ಬ್ರೇಕಿಂಗ್ ನ್ಯೂಸ್
22-10-26 01:03 pm HK News Staffer ಕ್ರೈಂ
ಮೂಡುಬಿದಿರೆ, ಅ.22 : ಮಗನನ್ನು ವಿದ್ಯುತ್ ಆಘಾತದಿಂದ ರಕ್ಷಿಸಲು ಧಾವಿಸಿದ ತಾಯಿಯೂ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಮರ್ಸಿ ಮಸ್ಕರೇನಸ್ (45) ಮತ್ತು ಅವರ ಪುತ್ರ ಶೋನ್ ಮಸ್ಕರೇನಸ್ (18) ಮೃತ ದುರ್ದೈವಿಗಳು. ಮನೆಯ ಹೊರಗೆ ಬಟ್ಟೆ ಒಣಗಿಸುವ ವೇಳೆ ಸಂಭವಿಸಿದ ಅವಘಡದಲ್ಲಿ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ.
ಮೂಡುಬಿದಿರೆಯ ಹೋಲಿ ರೋಸರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದ ಶೋನ್, ಗುರುವಾರ ಬೆಳಗ್ಗೆ ಮನೆಯ ಹೊರಭಾಗದಲ್ಲಿ ಬಟ್ಟೆ ಒಣಗಿಸಲು ತೆರಳಿದ್ದರು. ಈ ವೇಳೆ ಬಟ್ಟೆ ಒಣಗಿಸಲು ಕಟ್ಟಿದ್ದ ಕಬ್ಬಿಣದ ತಂತಿಗೆ ಹೈಟೆನ್ಶನ್ ವಿದ್ಯುತ್ ತಂತಿಯ ಸಂಪರ್ಕ ಉಂಟಾಗಿ ವಿದ್ಯುತ್ ಪ್ರವಹಿಸಿರಬಹುದು ಎಂದು ಶಂಕಿಸಲಾಗಿದೆ.
ವಿದ್ಯುತ್ ಆಘಾತಕ್ಕೆ ಸಿಲುಕಿ ಮಗ ಒದ್ದಾಡುವುದನ್ನು ಕಂಡ ತಾಯಿ ಮರ್ಸಿ ಮಸ್ಕರೇನಸ್, ಆತನನ್ನು ರಕ್ಷಿಸಲು ಧಾವಿಸಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್ ಪ್ರವಹಿಸಿದ್ದು, ತಾಯಿ ಮತ್ತು ಮಗ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಿಗ್ಗೆ ಸುಮಾರು 7ರಿಂದ 8 ಗಂಟೆಯ ನಡುವೆ ತೋಟದ ಕೆಲಸಕ್ಕಾಗಿ ಮನೆಗೆ ಬಂದ ಕಾರ್ಮಿಕರೊಬ್ಬರು ತಾಯಿ-ಮಗ ಇಬ್ಬರು ಬಿದ್ದಿರುವುದನ್ನು ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಮಗನನ್ನು ರಕ್ಷಿಸಲು ಮುಂದಾದ ತಾಯಿಯೂ ಪ್ರಾಣ ಕಳೆದುಕೊಂಡಿರುವ ದುರಂತ ವರ್ಣಬೆಟ್ಟುವಿನಲ್ಲಿ ಶೋಕದ ಛಾಯೆ ಉಂಟು ಮಾಡಿದೆ.
ವಿಷಯ ತಿಳಿದು ಮೂಡುಬಿದಿರೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
23-10-26 02:53 pm
HK News Staffer
ಶಿವಮೊಗ್ಗ ದಸರಾದಲ್ಲಿ ದಿಕ್ಕಾಪಾಲು ಓಡಿದ ಅಂಬಾರಿ ಹೊತ...
21-10-26 10:31 pm
ಸಕಲೇಶಪುರ ; ನಕಲಿ ದಾಖಲೆ ಸೃಷ್ಟಿಸಿ ಬರೋಬ್ಬರಿ 13,10...
20-10-26 06:06 pm
ಮೈಸೂರು ದಸರಾ ಕಂಬಳ ಸಂಪನ್ನ ; 16 ಗ್ರಾಂ ಚಿನ್ನ ಗೆದ್...
20-10-26 11:04 am
ಸಂಪುಟದಲ್ಲಿ ಮಹಿಳೆಗೆ ಸಿಗದ ಸ್ಥಾನ ; ಮಹಿಳಾ ಕಾಂಗ್ರ...
17-10-26 07:30 pm
21-10-26 04:21 pm
HK News Desk
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
23-10-26 02:56 pm
HK News Staffer
Builder Donald Pinto Fraud: ಮಾರ್ನಮಿಕಟ್ಟೆ ಸರ್ಕ...
22-10-26 09:37 pm
ರೆಸ್ಲರ್ ‘ಗ್ರೇಟ್ ಖಲಿ’ ನೋಡಲು ಹುಚ್ಚೆದ್ದು ಸೇರಿದ ಅ...
21-10-26 09:20 pm
ಕದ್ರಿ ರಾಜಾಂಗಣದಲ್ಲಿ ‘ಅಷ್ಟಭುಜೆ’ಯಾಗಿ ಅವತರಿಸಿದ ಆರ...
21-10-26 07:52 pm
Mangalore Accident, Ullal: ಓವರ್ ಟೇಕ್ ಧಾವಂತದಲ್...
19-10-26 08:41 pm
22-10-26 03:21 pm
HK News Staffer
ಮೂಡುಬಿದಿರೆಯಲ್ಲಿ ಕರುಣಾಜನಕ ದುರಂತ ; ಮಗನನ್ನು ರಕ್ಷ...
22-10-26 01:03 pm
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಂತಿದ್ದ ಗ್ಯಾಸ್ ಟ್...
22-10-26 01:01 pm
Boliyaru Murder Case, Dakshina Kannada Crime...
22-10-26 10:32 am
ಬೋಳಿಯಾರಿನಲ್ಲಿ ಸ್ಕೂಟರ್ ಸವಾರರ ಸಾವು ಪ್ರಕರಣ ; ಅಪಘ...
20-10-26 05:06 pm