ಬ್ರೇಕಿಂಗ್ ನ್ಯೂಸ್
08-10-26 11:08 am HK News Staffer ಕ್ರೈಂ
ಮಂಗಳೂರು, ಅ 08: ಪೊಲೀಸ್ ಹಾಗೂ ಸಿಬಿಐ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಗಳು ಡಿಜಿಟಲ್ ಅರೆಸ್ವ್ ಹೆಸರಿನಲ್ಲಿ 75 ವರ್ಷದ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿ ಹಂತ ಹಂತವಾಗಿ ಒಟ್ಟು 2 ಕೋಟಿ ರೂ. ವರ್ಗಾಯಿಸಿಕೊಂಡಿರುವ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ಸೆ.25ರಂದು ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ತಾನು ಬಾಂಬೆ ಕೊಲಾಬಾ ಪೊಲೀಸ್ ಅಧಿಕಾರಿ ಸಂದೀಪ್ ರಾವ್ ಎಂದು ಪರಿಚಯಿಸಿಕೊಂಡಿದ್ದಾನೆ. ಅಂತಾರಾಷ್ಟ್ರೀಯ ಹಣ ಅಕ್ರಮ ವರ್ಗಾವಣೆ ಆರೋಪಿ ನರೇಶ್ ಗೋಯಲ್ ಜತೆ ಹಣ ವರ್ಗಾವಣೆ, ಮಾದಕವಸ್ತು ವ್ಯವಹಾರ ಹಾಗೂ ಮಕ್ಕಳ ಕಳ್ಳ ಸಾಗಣೆಯಂತಹ ಅಪರಾಧಗಳಲ್ಲಿಭಾಗಿಯಾಗಿದ್ದೀರಿ. ಈ ಬಗ್ಗೆ ಮುಂಬಯಿ ಕೊಲಾಬಾ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾನೆ.
ಬಳಿಕ ಮತ್ತೊಂದು ಮೊಬೈಲ್ ಸಂಖ್ಯೆಯಿಂದ ವಾಟ್ಸ್ಆ್ಯಪ್ ವಿಡಿಯೊ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತಾನು ಸಿಬಿಐ ಅಧಿಕಾರಿ ಸಮಾಧಾನ್ ಪವಾರ್ ಎಂದು ಪರಿಚಯಿಸಿಕೊಂಡಿದ್ದಾನೆ. ನೀವು ಅಂತಾರಾಷ್ಟ್ರೀಯ ಮಟ್ಟದ ಅಪರಾಧದಲ್ಲಿಭಾಗಿಯಾಗಿದ್ದು, ನ್ಯಾಷನಲ್ ಸೀಕ್ರೆಸಿ ಆ್ಯಕ್ಟ್ ಪಾಲಿಸಬೇಕು ಎಂದು ಹೇಳಿ ಭಯ ಹುಟ್ಟಿಸಿದ್ದಾರೆ. ಅಲ್ಲದೆ, ತಾವು ಸರ್ವೇಲೈನ್ಸ್ನಲ್ಲಿರುವುದರಿಂದ ಈ ವಿಚಾರ ಯಾರಿಗೂ ತಿಳಿಸಬಾರದು ಎಂದು ಬೆದರಿಸಿದ್ದಾರೆ.
ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ ಎರಡು ದಿನಗಳಲ್ಲಿ ಕ್ಲಿಯರೆಸ್ಸ್ ನೀಡುವುದಾಗಿ ನಂಬಿಸಿದ ಆರೋಪಿಗಳು, ದೂರುದಾರರಿಂದ ಬ್ಯಾಂಕ್ ಖಾತೆ ಹಾಗೂ ಆಸ್ತಿ ವಿವರಗಳನ್ನು ಪಡೆದುಕೊಂಡಿದ್ದಾರೆ. ನಂತರ ತಮ್ಮ ಸೂಚನೆಯಂತೆ ನಿರ್ದಿಷ್ಟ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವಂತೆ ತಿಳಿಸಿದ್ದಾರೆ.
ಆರೋಪಿಗಳ ಸೂಚನೆಯಂತೆ ದೂರುದಾರರು 60 ಲಕ್ಷ ರೂ. ಹಾಗೂ ಅ.3ರಂದು 1.40 ಕೋಟಿ ರೂ. ಹಣ ಆರ್ಟಿಜಿಎಸ್ ಮೂಲಕ ವರ್ಗಾಯಿಸಿದ್ದಾರೆ. ಸೆ.25ರಿಂದ ಅ.5ರವರೆಗೆ ಹಂತ ಹಂತವಾಗಿ ಒಟ್ಟು ಎರಡು ಕೋಟಿ ರೂ. ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಸಾರ್ವಜನಿಕರಿಗೆ ಈ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ವಿವಿಧ ಸ್ವರೂಪದಲ್ಲಿ ವಂಚನೆ ಪ್ರಕರಣಗಳು ಮುಂದುವರಿಯುತ್ತಲೇ ಇವೆ.
ಡಿಜಿಟಲ್ ವಂಚನೆಯಿಂದ ಕೋಟ್ಯಂತರ ರೂಪಾಯಿ ಹಣವನ್ನು ಅಮಾಯಕರು ಕಳೆದುಕೊಳ್ಳುತ್ತಿದ್ದಾರೆ. ಗೋಲ್ಡನ್ ಅವರ್ ಒಳಗಡೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದರೆ ವಂಚನೆ ತಡೆಯಲು ಅವರು ಪ್ರಯತ್ನ ನಡೆಸುತ್ತಾರೆ. ಆದರೆ, ತಡವಾಗಿ ದೂರು ನೀಡಿದರೆ ವಂಚನೆ ತಡೆಯುವುದು ಕಷ್ಟಸಾಧ್ಯವಾಗಲಿದೆ.
A 75-year-old woman was allegedly cheated of ₹2 crore by unidentified persons who posed as police and CBI officers and threatened her under the guise of a “digital arrest.” A case has been registered at the Cyber Police Station.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
08-10-26 08:03 pm
HK News Staffer
ಭಾರತೀಯ ಪೈಲಟ್ ಸಾಹಸಕ್ಕೆ ಅಮೆರಿಕ ಸಂಸತ್ ಗೌರವ ; 17...
07-10-26 01:10 pm
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
08-10-26 04:30 pm
HK News Staffer
Santhosh laad, Araga jnanendra ಕಾರ್ಮಿಕ ಇಲಾಖೆಯ...
08-10-26 04:27 pm
ಆಟೋದಲ್ಲಿ 48 ಗ್ರಾಂ ಚಿನ್ನ ಬಿಟ್ಟುಹೋದ ಮಹಿಳೆ ; ‘ಚಿ...
08-10-26 12:06 pm
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
08-10-26 08:44 pm
HK News Staffer
ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಹಿಂಡಿಗೆ ಲಾರಿ...
08-10-26 08:07 pm
Online game, Death: ಆನ್ಲೈನ್ ಗೇಮ್ಗಾಗಿ 4 ಲಕ್ಷ...
08-10-26 04:56 pm
CBI ಹೆಸರಲ್ಲಿ ಬೆದರಿಕೆ, ‘ಡಿಜಿಟಲ್ ಅರೆಸ್ಟ್’ ನಾಟಕ...
08-10-26 11:08 am
ಮಂಗಳೂರು ರೈಲಿನಲ್ಲಿ ಲ್ಯಾಪ್ಟಾಪ್, ಚಿನ್ನದ ಸರ ಕಳವು...
08-10-26 10:59 am