ಬ್ರೇಕಿಂಗ್ ನ್ಯೂಸ್
24-10-26 12:22 pm HK News Staffer ಕರ್ನಾಟಕ
ಗದಗ, ಅ.24 : ಡೆತ್ ನೋಟ್ ಬರೆದಿಟ್ಟು ನಿಗೂಢವಾಗಿ ನಾಪತ್ತೆಯಾಗಿದ್ದ ಗದಗದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (KRIDL) ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ (AEE) ಪರ್ವೀಜ್ ಧಾರವಾಡ ಅವರು ಸುಮಾರು 40 ದಿನಗಳ ಬಳಿಕ ಮಹಾರಾಷ್ಟ್ರದ ಮುಂಬೈನಲ್ಲಿ ಪತ್ತೆಯಾಗಿದ್ದಾರೆ. ಗದಗ ಪೊಲೀಸರು ಮಹಾರಾಷ್ಟ್ರದ ಮುಂಬೈನ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದು, ಇಂದು ಗದಗಕ್ಕೆ ಕರೆತಂದು ವಿಚಾರಣೆ ನಡೆಸಲಿದ್ದಾರೆ.
ಸೆಪ್ಟೆಂಬರ್ 13ರಂದು ನಾಪತ್ತೆಯಾಗಿದ್ದ ಪರ್ವೀಜ್‌ಗಾಗಿ ಗದಗ ಪೊಲೀಸರು ಹಲವು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ವಿವಿಧ ಸ್ಥಳಗಳಲ್ಲಿ ಸುಳಿವುಗಳು ದೊರೆತಿದ್ದರೂ ಅವರ ಪತ್ತೆ ಸಾಧ್ಯವಾಗಿರಲಿಲ್ಲ. ಗದಗ ಪೊಲೀಸರ ನಿರಂತರ ಕಾರ್ಯಾಚರಣೆ ಮೂಲಕ ಪರ್ವೇಜ್ ಅವರನ್ನು ಪತ್ತೆಹಚ್ಚಿದ್ದಾರೆ. ಪರ್ವೇಜ್ ಈ ಅವಧಿಯಲ್ಲಿ ಎಲ್ಲಿದ್ದರು, ಯಾವ ಕಾರಣಕ್ಕೆ ಸಂಪರ್ಕದಿಂದ ದೂರ ಉಳಿದಿದ್ದರು ಎಂಬ ಪ್ರಶ್ನೆಗಳಿಗೆ ಪೊಲೀಸ್ ವಿಚಾರಣೆಯಿಂದ ಉತ್ತರ ಸಿಗಬೇಕಿದೆ.
ಪರ್ವೀಜ್ ಕಚೇರಿಯ ಡೆಸ್ಕ್ ಮೇಲೆ ಬರೆದಿಟ್ಟು ಹೋಗಿದ್ದ ಪತ್ರದಲ್ಲಿ ಸರ್ಕಾರಿ ಅನುದಾನದ ಕೊರತೆ ಮತ್ತು ಕಾಮಗಾರಿಗಳ ಬಾಕಿ ಹಣ ಬಿಡುಗಡೆ ಆಗದಿರುವುದರಿಂದ ತೊಂದರೆ ಎದುರಿಸುತ್ತಿರುವುದಾಗಿ ಉಲ್ಲೇಖಿಸಿದ್ದರು. ಉಪ ಗುತ್ತಿಗೆದಾರರು ಮನೆ ಮತ್ತು ಕಚೇರಿಗೆ ಬಂದು ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಅಂಶವೂ ಪತ್ರದಲ್ಲಿತ್ತು. ಆದರೆ, ಪತ್ರದಲ್ಲಿನ ಆರೋಪಗಳ ಸತ್ಯಾಸತ್ಯತೆ ಮತ್ತು ನಾಪತ್ತೆಯಾಗಿದ್ದ ಹಿಂದಿನ ನೈಜ ಕಾರಣ ಇನ್ನೂ ದೃಢಪಟ್ಟಿಲ್ಲ.
