ಬ್ರೇಕಿಂಗ್ ನ್ಯೂಸ್
23-10-26 05:48 pm HK News Staffer ಕ್ರೈಂ
ಬೆಂಗಳೂರು, ಅ.23: ಪುಲಿಕೇಶಿ ನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದ ಸ್ಫೋಟ ಕೃತ್ಯದ ಹಿಂದೆ ಉಗ್ರರ ಕೃತ್ಯದ ಶಂಕೆ ವ್ಯಕ್ತವಾಗಿದೆ. ಐಇಡಿ ಮಾದರಿಯ ಸ್ಫೋಟಕ್ಕಾಗಿ ಮೂರು ಬ್ಯಾಟರಿ ಬಳಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಅಲ್ಲದೆ, ಕೃತ್ಯಕ್ಕೆ ಕಚ್ಚಾ ಬಾಂಬ್ ಬಳಸಲಾಗಿದ್ದು, ಇದು ಉಗ್ರರ ವಿಧ್ವಂಸಕ ಕೃತ್ಯವೆಂಬ ಶಂಕೆಗೆ ಕಾರಣವಾಗಿದೆ.
ಸ್ಫೋಟ ಸಂಭವಿಸಿರುವ ಕಟ್ಟಡದ ಸ್ಥಳದಲ್ಲಿ ದೊರೆತ ವೈರ್, ಟೈಮರ್, ಬ್ಯಾಟರಿಗಳು ಹಾಗೂ ಇತರೆ ಮಾದರಿಗಳನ್ನು ಎಫ್ಎಲ್ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಫೋಟದಲ್ಲಿ ಗಾಯಗೊಂಡಿರುವ ಕಟ್ಟಡದ ಕಾವಲುಗಾರ ಅಲ್ಲಾವುದ್ದೀನ್ ಮತ್ತು ಪೇಂಟರ್ ಸೂರಜ್ಕುಮಾರ್ ವಿಚಾರಣೆ ನಡೆಸಲಾಗಿದೆ. ಈ ಇಬ್ಬರೂ ಗೊಂದಲದ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಸ್ಫೋಟದ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಅಸ್ಸಾಂ ಮೂಲದ ಅಲ್ಲಾವುದ್ದೀನ್, ಎರಡು ವಾರಗಳ ಹಿಂದೆಯಷ್ಟೇ ಈ ಕಟ್ಟಡದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ್ದ. ಉತ್ತರಪ್ರದೇಶ ಮೂಲದ ಸೂರಜ್ ಕುಮಾರ್ ಮತ್ತು ಆತನ ಸಹೋದರ ಅಭಿಕುಮಾರ್, ಎರಡು ದಿನಗಳಿಂದ ಈ ಕಟ್ಟಡದಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದರು.
ಇದೇ ವೇಳೆ, ಎನ್ಐಎ ಅಧಿಕಾರಿಗಳು ತನಿಖೆ ಆರಂಭಿಸಿದ್ದು ಸ್ಫೋಟದ ಸ್ಥಳದಲ್ಲಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೆ, ಸ್ಥಳೀಯ ಪೊಲೀಸರಿಂದ ಮಾಹಿತಿ ಕಲೆ ಹಾಕಿದ್ಧಾರೆ. ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆದಿತ್ತೇ ಎಂಬ ಬಗ್ಗೆ ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅ.20ರ ಮಧ್ಯಾಹ್ನ ಕಟ್ಟಡದ ಬಳಿ ಕಾವಲು ಕಾಯುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ತನಗೆ ಕರೆ ಮಾಡಿ ಪಾರ್ಸೆಲ್ ಕಳುಹಿಸಿರುವುದಾಗಿ ಹೇಳಿದ. ಬಳಿಕ ಬ್ಯಾಟರಿ ಮಾದರಿಯ ಆ ಪಾರ್ಸೆಲ್ ಸ್ವೀಕರಿಸಿ, ಕಟ್ಟಡದ 7ನೇ ಮಹಡಿಯಲ್ಲಿದ್ದ ಸೂರಜ್ ಕುಮಾರ್ನನ್ನು 5ನೇ ಮಹಡಿಗೆ ಕರೆಸಿಕೊಂಡು ಪಾರ್ಸೆಲ್ ತೆರೆಯುವಂತೆ ಸೂಚಿಸಿದೆ. ಸೂರಜ್ ಕುಮಾರ್, ಪಾರ್ಸೆಲ್ ತೆರೆದು ಸ್ವಿಚ್ ಆನ್ ಮಾಡುತ್ತಿದ್ದಂತೆ ಅದು ಸ್ಫೋಟಗೊಂಡಿತ್ತು ಎಂದು ಅಲ್ಲಾವುದ್ದೀನ್ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಅಲ್ಲಾವುದ್ದೀನ್ಗೆ ಕರೆ ಮಾಡಿದ ವ್ಯಕ್ತಿ ಯಾರೆಂದು ಪತ್ತೆ ಮಾಡಲಾಗುತ್ತಿದೆ. ಅಲ್ಲದೆ, ಅಲ್ಲಾವುದ್ದೀನ್ ಮತ್ತು ಸೂರಜ್ ಕುಮಾರ್ ಪೂರ್ವಾಪರದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಕಟ್ಟಡವು ಜಾಮಿಯಾ ರಸ್ತೆಯ ಉದ್ಯಮಿಗೆ ಸೇರಿದ್ದು ಏಳು ಅಂತಸ್ತಿನಲ್ಲಿ ನಿರ್ಮಾಣ ಕಾರ್ಯ ಆಗುತ್ತಿದೆ. ಪೊಲೀಸರು ಕಟ್ಟಡದ ಮಾಲೀಕನ ವಿಚಾರಣೆಯನ್ನೂ ಮಾಡಿದ್ದಾರೆ.
