Boliyaru Murder Case, Dakshina Kannada Crime News: ಬೋಳಿಯಾರು ಪಿಕಪ್ ಡಿಕ್ಕಿ ಹೊಡೆಸಿ ಕೊಲೆ ಪ್ರಕರಣ ; ಸ್ಥಳ ಮಹಜರು ವೇಳೆ ಪೊಲೀಸರ ಎದುರಲ್ಲೇ ಆರೋಪಿ ಹಫೀಜ್ ಮೇಲೆ ಹಲ್ಲೆಗೆ ಯತ್ನ, ಮೃತರ ಸ್ನೇಹಿತರಿಂದ ಕೃತ್ಯ

22-10-26 10:32 am       HK News Staffer   ಕ್ರೈಂ

ಬೋಳಿಯಾರಿನಲ್ಲಿ ಪಿಕಪ್ ಡಿಕ್ಕಿಯಾಗಿಸಿ ಇಬ್ಬರು ಸ್ಕೂಟರ್ ಸವಾರರನ್ಜು ಕೊಲೆಗೈದ ಪ್ರಕರಣದಲ್ಲಿ ಆರೋಪಿ ಮಹಮ್ಮದ್ ಹಫೀಜ್ ನನ್ನು ಕೊಣಾಜೆ ಪೊಲೀಸರು ಸ್ಥಳ ಮಹಜರು ನಡೆಸುವುದಕ್ಕಾಗಿ ಕರೆದೊಯ್ದ ವೇಳೆ ಮೃತ ಯುವಕರ ಇಬ್ಬರು ಸ್ನೇಹಿತರು ಆರೋಪಿಗೆ ಹಲ್ಲೆ ನಡೆಸಲು ಮುಂದಾದ ಘಟನೆ ನಡೆದಿದ್ದು ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಂಗಳೂರು, ಅ.22: ಬೋಳಿಯಾರಿನಲ್ಲಿ ಪಿಕಪ್ ಡಿಕ್ಕಿಯಾಗಿಸಿ ಇಬ್ಬರು ಸ್ಕೂಟರ್ ಸವಾರರನ್ಜು ಕೊಲೆಗೈದ ಪ್ರಕರಣದಲ್ಲಿ ಆರೋಪಿ ಮಹಮ್ಮದ್ ಹಫೀಜ್ ನನ್ನು ಕೊಣಾಜೆ ಪೊಲೀಸರು ಸ್ಥಳ ಮಹಜರು ನಡೆಸುವುದಕ್ಕಾಗಿ ಕರೆದೊಯ್ದ ವೇಳೆ ಮೃತ ಯುವಕರ ಇಬ್ಬರು ಸ್ನೇಹಿತರು ಆರೋಪಿಗೆ ಹಲ್ಲೆ ನಡೆಸಲು ಮುಂದಾದ ಘಟನೆ ನಡೆದಿದ್ದು ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಆರೋಪಿಯನ್ನು ಕೃತ್ಯ ನಡೆದ ಸ್ಥಳದ ಮಹಜರು ತಯಾರಿಸುವ ಸಲುವಾಗಿ ಪೊಲೀಸರು ಪಂಚರನ್ನು, ತನಿಖಾ ಸಹಾಯಕರನ್ನು ಕರೆದುಕೊಂಡು  ಸ್ಥಳಕ್ಕೆ ತೆರಳಿದ್ದರು. ಪಂಚರ ಸಮಕ್ಷಮದಲ್ಲಿ ಬೋಳಿಯಾರು ಗ್ರಾಮದ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಆರೋಪಿ ತೋರಿಸಿಕೊಟ್ಟಂತೆ ಮಹಜರನ್ನು ತಯಾರಿಸುವ ಸಮಯ ಕೊಲೆಯಾದ ಮೊಹಮ್ಮದ್ ಝುನೈದ್ ಮತ್ತು ಮೊಹಮ್ಮದ್ ಆಫ್ರಾಜ್ ಅವರ ಸ್ನೇಹಿತರಾದ ಅಬ್ದುಲ್ ರಹಿಮಾನ್ ಮತ್ತು ಜಾಹೀರ್ ಎಂಬವರು ಏಕಾಏಕಿಯಾಗಿ  ಕೊಲೆ ಆರೋಪಿ ಮಹಮ್ಮದ್ ಹಫೀಜ್ ಅಪ್ಪಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ, ಪಿರ್ಯಾದಿದಾರರು ಮತ್ತು ಸ್ಥಳದಲ್ಲಿದ್ದವರು ತಡೆದು ನಿಲ್ಲಿಸಿದ್ದಾರೆ. 

ಆರೋಪಿ ತಮ್ಮ ಸ್ನೇಹಿತರನ್ನು ಕೊಲೆ ಮಾಡಿರುತ್ತಾನೆಂದು ದ್ವೇಷವನ್ನು ಹೊಂದಿದ್ದ ಯುವಕರು ಆತನ ಹಲ್ಲೆ ನಡೆಸಲು ಪ್ರಯತ್ನಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಇದರ ಬಗ್ಗೆ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದಾರೆ. ಹಣಕಾಸು ವಿಚಾರದ ವೈಷಮ್ಯದಲ್ಲಿ ಪಿಕಪ್ ಚಾಲಕ ಮಹಮ್ಮದ್ ಹಫೀಜ್, ಸ್ಕೂಟರಿನಲ್ಲಿ ಬಂದಿದ್ದ ಮೊಹಮ್ಮದ್ ಝುನೈದ್ ಮತ್ತು ಮೊಹಮ್ಮದ್ ಆಫ್ರಾಜ್ ಅವರ ಮೇಲೆ ಬೋಳಿಯಾರಿನಲ್ಲಿ ಹಿಂದಿನಿಂದ ಅವರಿಗೆ ಡಿಕ್ಕಿಯಾಗಿಸಿ ಕೊಲೆ ಮಾಡಿದ್ದಾಗಿ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.