ಬ್ರೇಕಿಂಗ್ ನ್ಯೂಸ್
27-10-26 09:32 pm HK News Staffer ಕ್ರೈಂ
ಬೆಂಗಳೂರು, ಅ.27: ಅಕ್ರಮ ಆನ್‌ಲೈನ್ ಬೆಟ್ಟಿಂಗ್ ದಂಧೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮತ್ತೆ ಬಿಗಿ ಕ್ರಮ ಕೈಗೊಂಡಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಮತ್ತು ಆತನ ಸಹಚರರಿಗೆ ಸೇರಿದ ರೂ.23.35 ಕೋಟಿ ಮೌಲ್ಯದ ಆಸ್ತಿಯನ್ನು ಬೆಂಗಳೂರು ವಲಯ ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಜಪ್ತಿಯಾದ ಆಸ್ತಿಯಲ್ಲಿ ರೂ.13.76 ಕೋಟಿ ಚರಾಸ್ತಿ ಮತ್ತು ರೂ.9.58 ಕೋಟಿ ಸ್ಥಿರಾಸ್ತಿ ಸೇರಿದೆ. ಪಿಎಂಎಲ್‌ಎ ಕಾಯ್ದೆಯಡಿ ಅ.23ರಂದು ಹೊರಡಿಸಿದ 42/2026ನೇ ಆದೇಶದಂತೆ ಈ ಕ್ರಮ ಜರುಗಿಸಲಾಗಿದೆ. ಕೆ.ಸಿ.ವೀರೇಂದ್ರ ಮತ್ತು ಆತನ ಜಾಲ King567 ಸೇರಿ ಹಲವು ಅಕ್ರಮ ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ನಡೆಸುತ್ತಿದ್ದರು. ಪೇಮೆಂಟ್ ಗೇಟ್‌ವೇ, ನಕಲಿ ಕಂಪನಿಗಳು ಮತ್ತು ಮ್ಯೂಲ್ ಖಾತೆಗಳ ಮೂಲಕ ದೇಶಾದ್ಯಂತ ಹಣ ವರ್ಗಾವಣೆ ಮಾಡಿ, ಆಟಗಾರರಿಂದ ಹಣ ಪಡೆದು ವಂಚಿಸುತ್ತಿದ್ದರು ಎಂದು ತನಿಖೆಯಲ್ಲಿ ಬಯಲಾಗಿದೆ. ಈ ಜಾಲದಿಂದ 2,300 ಕೋಟಿ ರೂಪಾಯಿಗೂ ಅಧಿಕ ಅಕ್ರಮ ಹಣ ಗಳಿಸಿದ್ದಾರೆಂದು ಅಂದಾಜಿಸಲಾಗಿದ್ದು, ಐಷಾರಾಮಿ ಆಸ್ತಿ, ವಿದೇಶಕ್ಕೆ ಅಕ್ರಮ ಹಣ ರವಾನೆ ಮತ್ತು ಹವಾಲಾ ಮೂಲಕ ಕಪ್ಪು ಹಣವನ್ನು ಬಿಳಿಯಾಗಿಸಲು ಯತ್ನಿಸಿದ್ದರು.
ಈ ಹಣದ ಒಂದು ಭಾಗ Fonepaisa Payment Solutions ಕಂಪನಿಯ ಮಾಲೀಕ ಗುಲ್ಷನ್ ಖಟ್ಟರ್ ಬಳಿ ಇತ್ತು. ಬೆಟ್ಟಿಂಗ್ ದಂಧೆಗೆ ಪೇಮೆಂಟ್ ಗೇಟ್‌ವೇ ಸೇವೆ ನೀಡಿ ಕೋಟ್ಯಂತರ ಕಮಿಷನ್ ಪಡೆದಿದ್ದ. ಆತನ ಪತ್ನಿ ನೇಹಾ ಟಂಡನ್ ಹೆಸರಿನಲ್ಲಿದ್ದ SimTech IT Solutions ಕಂಪನಿಯ ಖಾತೆಗಳಿಗೂ King567 ಹಣ ಹರಿದು ಬಂದಿರುವುದು ಪತ್ತೆಯಾಗಿದೆ.
