ಆಟೋದಲ್ಲಿ 48 ಗ್ರಾಂ ಚಿನ್ನ ಬಿಟ್ಟುಹೋದ ಮಹಿಳೆ ; ‘ಚಿನ್ನಕ್ಕಿಂತ’ ದೊಡ್ಡ ಮನಸ್ಸು ತೋರಿದ ಡ್ರೈವರ್ ಬಸವರಾಜ್!

08-10-26 12:06 pm       HK News Staffer   ಕರಾವಳಿ

ಸುಲ್ತಾನ್ ಗೋಲ್ಡ್‌ನಲ್ಲಿ ಖರೀದಿಸಿದ್ದ 48 ಗ್ರಾಂ ತೂಕದ ಚಿನ್ನದ ಸರವನ್ನು ಆಟೋ ರಿಕ್ಷಾದಲ್ಲಿ ಪ್ರಯಾಣಿಸುವ ವೇಳೆ ಆಕಸ್ಮಿಕವಾಗಿ ಬಿಟ್ಟುಹೋದ ಘಟನೆ ನಡೆದಿದೆ. ಆದರೆ, ಆಟೋ ಚಾಲಕನ ಸಮಯಪ್ರಜ್ಞೆ ಹಾಗೂ ಪ್ರಾಮಾಣಿಕತೆಯಿಂದ ಅಮೂಲ್ಯ ಚಿನ್ನದ ಸರ ಸುರಕ್ಷಿತವಾಗಿ ವಾರಸುದಾರರ ಕೈ ಸೇರಿದೆ.

ಮಂಗಳೂರು, ಅ 8: ಸುಲ್ತಾನ್ ಗೋಲ್ಡ್‌ನಲ್ಲಿ ಖರೀದಿಸಿದ್ದ 48 ಗ್ರಾಂ ತೂಕದ ಚಿನ್ನದ ಸರವನ್ನು ಆಟೋ ರಿಕ್ಷಾದಲ್ಲಿ ಪ್ರಯಾಣಿಸುವ ವೇಳೆ ಆಕಸ್ಮಿಕವಾಗಿ ಬಿಟ್ಟುಹೋದ ಘಟನೆ ನಡೆದಿದೆ. ಆದರೆ, ಆಟೋ ಚಾಲಕನ ಸಮಯಪ್ರಜ್ಞೆ ಹಾಗೂ ಪ್ರಾಮಾಣಿಕತೆಯಿಂದ ಅಮೂಲ್ಯ ಚಿನ್ನದ ಸರ ಸುರಕ್ಷಿತವಾಗಿ ವಾರಸುದಾರರ ಕೈ ಸೇರಿದೆ.

ಅಫ್ಜಿಲಾ ಅವರು ಸುಲ್ತಾನ್ ಗೋಲ್ಡ್‌ನಲ್ಲಿ 48 ಗ್ರಾಂ ತೂಕದ ಚಿನ್ನದ ಸರವನ್ನು ಖರೀದಿಸಿದ್ದರು. ಬಳಿಕ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನದ ಸರವಿದ್ದ ಬ್ಯಾಗ್ ಅನ್ನು ಅಜಾಗರೂಕತೆಯಿಂದ ಆಟೋದಲ್ಲೇ ಬಿಟ್ಟು ಹೋಗಿದ್ದರು.

ಪ್ರಯಾಣ ಮುಗಿದ ಬಳಿಕ ಬ್ಯಾಗ್ ಕಾಣೆಯಾಗಿರುವುದು ಗಮನಕ್ಕೆ ಬಂದಿದ್ದು, ಆತಂಕಗೊಂಡ ಅಫ್ಜಿಲಾ ಅವರು ಚಿನ್ನದ ಸರಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಇದೇ ವೇಳೆ ಆಟೋ ಚಾಲಕ ಬಸವರಾಜ್ ಅವರಿಗೆ ಬ್ಯಾಗ್ ಸಿಕ್ಕಿದ್ದು, ಅದರಲ್ಲಿದ್ದ ಅಮೂಲ್ಯ ಚಿನ್ನದ ಸರವನ್ನು ವಾರಸುದಾರರಿಗೆ ಮರಳಿಸಿದ್ದಾರೆ.

ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಸಿಕ್ಕರೂ ಅದನ್ನು ತಮ್ಮ ಬಳಿ ಇಟ್ಟುಕೊಳ್ಳದೆ ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಬಸವರಾಜ್ ಪ್ರಾಮಾಣಿಕತೆ ಮತ್ತು ಮಾನವೀಯತೆಗೆ ಮಾದರಿಯಾಗಿದ್ದಾರೆ. ಅಮೂಲ್ಯ ಚಿನ್ನಕ್ಕಿಂತ ಅಮೂಲ್ಯವಾದ ಪ್ರಾಮಾಣಿಕತೆ ತೋರಿದ ಬಸವರಾಜ್ ಅವರ ನಡೆ ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ.

An auto-rickshaw driver’s honesty and presence of mind helped return a valuable 48-gram gold chain to its owner after it was accidentally left behind in the vehicle.