ಬ್ರೇಕಿಂಗ್ ನ್ಯೂಸ್
27-10-26 07:33 pm HK News Staffer ಕ್ರೈಂ
ಮಂಗಳೂರು, ಅ.27: ಮನೆ, ಅಂಗಡಿ ಶಾಪ್ ಬ್ರೋಕರ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ತಂಡವೊಂದು ಅಪಹರಿಸಿ ಹಲ್ಲೆ ನಡೆಸಿದ್ದಲ್ಲದೆ ನಿರ್ಜನ ಪ್ರದೇಶಕ್ಕೊಯ್ದು ಹಲ್ಲೆ ನಡೆಸಿದ ಘಟನೆ ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ದಾಖಲಾಗಿದೆ.
ಈಸಾರೋಶನ್ @ ರೋಶನ್ ಎಂಬವರು ಮನೆ, ಅಂಗಡಿ, ಬಾಡಿಗೆಗೆ ಕೊಡುವ ಬ್ರೋಕರ್ ಕೆಲಸವನ್ನು ಮಾಡಿಕೊಂಡಿದ್ದು ಅಪಹರಣಕ್ಕೀಡಾಗಿ ಹಲ್ಲೆಗೊಳಗಾದವರಾಗಿದ್ದು ಅವರಿಂದ ತಪ್ಪಿಸಿಕೊಂಡು ಬಂದು ಪೊಲೀಸ್ ದೂರು ನೀಡಿದ್ದಾರೆ. ಎರಡು ತಿಂಗಳ ಹಿಂದೆ, ಕಲ್ಲಾಪು ನಿವಾಸಿ ಶಾಕೀರ್ ಎಂಬವರಿಗೆ ಫೈರೋಜ್ ಎಂಬವರಿಗೆ ಸೇರಿದ ಪಾಂಡೇಶ್ವರದ ಬಳಿ ಇರುವ ಅಂಗಡಿಯೊಂದನ್ನು ಬಾಡಿಗೆಗೆ ಗೊತ್ತುಪಡಿಸಿದ್ದರು. ಶಾಕೀರ್ ಅವರು ಸದ್ರಿ ಅಂಗಡಿಯೊಳಗೆ ಟೈಲ್ಸ್ ಸಾಮಗ್ರಿಗಳನ್ನು ದಾಸ್ತಾನು ಮಾಡಿ ಇಟ್ಟಿದ್ದರು.
ಅ.25ರಂದು ಮಧ್ಯಾಹ್ನ ಶಾಕೀರ್ ಫೋನ್ ಮಾಡಿ, ರೋಶನ್ ಅವರನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಬಳಿ ಇರುವ ಬಸ್ ಸ್ಟ್ಯಾಂಡ್ ಬರುವಂತೆ ತಿಳಿಸಿದ್ದು 1 ಗಂಟೆ ಸುಮಾರಿಗೆ ಅಲ್ಲಿಗೆ ತೆರಳಿದ್ದರು. ಶಾಕೀರ್ ರಿಕ್ಷಾವೊಂದರಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಬಂದಿದ್ದು ರೋಶನ್ ಅವರನ್ನು ಬಲತ್ಕಾರವಾಗಿ ರಿಕ್ಷಾದಲ್ಲಿ ಕುಳ್ಳಿರಿಸಿ ಪಾಂಡೇಶ್ವರದ ಫಾರಂ ಮಾಲ್ ಬಳಿ ಇರುವ ಬಾಡಿಗೆಗೆ ಗೊತ್ತು ಮಾಡಿಸಿದ್ದ, ಅಂಗಡಿ ಬಳಿ ಕರೆದೊಯ್ದು ಅಂಗಡಿಯೊಳಗೆ ಇಟ್ಟಿದ್ದ ಟೈಲ್ಸ್ ಗಳು ಕಾಣುತ್ತಿಲ್ಲ, ಈ ಟೈಲ್ಸ್ ಗಳನ್ನು ನೀವೇ ಕೊಂಡೊಯ್ದಿರಬೇಕೆಂದು ಹೇಳಿ, ಎಲ್ಲಿ ಮಾರಾಟ ಮಾಡಿರುವುದಾಗಿ ತೋರಿಸು ಎಂದು ಕೇಳಿ ಪಿರ್ಯಾದಿದಾರರ ಕೆನ್ನೆಗೆ ಹೊಡೆದಿದ್ದಾರೆ.