ಪಾಕಿಸ್ತಾನದ ಲಷ್ಕರ್-ಎ- ತೊಯ್ಬಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪದಡಿ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಮಮತಾಜುಲ್ ಮುಲಿಕ್ ಎಂಬಾತನನ್ನು ಅ.19ರಂದು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ರಾಜ್ಯದ ಕಲಬುರಗಿ ಜಿಲ್ಲೆಯ ಮಾಲಗತ್ತಿ ಗ್ರಾಮದಲ್ಲಿ ಮೊಹಮ್ಮದ್ ಸಮೀರ್ ಎಂಬಾತನನ್ನು ಬಂಧಿಸಲಾಗಿತ್ತು. ಅದೇ ವೇಳೆಗೆ, ದೊಡ್ಡಬಳ್ಳಾಪುರದಲ್ಲಿ ಮತ್ತೊಬ್ಬ ಶಂಕಿತನನ್ನು ಬಂಧಿಸಲಾಗಿತ್ತು. ಈ ಮೂವರಿಗೂ ಬೆಂಗಳೂರಿನಲ್ಲಿ ಸಂಭವಿಸಿರುವ ಸ್ಫೋಟಕ್ಕೂ ನಂಟು ಇದೆಯೇ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
24-10-26 12:22 pm
HK News Staffer
ಸ್ಟಿಂಗ್ ಆಪರೇಶನ್ ಹಿಂದಿರುವವರು ಯಾರೆಂಬ ಸತ್ಯ ಗೊತ್...
23-10-26 08:34 pm
ಮಾಧ್ಯಮದ ಮುಖ್ಯಸ್ಥನ ಜೊತೆಗಿದ್ದ ವಿಕ್ಕಿ ಎಂಬ ವ್ಯಕ್ತ...
23-10-26 05:47 pm
ಬ್ಲ್ಯಾಕ್ಮೇಲ್ ಉದ್ದೇಶದಿಂದ ಸ್ಟಿಂಗ್ ಮಾಡಿದ್ದಾರೆ...
23-10-26 03:56 pm
ಬಿಲ್ ಬಾಕಿಯಿದ್ದರೂ ಮೃತದೇಹ ತಡೆಹಿಡಿಯುವಂತಿಲ್ಲ: ಖಾಸ...
23-10-26 02:53 pm
21-10-26 04:21 pm
HK News Desk
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
24-10-26 01:59 pm
HK News Staffer
Subbanna Pandit, Folk Academy Award: 45 ವರ್ಷಗ...
24-10-26 12:19 pm
Soujanya Case, SIT: ಸೌಜನ್ಯಾ ಕೊಲೆ ಪ್ರಕರಣದ ಮರು...
23-10-26 05:48 pm
19 ಗಂಟೆ 29 ನಿಮಿಷಗಳ ಸಾಧನೆ: 2,000 ಮೆಹಂದಿ ಕೋನ್ ತ...
23-10-26 02:56 pm
Builder Donald Pinto Fraud: ಮಾರ್ನಮಿಕಟ್ಟೆ ಸರ್ಕ...
22-10-26 09:37 pm
24-10-26 12:51 pm
HK News Staffer
ಪುಲಿಕೇಶಿ ನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಫೋಟ ;...
23-10-26 05:48 pm
B Care Company, Madhumita Kaur: ಇನ್ಶೂರೆನ್ಸ್ ಪ...
22-10-26 03:21 pm
ಮೂಡುಬಿದಿರೆಯಲ್ಲಿ ಕರುಣಾಜನಕ ದುರಂತ ; ಮಗನನ್ನು ರಕ್ಷ...
22-10-26 01:03 pm
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಂತಿದ್ದ ಗ್ಯಾಸ್ ಟ್...
22-10-26 01:01 pm