ಬ್ರೇಕಿಂಗ್ ನ್ಯೂಸ್
23-10-26 08:34 pm HK News Staffer ಕರ್ನಾಟಕ
ಮೈಸೂರು, ಅ.23: ಸ್ಟಿಂಗ್ ಆಪರೇಷನ್ ಸುಳ್ಳು ಕೇಸ್. ನನ್ನನ್ನು ಬ್ಲಾಕ್ ಮೇಲ್ ಮಾಡುವ ಉದ್ದೇಶದಿಂದ ಮಾಡಿದ್ದ ಪ್ರಕರಣವಿದು. ಆದ್ದರಿಂದ ಸತ್ಯ ಹೊರಗೆ ಬರಲಿ ಎಂದು ನಾನೇ ದೂರು ನೀಡಿದ್ದೇನೆ. ಜನರಿಗೆ ಸತ್ಯ ಗೊತ್ತಾಗಬೇಕು ಜೊತೆಗೆ ಇದರ ಹಿಂದೆ ಯಾರಿದ್ದಾರೆ ಎಂದು ಸಹ ಗೊತ್ತಾಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ತಮ್ಮ ವಿರುದ್ಧ ನಡೆದ ನಕಲಿ ಸ್ಟಿಂಗ್ ಆಪರೇಷನ್ ವೀಡಿಯೋಗೆ ಸಂಬಂಧಿಸಿ ಪ್ರಶ್ನೆಗೆ ಉತ್ತರಿಸಿದ ಅವರು, ಸುಳ್ಳು ಹೆಚ್ಚು ಪ್ರಚಾರ ಆಗಬಾರದು ಎಂದು ಸಿವಿಲ್ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದೇನೆ. ನಾನು 8 ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದೆ, ಆಗ ನನ್ನ ಮೇಲೆ ಬ್ಲಾಕ್ ಮೇಲ್ ಮಾಡುವ ಯಾವುದೇ ಘಟನೆಗಳು ನಡೆದಿರಲಿಲ್ಲ. ಈಗ ನನ್ನ ಬಳಿ ಅಧಿಕಾರವಿಲ್ಲ. ಹಾಗಾಗಿ ಇಂತಹ ಪ್ರಯತ್ನ ಆಗಿದೆ.
ದಕ್ಷಿಣ ಕನ್ನಡದ ಕೃಪಾ ಆಳ್ವಾ ಎನ್ನುವ ಮಹಿಳೆ ಹಾಗೂ ರಾಕೇಶ್ ಶೆಟ್ಟಿ ಈ ಇಬ್ಬರೂ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ತಾವೇ ಮಾಡಿದ್ದು ಎಂದು ರಾಕೇಶ್ ಶೆಟ್ಟಿ ಸಹ ಒಪ್ಪಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ತಿಳಿಸಿದರು. ಕುಮಾರಸ್ವಾಮಿ ಅವರು ತಮ್ಮ ಪರ ನಿಲ್ಲುವುದಾಗಿ ತಿಳಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ತನಿಖೆ ಜಾರಿಯಲ್ಲಿದೆ. ಈ ವಿಚಾರದಲ್ಲಿ ಯಾರೂ ನನ್ನ ಪರ ನಿಲ್ಲಬೇಕಾದ ಅಗತ್ಯವಿಲ್ಲ. ರಾಜ್ಯದ ಜನತೆಗೆ ಸತ್ಯ ಗೊತ್ತಾಗಬೇಕು, ಇಷ್ಟು ಮಾತ್ರ ಆಗಬೇಕಿರುವುದು. ನನ್ನ ವರ್ಚಸ್ಸಿಗೆ ಮಸಿ ಬಳಿಯಲು ಯಾರು ಎಷ್ಟೇ ಪ್ರಯತ್ನ ಮಾಡಿದರೂ ಜನ ಅದನ್ನು ಒಪ್ಪುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪೊಲೀಸ್ ತನಿಖೆಯ ಬಗ್ಗೆ ನಿಮಗೆ ವಿಶ್ವಾಸವಿದೆಯೇ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತ, ಈ ತನಿಖೆಯ ಮೇಲೆ ನನಗೆ ವಿಶ್ವಾಸವಿದೆ. ತನಿಖೆ ನ್ಯಾಯಯುತವಾಗಿ ನಡೆಯಬೇಕು ಎನ್ನುವುದು ನನ್ನ ಒತ್ತಾಯವೆಂದು ತಿಳಿಸಿದರು. ಈ ಪ್ರಕರಣದ ತನಿಖೆಗೆ ಎಸ್ ಐ ಟಿ ರಚಿಸುವ ಅಗತ್ಯವೇನೂ ಇಲ್ಲ. ಈಗ ನಡೆಯುತ್ತಿರುವ ತನಿಖೆಯನ್ನೇ ಸೂಕ್ತ ರೀತಿಯಲ್ಲಿ ಮಾಡಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು.