ತನಗೆ ಗೊತ್ತಿಲ್ಲವೆಂದು ಹೇಳಿದರೂ, ಅವರಿಗೆ ಜೋರು ಮಾಡಿ, ನಿನ್ನನ್ನು ಬಾಯಿ ಬಿಡಿಸಲು ಗೊತ್ತಿದೆ ಎಂದು ಹೇಳಿ, ಅದೇ ರಿಕ್ಷಾದಲ್ಲಿ ಕುಳ್ಳಿರಿಸಿ ಬಜಾಲ್ ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಲ್ಲಿಗೆ ಶಾಕೀರ್ ತನ್ನ ಇಬ್ಬರು ವ್ಯಕ್ತಿಗಳನ್ನು ಕರೆಯಿಸಿ ಅವರೆಲ್ಲ ಸೇರಿ ಹಲ್ಲೆ ಮಾಡಿದ್ದು ಮರದ ದೊಣ್ಣೆಯಿಂದ ಹೊಡೆದಿದ್ದಾರೆ. ಸತ್ಯ ಹೇಳು, ಟೈಲ್ಸ್ ಎಲ್ಲಿ ಉಂಟು, ಇಲ್ಲದಿದ್ದರೇ ಕೋಲುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದಾರೆ. ಅನಂತರ ದೇರಳಕಟ್ಟೆ ಮತ್ತು ಕಣ್ಣೂರು ಬಳಿ ಇರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ಮಾಡಿದ್ದು ಬಜಾಲ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆತಂದು ಮರುದಿನ ಅ.26ರಂದು ಬೆಳಗ್ಗೆ ವರೆಗೂ ಇರಿಸಿದ್ದಾರೆ.
ಬೆಳಗ್ಗೆ ಮತ್ತೆ ಬೈಕೊಂದರಲ್ಲಿ ಕುಳ್ಳಿರಿಸಿ, ಬಜಾಲ್ ನಿಂದ ಜಪ್ಪಿನಮೊಗರು ದ್ವಾರದ ಬಳಿ ಕರೆದೊಯ್ದು ಶಾಕೀರ್ ರಿಕ್ಷಾಕ್ಕೆ ಕುಳ್ಳಿರಿಸಲು ಪ್ರಯತ್ನಿಸಿದಾಗ, ರೋಶನ್ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಕೃತ್ಯದಲ್ಲಿ ಆರೋಪಿಗಳಾದ ಶಾಕೀರ್, ಶಂಶು, ರಿಯಾಜ್ ಮತ್ತು ಅವರ ಜೊತೆಯಲ್ಲಿದ್ದ, ಇನ್ನೊಬ್ಬನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರೋಶನ್ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ.
27-10-26 01:23 pm
HK News Desk
ದೇವೇಗೌಡ್ರ ಕುಟುಂಬವನ್ನು ಮುಗಿಸಲು ಡಿಕೆಶಿಯಿಂದ 600...
26-10-26 11:55 am
Rahul Gandhi, Siddaramaiah: ಸ್ಟಿಂಗ್ ಆಪರೇಶನ್ ;...
26-10-26 11:53 am
ಸ್ಟಿಂಗ್ ಆಪರೇಶನ್ ; ಕಾಂಗ್ರೆಸ್ ನಾಯಕಿ ಕೃಪಾ ಆಳ್ವಗೆ...
24-10-26 05:35 pm
Parvez dharwad: 40 ದಿನಗಳ ನಿಗೂಢತೆ ಅಂತ್ಯ ; ಡೆತ್...
24-10-26 12:22 pm
25-10-26 09:40 pm
HK News Staffer
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
27-10-26 08:40 pm
HK News Staffer
ಮೈಸೂರನ್ನು ಬ್ರಾಂಡ್ ಮಾಡಿದವರು ರಾಜವಂಶಸ್ಥರು, ರಾಜ್ಯ...
27-10-26 03:35 pm
Mangalore Man Missing, Israel: ಉದ್ಯೋಗಕ್ಕಾಗಿ ಇ...
27-10-26 01:53 pm
ಸೌಜನ್ಯ ಪ್ರಕರಣದ ಎಸ್ಐಟಿ ಮುಖ್ಯಸ್ಥರ ಬದಲಾವಣೆಗೆ ಪಟ್...
26-10-26 03:41 pm
ನವರಾತ್ರಿಗೆ ಯಕ್ಷವೇಷ ಧರಿಸಿ ಗಳಿಸಿದ 2 ಲಕ್ಷ ದೇಣಿಗೆ...
25-10-26 10:26 pm
27-10-26 08:41 pm
HK News Staffer
ಮನೆ ಬ್ರೋಕರ್ ವ್ಯಕ್ತಿಯನ್ನು ಅಪಹರಿಸಿ ಬಜಾಲ್ ಬಳಿ ಕೂ...
27-10-26 07:33 pm
ದೇರಳಕಟ್ಟೆ ಕಣಚೂರು ಮೆಡಿಕಲ್ ಕಾಲೇಜಿನ ಜೂನಿಯರ್ ವಿದ್...
27-10-26 05:22 pm
ಸುರತ್ಕಲ್ ಬೀಚ್ ಬಳಿ ಕುಡಿದ ಮತ್ತಿನಲ್ಲಿ ಜಗಳ ; ಕೇಸು...
27-10-26 03:01 pm
ಬಸ್ ಡಿಕ್ಕಿಯಾಗಿ ಯುವಕ ದೂರಕ್ಕೆಸೆಯಲ್ಪಟ್ಟರೂ ಚಾಲಕನ...
26-10-26 09:22 pm