ಪರ್ವೀಜ್ ನಾಪತ್ತೆಯಾದ ಬಳಿಕ ಪೊಲೀಸರು ಅವರ ಚಲನವಲನ ಪತ್ತೆಹಚ್ಚಲು ವಿವಿಧ ಸುಳಿವುಗಳನ್ನು ಪರಿಶೀಲಿಸಿದ್ದರು. ಅವರ ಮೊಬೈಲ್ ನೆಟ್‌ವರ್ಕ್‌ಗೆ ಸಂಬಂಧಿಸಿದ ಕೊನೆಯ ಸುಳಿವು ಆಂಧ್ರಪ್ರದೇಶದ ವಿಜಯವಾಡದಲ್ಲಿ ದೊರೆತಿತ್ತು. ಬಳಿಕ ಮೊಬೈಲ್ ಸಂಪರ್ಕ ಕಡಿತಗೊಂಡಿತ್ತು. ನಂತರ ಮಧ್ಯಪ್ರದೇಶದ ಭೋಪಾಲ್ ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಗಳಲ್ಲಿ ಪರ್ವೀಜ್ ಕಾಣಿಸಿಕೊಂಡಿದ್ದರು. ಪೊಲೀಸರು ಅಲ್ಲಿ ಪರಿಶೀಲನೆ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ನಿರಂತರ ಕಾರ್ಯಾಚರಣೆಯ ಬಳಿಕ ಕೊನೆಗೂ ಮುಂಬೈನಲ್ಲಿ ಅವರ ಸುಳಿವು ಸಿಕ್ಕಿದೆ.
ಸೆಪ್ಟೆಂಬರ್ 13ರಂದು ಬೆಂಗಳೂರಿನಲ್ಲಿ ಸಭೆಗೆ ತೆರಳುವುದಾಗಿ ಮನೆಯಲ್ಲಿ ತಿಳಿಸಿದ್ದ ಪರ್ವೀಜ್ ಬಳಿಕ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ಅವರ ಕುಟುಂಬಸ್ಥರು ಸೆಪ್ಟೆಂಬರ್ 16ರಂದು ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್. ಅವರ ನೇತೃತ್ವದಲ್ಲಿ ಐದು ವಿಶೇಷ ತಂಡಗಳನ್ನು ರಚಿಸಿ ಹುಡುಕಾಟ ನಡೆಸಲಾಗಿತ್ತು. ಇದೀಗ ಪರ್ವೀಜ್ ಪತ್ತೆಯಾಗಿರುವುದು ಕುಟುಂಬದ ಆತಂಕವನ್ನು ದೂರಮಾಡಿದೆ.
24-10-26 12:22 pm
HK News Staffer
ಸ್ಟಿಂಗ್ ಆಪರೇಶನ್ ಹಿಂದಿರುವವರು ಯಾರೆಂಬ ಸತ್ಯ ಗೊತ್...
23-10-26 08:34 pm
ಮಾಧ್ಯಮದ ಮುಖ್ಯಸ್ಥನ ಜೊತೆಗಿದ್ದ ವಿಕ್ಕಿ ಎಂಬ ವ್ಯಕ್ತ...
23-10-26 05:47 pm
ಬ್ಲ್ಯಾಕ್ಮೇಲ್ ಉದ್ದೇಶದಿಂದ ಸ್ಟಿಂಗ್ ಮಾಡಿದ್ದಾರೆ...
23-10-26 03:56 pm
ಬಿಲ್ ಬಾಕಿಯಿದ್ದರೂ ಮೃತದೇಹ ತಡೆಹಿಡಿಯುವಂತಿಲ್ಲ: ಖಾಸ...
23-10-26 02:53 pm
21-10-26 04:21 pm
HK News Desk
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
24-10-26 01:59 pm
HK News Staffer
Subbanna Pandit, Folk Academy Award: 45 ವರ್ಷಗ...
24-10-26 12:19 pm
Soujanya Case, SIT: ಸೌಜನ್ಯಾ ಕೊಲೆ ಪ್ರಕರಣದ ಮರು...
23-10-26 05:48 pm
19 ಗಂಟೆ 29 ನಿಮಿಷಗಳ ಸಾಧನೆ: 2,000 ಮೆಹಂದಿ ಕೋನ್ ತ...
23-10-26 02:56 pm
Builder Donald Pinto Fraud: ಮಾರ್ನಮಿಕಟ್ಟೆ ಸರ್ಕ...
22-10-26 09:37 pm
24-10-26 12:51 pm
HK News Staffer
ಪುಲಿಕೇಶಿ ನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಫೋಟ ;...
23-10-26 05:48 pm
B Care Company, Madhumita Kaur: ಇನ್ಶೂರೆನ್ಸ್ ಪ...
22-10-26 03:21 pm
ಮೂಡುಬಿದಿರೆಯಲ್ಲಿ ಕರುಣಾಜನಕ ದುರಂತ ; ಮಗನನ್ನು ರಕ್ಷ...
22-10-26 01:03 pm
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಂತಿದ್ದ ಗ್ಯಾಸ್ ಟ್...
22-10-26 01:01 pm