ಈ ಸ್ಟಿಂಗ್ ಷಡ್ಯಂತ್ರದ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆಯೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದರ ಹಿಂದೆ ಯಾರಿದ್ದಾರೆ, ನಮ್ಮ ಪಕ್ಷದವರು ಇದ್ದಾರಾ? ಬೇರೆ ಪಕ್ಷದವರು ಇದ್ದಾರ? ಎನ್ನುವುದು ತನಿಖೆಯಿಂದ ಗೊತ್ತಾಗಬೇಕು ಎಂದು ಅವರು ತಿಳಿಸಿದರು. ಈ ವಿಚಾರ ಯಾವಾಗ ನಿಮ್ಮ ಗಮನಕ್ಕೆ ಬಂದಿತು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಗಮನಕ್ಕೆ ಬಂದಿದ್ದು ಸೆಪ್ಟಂಬರ್ 26ರಂದು. ನಾನು ಯಾವುದೇ ರೀತಿ ತಪ್ಪು ಮಾಡಿಲ್ಲ ಎಂದಮೇಲೆ ನನಗೆ ಬೇಸರವಾಗುವ ಪ್ರಶ್ನೆಯಿಲ್ಲ. ತೇಜೋವಧೆ ಮಾಡಲು ಯಾರೇ ಹೊರಟರೂ ಸತ್ಯ ಏನೆಂದು ನನಗೆ ಗೊತ್ತಿರುತ್ತದೆ. ನಾನು ಬೇಜಾರಾಗುವ ಅಥವಾ ಹೆದರುವ ಪ್ರಶ್ನೆ ಉದ್ಭವವಾಗುವುದಿಲ್ಲ. ಈ ಪ್ರಕರಣವಂತೂ ನೂರಕ್ಕೆ ನೂರು ಸೃಷ್ಟಿ ಮಾಡಿರುವುದು. ನಾನು 1984ರಲ್ಲಿ ಮೊದಲ ಬಾರಿಗೆ ಮಂತ್ರಿಯಾದುದ್ದು. ಅಂದಿನಿಂದ ಇಂದಿನ ವರೆಗೆ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೆ ಆಗಲೂ ನಡೆದಿರಲಿಲ್ಲ. ಈಗ ನನ್ನ ಬಳಿ ಅಧಿಕಾರ ಇಲ್ಲದಾಗ ಇಂತಹ ಷಡ್ಯಂತ್ರ ಮಾಡುತ್ತಿದ್ದಾರೆ. ಅವರ ಉದ್ದೇಶ ಸಫಲವಾಗುವುದಿಲ್ಲ ಎಂಬುದಂತು ಸತ್ಯ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
24-10-26 12:22 pm
HK News Staffer
ಸ್ಟಿಂಗ್ ಆಪರೇಶನ್ ಹಿಂದಿರುವವರು ಯಾರೆಂಬ ಸತ್ಯ ಗೊತ್...
23-10-26 08:34 pm
ಮಾಧ್ಯಮದ ಮುಖ್ಯಸ್ಥನ ಜೊತೆಗಿದ್ದ ವಿಕ್ಕಿ ಎಂಬ ವ್ಯಕ್ತ...
23-10-26 05:47 pm
ಬ್ಲ್ಯಾಕ್ಮೇಲ್ ಉದ್ದೇಶದಿಂದ ಸ್ಟಿಂಗ್ ಮಾಡಿದ್ದಾರೆ...
23-10-26 03:56 pm
ಬಿಲ್ ಬಾಕಿಯಿದ್ದರೂ ಮೃತದೇಹ ತಡೆಹಿಡಿಯುವಂತಿಲ್ಲ: ಖಾಸ...
23-10-26 02:53 pm
21-10-26 04:21 pm
HK News Desk
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
24-10-26 01:59 pm
HK News Staffer
Subbanna Pandit, Folk Academy Award: 45 ವರ್ಷಗ...
24-10-26 12:19 pm
Soujanya Case, SIT: ಸೌಜನ್ಯಾ ಕೊಲೆ ಪ್ರಕರಣದ ಮರು...
23-10-26 05:48 pm
19 ಗಂಟೆ 29 ನಿಮಿಷಗಳ ಸಾಧನೆ: 2,000 ಮೆಹಂದಿ ಕೋನ್ ತ...
23-10-26 02:56 pm
Builder Donald Pinto Fraud: ಮಾರ್ನಮಿಕಟ್ಟೆ ಸರ್ಕ...
22-10-26 09:37 pm
24-10-26 12:51 pm
HK News Staffer
ಪುಲಿಕೇಶಿ ನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಫೋಟ ;...
23-10-26 05:48 pm
B Care Company, Madhumita Kaur: ಇನ್ಶೂರೆನ್ಸ್ ಪ...
22-10-26 03:21 pm
ಮೂಡುಬಿದಿರೆಯಲ್ಲಿ ಕರುಣಾಜನಕ ದುರಂತ ; ಮಗನನ್ನು ರಕ್ಷ...
22-10-26 01:03 pm
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಂತಿದ್ದ ಗ್ಯಾಸ್ ಟ್...
22-10-26 01:01 pm