ಬ್ರೇಕಿಂಗ್ ನ್ಯೂಸ್
22-10-26 01:01 pm HK News Staffer ಕ್ರೈಂ
ಉಪ್ಪಿನಂಗಡಿ , ಅ.22: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 16 ವರ್ಷದ ಬಾಲಕ ಕೊನೆಯುಸಿರೆಳೆದಿದ್ದಾನೆ. ನೆಲ್ಯಾಡಿ ಸಮೀಪದ ಕರ್ಬಸಂಕ ಎಂಬಲ್ಲಿ ನಿಂತಿದ್ದ ಗ್ಯಾಸ್ ಟ್ಯಾಂಕರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಅನ್ವಿನ್ ಜೋಜೋ ಜಾರ್ಜ್ ಅಪಘಾತದಲ್ಲಿ ಮೃತ ಬಾಲಕ. ಅನ್ವಿನ್, ನೆಲ್ಯಾಡಿಯ ಪ್ಲೇವರ್ಸ್ ಹೋಟೆಲ್ ಮಾಲಕ ಜೋಜೋ ಟಿ. ಜಾರ್ಜ್ ಅವರ ಪುತ್ರ.
ಗುರುವಾರ ನಸುಕಿನ ಜಾವ ಸುಮಾರು 1 ಗಂಟೆಗೆ ಕರ್ಬಸಂಕದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್ ಟ್ಯಾಂಕರ್‌ಗೆ ಬಾಲಕ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರು ಜಖಂಗೊಂಡಿದ್ದು, ಅನ್ವಿನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದ ಮಾಹಿತಿ ತಿಳಿದ ತಕ್ಷಣ ನೆಲ್ಯಾಡಿ ಹೊರಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಮೃತದೇಹವನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅಪಘಾತ ಸಂಭವಿಸಿದ ನಿಖರ ಕಾರಣ ಹಾಗೂ ಘಟನೆಯ ಇತರ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ. ಹದಿಹರೆಯದ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಶೋಕ ಮಡುಗಟ್ಟಿದ್ದು, ಈ ದುರ್ಘಟನೆ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.
21-10-26 10:31 pm
HK News Desk
ಸಕಲೇಶಪುರ ; ನಕಲಿ ದಾಖಲೆ ಸೃಷ್ಟಿಸಿ ಬರೋಬ್ಬರಿ 13,10...
20-10-26 06:06 pm
ಮೈಸೂರು ದಸರಾ ಕಂಬಳ ಸಂಪನ್ನ ; 16 ಗ್ರಾಂ ಚಿನ್ನ ಗೆದ್...
20-10-26 11:04 am
ಸಂಪುಟದಲ್ಲಿ ಮಹಿಳೆಗೆ ಸಿಗದ ಸ್ಥಾನ ; ಮಹಿಳಾ ಕಾಂಗ್ರ...
17-10-26 07:30 pm
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
21-10-26 04:21 pm
HK News Desk
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
21-10-26 09:20 pm
HK News Desk
ಕದ್ರಿ ರಾಜಾಂಗಣದಲ್ಲಿ ‘ಅಷ್ಟಭುಜೆ’ಯಾಗಿ ಅವತರಿಸಿದ ಆರ...
21-10-26 07:52 pm
Mangalore Accident, Ullal: ಓವರ್ ಟೇಕ್ ಧಾವಂತದಲ್...
19-10-26 08:41 pm
ಸಹಕಾರಿ ಬ್ಯಾಂಕ್ ನಿರ್ದೇಶಕ ಸ್ಥಾನ 10 ವರ್ಷಕ್ಕೆ ಮಿತ...
19-10-26 07:10 pm
G I Bakery Raid, Mangalore: ಅವಧಿ ಮುಗಿದ ತಿಂಡಿಗ...
17-10-26 11:04 pm
22-10-26 01:03 pm
HK News Staffer
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಂತಿದ್ದ ಗ್ಯಾಸ್ ಟ್...
22-10-26 01:01 pm
Boliyaru Murder Case, Dakshina Kannada Crime...
22-10-26 10:32 am
ಬೋಳಿಯಾರಿನಲ್ಲಿ ಸ್ಕೂಟರ್ ಸವಾರರ ಸಾವು ಪ್ರಕರಣ ; ಅಪಘ...
20-10-26 05:06 pm
ಮಂಗಳೂರಿನ ಮಹಿಳಾ ಅಧಿಕಾರಿಗೆ ಅಶ್ಲೀಲ ವಿಡಿಯೋ ಕಳುಹಿಸ...
20-10-26 04:13 pm