನಂಬಿಸಿ, ಆ ಮೊತ್ತ ಪಡೆಯುವುದಕ್ಕಾಗಿ ತೆರಿಗೆ ಇನ್ನಿತರ ಶುಲ್ಕಗಳನ್ನು ಪಾವತಿಸಬೇಕೆಂದು ಹೇಳಿ ಬರೋಬ್ಬರಿ 7 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಪೀಕಿಸಿ ವಂಚಿಸಿದ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೌಡರ್ ಕೋಟಿಂಗ್ ಶಾಪ್ ನಡೆಸಿಕೊಂಡಿರುವ ಸಂತ್ರಸ್ತ ವ್ಯಕ್ತಿ ಕಳೆದ ಸೆ.25ರಂದು ರಾತ್ರಿ 8.30 ಗಂಟೆಗೆ ಮನೆಯಲ್ಲಿ ತನ್ನ ಮೊಬೈಲ್ ಫೋನಿನಲ್ಲಿ ಫೇಸ್ ಬುಕ್ ನೋಡುತ್ತಿದ್ದಾಗ ಕೇರಳ ರಾಜ್ಯದ ಲಾಟರಿಯನ್ನು ಆನ್ ಲೈನ್ ಮೂಲಕ ಮಾರಾಟದ ಬಗ್ಗೆ ವೀಡಿಯೋ ನೋಡಿದ್ದರು. ಇದರಂತೆ, ಸೆ.27ರಂದು ಆನ್ ಲೈನ್ ಮೂಲಕ ಲಾಟರಿ ಖರೀದಿಸಲೆಂದು ಫೇಸ್ ಬುಕ್ ನಲ್ಲಿ ನೀಡಿದ್ದ ಮೊಬೈಲ್ ನಂಬರಿಗೆ ಕರೆ ಮಾಡಿದ್ದರು.
ಕರೆ ಮಾಡಿ ಲಾಟರಿ ಟಿಕೇಟ್ ಖರೀದಿಸುವ ಬಗ್ಗೆ ಮಾತನಾಡಿದ್ದು ನಂತರ ಅವರು ವಾಟ್ಸಪ್ ಮೂಲಕ ಮೊತ್ತ ಪಾವತಿಗೆ ಸ್ಕ್ಯಾನರ್ ಕಳುಹಿಸಿದ್ದರು. ಸ್ಕ್ಯಾನರ್ ಮೂಲಕ ರೂ. 200/-ವರ್ಗಾವಣೆ ಮಾಡಿದ್ದು ಟಿಕೆಟ್ ಪಡೆದಿದ್ದಾಗಿ ತಿಳಿಸಿದ್ದರು. ಅದೇ ದಿನ ಸಂಜೆ ಸುಮಾರು 4 ಗಂಟೆಗೆ ವಾಟ್ಸಪ್ ನಲ್ಲಿ ಆನ್ ಲೈನ್ ಲಾಟರಿಯಲ್ಲಿ ರೂ. 12,00,000/- ಮತ್ತು ರೂ. 5,00,000/- ಹಣ ಬಂದ ಬಗ್ಗೆ ಮೆಸೇಜ್ ಮಾಡಿದ್ದರು. ಆದರೆ ಲಾಟರಿಯಲ್ಲಿ ಬಂದ ಹಣ ಡ್ರಾ ಮಾಡಲು ಟ್ಯಾಕ್ಸ್ ಹಾಗೂ ಇತರ ಚಾರ್ಜ್ ಪಾವತಿಸಬೇಕೆಂದು ಹೇಳಿಕೊಂಡಿದ್ದು ಹಣ ಪಾವತಿಗೆ ಸೂಚಿಸಿದ್ದರು.
ಆಮೂಲಕ ಸೆ.27 ರಿಂದ ತೊಡಗಿ ಅ.27ರ ವರೆಗೆ ಬೇರೆ ಬೇರೆ ದಿನಗಳಂದು ಸಂತ್ರಸ್ತ ವ್ಯಕ್ತಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೆನರಾ ಬ್ಯಾಂಕ್ ಖಾತೆಗಳಿಂದ ಒಟ್ಟು ರೂ. 7,22,804 ರೂಪಾಯಿ ಮೊತ್ತವನ್ನು ವರ್ಗಾವಣೆ ಮಾಡಿದ್ದಾರೆ. ಆಬಳಿಕ ತಾನು ವಿವಿಧ ಶುಲ್ಕದ ರೂಪದಲ್ಲಿ ವರ್ಗಾವಣೆ ಮಾಡಿರುವ ಹಣವನ್ನು ವಾಪಾಸು ನೀಡುವಂತೆ ಕೇಳಿಕೊಂಡಿದ್ದು, ವರ್ಗಾವಣೆ ಮಾಡಿದ ಹಣವಾಗಲೀ, ಲಾಟರಿಯ ಹಣವಾಗಲೀ ನೀಡಿರುವುದಿಲ್ಲ.
ಈ ರೀತಿ ಯಾರೋ ಅಪರಿಚಿತ ವ್ಯಕ್ತಿಗಳು ಕೇರಳ ರಾಜ್ಯದ ಆನ್ ಲೈನ್ ಲಾಟರಿ ಹೆಸರಿನಲ್ಲಿ ಆನ್ ಲೈನ್ ಮೂಲಕ ಮೋಸದಿಂದ ಒಟ್ಟು ರೂ.7,22,804-ಹಣವನ್ನು ವರ್ಗಾಯಿಸಿಕೊಂಡಿದ್ದು ಆರೋಪಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
30-10-26 08:26 pm
HK News
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
'ಮೈಸೂರು ಅರಮನೆ ಸರ್ಕಾರಕ್ಕೆ ಸೇರಿದ್ದು' ತನ್ನ ಹೇಳಿಕ...
28-10-26 10:52 pm
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
31-10-26 02:25 pm
HK News Staffer
ಸೌಜನ್ಯಾ ಮರು ತನಿಖೆ ; ಎಸ್ಐಟಿ ಮುಖ್ಯಸ್ಥರಾಗಿ ಚೇತನ್...
30-10-26 12:51 pm
ಸೌಜನ್ಯಾ ಪ್ರಕರಣ ತನಿಖೆಯಲ್ಲಿ ಭಾಗಿಯಾಗಿದ್ದ ಎಲ್ಲ ಪೊ...
30-10-26 12:19 pm
UPSCಯಲ್ಲಿ 42ನೇ ರ್ಯಾಂಕ್ನಿಂದ ರಫೇಲ್ ಪೈಲಟ್ ವರೆ...
30-10-26 12:16 pm
ಕುಸುಮಾವತಿಯೇ, ಇಂದಿರಾವತಿಯೇ ? ಸರ್ಕಾರಿ ಜಮೀನು ಅಕ್ರ...
29-10-26 08:19 pm
31-10-26 01:16 pm
HK News Staffer
ಕಾರವಾರದ ಮುದಗಾ ಬಂದರಿನಲ್ಲಿ ಮತ್ತೆ ವಿಷಾನಿಲ ದುರಂತ:...
31-10-26 01:05 pm
ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್ ; ಕಾಂಗ್ರೆ...
30-10-26 11:01 pm
Cyprian Pinto, Mangalore: 50ಕ್ಕೂ ಹೆಚ್ಚು ಬಾಲಕರ...
30-10-26 09:57 pm
ಆನ್ಲೈನಲ್ಲಿ ಕೇರಳ ಲಾಟರಿ ಗೆದ್ದ ಮಂಗಳೂರಿನ ವ್ಯಕ್ತಿಗ...
30-10-26 05:16 pm