ಬ್ರೇಕಿಂಗ್ ನ್ಯೂಸ್
27-10-26 09:47 pm HK News Desk ಕರ್ನಾಟಕ
ಬೆಂಗಳೂರು, ಅ.27 ವಿಧಾನ ಪರಿಷತ್ತಿನ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರ ಸೇರಿ ಒಟ್ಟು ನಾಲ್ಕು ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಗೆಲುವು ಸಾಧಿಸಿದ್ದು ಆಡಳಿತಾರೂಢ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಎ.ಪಿ ರಂಗನಾಥ್ 908 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಐದು ಬಾರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಸೋಲು ಕಂಡಿದ್ದಾರೆ. ಎಪಿ ರಂಗನಾಥ್ ಅವರು 10,810 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ 9902 ಮತ ಪಡೆದಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಗೆಲುವು ಸಾಧಿಸಿದ್ದಾರೆ. ಮೊದಲ ಸುತ್ತಿನಲ್ಲಿ 7239, ಎರಡನೇ ಸುತ್ತಿನಲ್ಲಿ 7311 ಸೇರಿ 14,540 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮತ್ತೂರ್ ಸೋಲುಂಡಿದ್ದಾರೆ.
ಪಶ್ಚಿಮ ಪದವೀಧರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ- 2026ರ ಮತ ಎಣಿಕೆ ಕಾರ್ಯವು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದು ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಒಟ್ಟು 14,001 ಮತಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಸಂಕನೂರ 6459 ಮತಗಳು ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರು 4394 ಮತಗಳನ್ನು ಪಡೆದಿದ್ದಾರೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಸಂಕನೂರ ಎಸ್.ವಿ ಅವರು 2206 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದು ಗೆಲುವು ಖಾತ್ರಿ ಪಡಿಸಿದ್ದಾರೆ. ಆಗ್ನೇಯ ಪದವೀಧರರ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ ಮುನ್ನಡೆ ಸಾಧಿಸಿದ್ದು ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ ಹಿನ್ನಡೆಯಲ್ಲಿದ್ದಾರೆ.
ಪಶ್ಚಿಮ ಪದವೀಧರರ ಕ್ಷೇತ್ರದ ಎಣಿಕೆ ಧಾರವಾಡದಲ್ಲಿ, ಈಶಾನ್ಯ ಶಿಕ್ಷಕರ ಕ್ಷೇತ್ರದ ಎಣಿಕೆ ಕಲಬುರಗಿಯಲ್ಲಿ, ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಆಗ್ನೇಯ ಪದವೀಧರರ ಕ್ಷೇತ್ರದ ಮತ ಎಣಿಕೆ ಬೆಂಗಳೂರಲ್ಲಿ ನಡೆಯಿತು. ಅ.23ರಂದು ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
27-10-26 09:47 pm
HK News Desk
ಅರಮನೆ ಮಂಡಳಿ ಸರಕಾರದ್ದು, ಅರಮನೆ ಜಾಗವೂ ಸರಕಾರದ್ದು...
27-10-26 01:23 pm
ದೇವೇಗೌಡ್ರ ಕುಟುಂಬವನ್ನು ಮುಗಿಸಲು ಡಿಕೆಶಿಯಿಂದ 600...
26-10-26 11:55 am
Rahul Gandhi, Siddaramaiah: ಸ್ಟಿಂಗ್ ಆಪರೇಶನ್ ;...
26-10-26 11:53 am
ಸ್ಟಿಂಗ್ ಆಪರೇಶನ್ ; ಕಾಂಗ್ರೆಸ್ ನಾಯಕಿ ಕೃಪಾ ಆಳ್ವಗೆ...
24-10-26 05:35 pm
25-10-26 09:40 pm
HK News Staffer
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
27-10-26 09:30 pm
HK News Desk
Soujanya Case: ಸೌಜನ್ಯಾ ಪ್ರಕರಣದ ಮರುತನಿಖೆ ; ರುದ...
27-10-26 08:40 pm
ಮೈಸೂರನ್ನು ಬ್ರಾಂಡ್ ಮಾಡಿದವರು ರಾಜವಂಶಸ್ಥರು, ರಾಜ್ಯ...
27-10-26 03:35 pm
Mangalore Man Missing, Israel: ಉದ್ಯೋಗಕ್ಕಾಗಿ ಇ...
27-10-26 01:53 pm
ಸೌಜನ್ಯ ಪ್ರಕರಣದ ಎಸ್ಐಟಿ ಮುಖ್ಯಸ್ಥರ ಬದಲಾವಣೆಗೆ ಪಟ್...
26-10-26 03:41 pm
27-10-26 09:32 pm
HK News Staffer
ತದಡಿ ಬಂದರಿನಲ್ಲಿ ದುರಂತ ; ಬೋಟ್ ಸ್ವಚ್ಛಗೊಳಿಸುತ್ತ...
27-10-26 08:41 pm
ಮನೆ ಬ್ರೋಕರ್ ವ್ಯಕ್ತಿಯನ್ನು ಅಪಹರಿಸಿ ಬಜಾಲ್ ಬಳಿ ಕೂ...
27-10-26 07:33 pm
ದೇರಳಕಟ್ಟೆ ಕಣಚೂರು ಮೆಡಿಕಲ್ ಕಾಲೇಜಿನ ಜೂನಿಯರ್ ವಿದ್...
27-10-26 05:22 pm
ಸುರತ್ಕಲ್ ಬೀಚ್ ಬಳಿ ಕುಡಿದ ಮತ್ತಿನಲ್ಲಿ ಜಗಳ ; ಕೇಸು...
27-10-26 03:01 pm