ಇದಕ್ಕೂ ಮೊದಲು ಇಡಿ ಅಧಿಕಾರಿಗಳು ದೇಶಾದ್ಯಂತ 60ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ಅಪಾರ ನಗದು, ಚಿನ್ನ, ಬೆಳ್ಳಿ, ವಾಹನಗಳನ್ನು ವಶಪಡಿಸಿಕೊಂಡಿದ್ದು ಕೆ.ಸಿ.ವೀರೇಂದ್ರನನ್ನು ಬಂಧಿಸಿದ್ದರು. ಈಗಾಗಲೇ 177.30 ಕೋಟಿ ಆಸ್ತಿ ಜಪ್ತಿ ಮಾಡಿ ನ್ಯಾಯಾಧಿಕರಣದಿಂದ ದೃಢೀಕರಣ ಪಡೆಯಲಾಗಿದೆ. ಹೊಸ ಜಪ್ತಿ ಸೇರಿ ಒಟ್ಟು ಜಪ್ತಿ ಮೊತ್ತ 343 ಕೋಟಿ ರೂಪಾಯಿ ದಾಟಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.
27-10-26 09:47 pm
HK News Desk
ಅರಮನೆ ಮಂಡಳಿ ಸರಕಾರದ್ದು, ಅರಮನೆ ಜಾಗವೂ ಸರಕಾರದ್ದು...
27-10-26 01:23 pm
ದೇವೇಗೌಡ್ರ ಕುಟುಂಬವನ್ನು ಮುಗಿಸಲು ಡಿಕೆಶಿಯಿಂದ 600...
26-10-26 11:55 am
Rahul Gandhi, Siddaramaiah: ಸ್ಟಿಂಗ್ ಆಪರೇಶನ್ ;...
26-10-26 11:53 am
ಸ್ಟಿಂಗ್ ಆಪರೇಶನ್ ; ಕಾಂಗ್ರೆಸ್ ನಾಯಕಿ ಕೃಪಾ ಆಳ್ವಗೆ...
24-10-26 05:35 pm
25-10-26 09:40 pm
HK News Staffer
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
27-10-26 09:30 pm
HK News Desk
Soujanya Case: ಸೌಜನ್ಯಾ ಪ್ರಕರಣದ ಮರುತನಿಖೆ ; ರುದ...
27-10-26 08:40 pm
ಮೈಸೂರನ್ನು ಬ್ರಾಂಡ್ ಮಾಡಿದವರು ರಾಜವಂಶಸ್ಥರು, ರಾಜ್ಯ...
27-10-26 03:35 pm
Mangalore Man Missing, Israel: ಉದ್ಯೋಗಕ್ಕಾಗಿ ಇ...
27-10-26 01:53 pm
ಸೌಜನ್ಯ ಪ್ರಕರಣದ ಎಸ್ಐಟಿ ಮುಖ್ಯಸ್ಥರ ಬದಲಾವಣೆಗೆ ಪಟ್...
26-10-26 03:41 pm
27-10-26 09:32 pm
HK News Staffer
ತದಡಿ ಬಂದರಿನಲ್ಲಿ ದುರಂತ ; ಬೋಟ್ ಸ್ವಚ್ಛಗೊಳಿಸುತ್ತ...
27-10-26 08:41 pm
ಮನೆ ಬ್ರೋಕರ್ ವ್ಯಕ್ತಿಯನ್ನು ಅಪಹರಿಸಿ ಬಜಾಲ್ ಬಳಿ ಕೂ...
27-10-26 07:33 pm
ದೇರಳಕಟ್ಟೆ ಕಣಚೂರು ಮೆಡಿಕಲ್ ಕಾಲೇಜಿನ ಜೂನಿಯರ್ ವಿದ್...
27-10-26 05:22 pm
ಸುರತ್ಕಲ್ ಬೀಚ್ ಬಳಿ ಕುಡಿದ ಮತ್ತಿನಲ್ಲಿ ಜಗಳ ; ಕೇಸು...
27-10-26 03:01 pm