ಬ್ರೇಕಿಂಗ್ ನ್ಯೂಸ್
08-10-26 02:48 pm HK News Staffer ಸಿನಿಮಾ
ಬೆಂಗಳೂರು, ಅ.8: ಸ್ಯಾಂಡಲ್ವುಡ್ನ ದೊಡ್ಮನೆ ಕುಟುಂಬದ ಕುಡಿ, ನಟ ಯುವ ರಾಜ್ಕುಮಾರ್ ಹಾಗೂ ಅವರ ಪತ್ನಿ ಶ್ರೀದೇವಿ ಭೈರಪ್ಪ ನಡುವಿನ ವೈವಾಹಿಕ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಅಮೆರಿಕದಲ್ಲಿ ನೆಲೆಸಿರುವ ಶ್ರೀದೇವಿ ಭೈರಪ್ಪ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಪೋಸ್ಟ್ಗಳು ಆಗಾಗ ಚರ್ಚೆಗೆ ಕಾರಣವಾಗುತ್ತಿದ್ದು, ಇದೀಗ ಅವರು ಹಂಚಿಕೊಂಡಿರುವ ಹೊಸ ರೀಲ್ಸ್ವೊಂದು ಭಾರೀ ಗಮನ ಸೆಳೆದಿದೆ.
ಶ್ರೀದೇವಿ ಭೈರಪ್ಪ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಳೆಯ ಫೋಟೋಗಳನ್ನು ಬಳಸಿಕೊಂಡು ರೀಲ್ಸ್ ಹಂಚಿಕೊಂಡಿದ್ದಾರೆ. ಅದರೊಂದಿಗೆ ಬರೆದಿರುವ ಕ್ಯಾಪ್ಷನ್ನಲ್ಲಿ ಪತಿ ಹಾಗೂ ಮತ್ತೊಬ್ಬ ಮಹಿಳೆಯನ್ನು ಉದ್ದೇಶಿಸಿದಂತೆ ಕಾಣುವ ಸಾಲುಗಳಿದ್ದು, ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
‘ನೀನೇನೂ ಸ್ಪೆಷಲ್ ಅಲ್ಲ’
ತಮ್ಮ ಪೋಸ್ಟ್ನಲ್ಲಿ ಶ್ರೀದೇವಿ, ತಮ್ಮ ಪತಿಯ ಫೋನ್ನಲ್ಲಿ ತಮ್ಮ ಸಾವಿರಾರು ಫೋಟೋಗಳಿದ್ದವು. ಅವುಗಳನ್ನು ನೋಡಿ ತಾವು ಪತಿಗೆ ‘ವಿಶೇಷ’ ಎಂದು ಭಾವಿಸಿದ್ದೆ ಎಂದು ಬರೆದುಕೊಂಡಿದ್ದಾರೆ. ಆದರೆ ಒಂದು ದಿನ ಪತಿಯ ಗ್ಯಾಲರಿಯಲ್ಲಿ ಮತ್ತೊಬ್ಬ ಮಹಿಳೆಯ ಫೋಟೋಗಳನ್ನೂ ಇದೇ ರೀತಿಯ ಪೋಸ್ಗಳು ಹಾಗೂ ಫೋಟೋಗಳೊಂದಿಗೆ ನೋಡಿದ ಬಳಿಕ ಸತ್ಯ ತಿಳಿಯಿತು ಎಂದು ಅವರು ಪೋಸ್ಟ್ನಲ್ಲಿ ಹೇಳಿದ್ದಾರೆ.
ಮತ್ತೊಬ್ಬ ಮಹಿಳೆಯನ್ನು ಉದ್ದೇಶಿಸಿ, “ನೀನು ಏನ್ ಸ್ಪೆಷಲ್ ಇಲ್ಲ” ಎಂದು ಬರೆದಿರುವ ಶ್ರೀದೇವಿ, ಆ ಫೋಟೋಗಳ ಮೇಲೆ ಎಷ್ಟೇ ದೃಷ್ಟಿಬೊಟ್ಟು ಎಮೋಜಿ ಹಾಕಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಟಾಂಗ್ ನೀಡಿದ್ದಾರೆ. ಪೋಸ್ಟ್ನ ಕೊನೆಯಲ್ಲಿ ‘ಡಿಯರ್ ಹಸ್ಬೆಂಡ್’ ಎಂದು ಉಲ್ಲೇಖಿಸಿದ್ದು, ಫೋಟೋಗಳನ್ನು ತಮ್ಮ ಪತಿಯೇ ತೆಗೆದಿರುವುದರ ಕುರಿತು ಪರೋಕ್ಷ ಸುಳಿವು ನೀಡಿದ್ದಾರೆ.


‘ಅಪ್ಪು ಸರ್ ಇದ್ದಿದ್ದರೆ ನಿಮ್ಮ ಪರ ನಿಲ್ಲುತ್ತಿದ್ದರು’
ಶ್ರೀದೇವಿ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಲವರು ಕಮೆಂಟ್ ಮೂಲಕ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘Iamaishu’ ಎಂಬ ಖಾತೆಯಿಂದ ಕಮೆಂಟ್ ಮಾಡಿರುವ ನೆಟ್ಟಿಗರೊಬ್ಬರು, “ಅಪ್ಪು ಸರ್ ಇದ್ದಿದ್ದರೆ ಖಂಡಿತ ನಿಮ್ಮ ಪರವಾಗಿ ನಿಲ್ಲುತ್ತಿದ್ದರು ಅಲ್ವಾ?” ಎಂದು ಭಾವನಾತ್ಮಕವಾಗಿ ಪ್ರಶ್ನಿಸಿದ್ದಾರೆ. ಈ ಕಮೆಂಟ್ಗೆ ಪ್ರತಿಕ್ರಿಯಿಸಿರುವ ಶ್ರೀದೇವಿ, “100000%” ಎಂದು ಬರೆದು ರೆಡ್ ಹಾರ್ಟ್ ಎಮೋಜಿ ಹಾಕಿದ್ದಾರೆ. ಈ ಪ್ರತಿಕ್ರಿಯೆಯೂ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
ಮತ್ತೆ ಚರ್ಚೆಗೆ ಬಂದ ಡಿವೋರ್ಸ್ ವಿವಾದ
ಯುವ ರಾಜ್ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ನಡುವಿನ ವೈವಾಹಿಕ ವಿವಾದ ಈ ಹಿಂದೆ ಪರಸ್ಪರ ಆರೋಪ- ಪ್ರತ್ಯಾರೋಪ, ಆಡಿಯೋ ಹಾಗೂ ಫೋಟೋಗಳ ವಿಚಾರದಿಂದ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಸದ್ಯ ಶ್ರೀದೇವಿ ಭೈರಪ್ಪ ಅಮೆರಿಕದಲ್ಲಿದ್ದು, ಅಲ್ಲಿಂದಲೇ ತಮ್ಮ ಕಾನೂನು ಹೋರಾಟ ಮುಂದುವರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ಅವರ ಹೊಸ ಇನ್ಸ್ಟಾಗ್ರಾಂ ಪೋಸ್ಟ್ ಇದೀಗ ಯುವ ರಾಜ್ಕುಮಾರ್ ಅವರೊಂದಿಗಿನ ವೈವಾಹಿಕ ವಿವಾದವನ್ನು ಮತ್ತೆ ಸ್ಯಾಂಡಲ್ವುಡ್ ಅಂಗಳದಲ್ಲಿ ಚರ್ಚೆಗೆ ತಂದಿದೆ.
The marital dispute between Kannada actor Yuva Rajkumar and his wife Sridevi Bhairappa has returned to the spotlight after a recent Instagram post by Sridevi sparked discussion on social media.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
08-10-26 08:03 pm
HK News Staffer
ಭಾರತೀಯ ಪೈಲಟ್ ಸಾಹಸಕ್ಕೆ ಅಮೆರಿಕ ಸಂಸತ್ ಗೌರವ ; 17...
07-10-26 01:10 pm
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
08-10-26 04:30 pm
HK News Staffer
Santhosh laad, Araga jnanendra ಕಾರ್ಮಿಕ ಇಲಾಖೆಯ...
08-10-26 04:27 pm
ಆಟೋದಲ್ಲಿ 48 ಗ್ರಾಂ ಚಿನ್ನ ಬಿಟ್ಟುಹೋದ ಮಹಿಳೆ ; ‘ಚಿ...
08-10-26 12:06 pm
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
08-10-26 08:44 pm
HK News Staffer
ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಹಿಂಡಿಗೆ ಲಾರಿ...
08-10-26 08:07 pm
Online game, Death: ಆನ್ಲೈನ್ ಗೇಮ್ಗಾಗಿ 4 ಲಕ್ಷ...
08-10-26 04:56 pm
CBI ಹೆಸರಲ್ಲಿ ಬೆದರಿಕೆ, ‘ಡಿಜಿಟಲ್ ಅರೆಸ್ಟ್’ ನಾಟಕ...
08-10-26 11:08 am
ಮಂಗಳೂರು ರೈಲಿನಲ್ಲಿ ಲ್ಯಾಪ್ಟಾಪ್, ಚಿನ್ನದ ಸರ ಕಳವು...
08-10-26 10:59 am