ಬ್ರೇಕಿಂಗ್ ನ್ಯೂಸ್
07-10-26 02:39 pm HK News Staffer ಕರಾವಳಿ
ಮಂಗಳೂರು, ಅ.7: ಕರಾವಳಿ ಕರ್ನಾಟಕದ ಹೆಮ್ಮೆಯ ತುಳು ಭಾಷೆಯನ್ನು ಡಿಜಿಟಲ್ ಜಗತ್ತಿನಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆ ಎಂದು ಘೋಷಣೆ ಮಾಡಿದ ನಂತರ ಇದೀಗ ಅದರ ಲಿಪಿಯನ್ನು ಕೇವಲ ಶೈಕ್ಷಣಿಕ ಅಥವಾ ಗ್ರಂಥಾಲಯದ ದಾಖಲೆಗಳಿಗೆ ಸೀಮಿತಗೊಳಿಸದೆ, ದೈನಂದಿನ ಡಿಜಿಟಲ್ ಸಂವಹನಕ್ಕೆ ತರುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲಾಗಿದೆ.
ಸ್ಮಾರ್ಟ್ ಫೋನ್ಗಳಲ್ಲಿ ಅತ್ಯಂತ ಸರಳವಾಗಿ ತುಳು ಲಿಪಿಯನ್ನು ಟೈಪ್ ಮಾಡಲು ನೆರವಾಗುವ ‘ಕುರಲ್ ತುಳು ಟಚ್’ ಕೀಬೋರ್ಡ್ ಅನ್ನು ಬಿಡುಗಡೆ ಮಾಡಲಾಗಿದೆ. ‘ಜೈ ತುಳುನಾಡ್’ ಸಂಸ್ಥೆ ಹಾಗೂ ಯುವ ತಂತ್ರಜ್ಞರ ತಂಡವು ಅಭಿವೃದ್ಧಿಪಡಿಸಿರುವ ಈ ಕೀಬೋರ್ಡ್, ಜನಪ್ರಿಯ ‘ಬರವು ಸರ್ವ’ ಆಪ್ನ ಭಾಗವಾಗಿ ಕಾರ್ಯ ನಿರ್ವಹಿಸಲಿದೆ. ತುಳು ಅಕ್ಷರಗಳು, ಸಂಖ್ಯೆಗಳು, ಗುಣಿತಾಕ್ಷರ ಹಾಗೂ ಒತ್ತಕ್ಷರಗಳನ್ನು ಅತ್ಯಂತ ನಿಖರವಾಗಿ ಟೈಪ್ ಮಾಡಲು ಇದು ಅನುವು ಮಾಡಿಕೊಡುತ್ತದೆ. ಫ್ಲಟರ್ ಮತ್ತು ಫೈರ್ ಬೇಸ್ ತಂತ್ರಜ್ಞಾನವನ್ನು ಬಳಸಿ ಕೇವಲ ಎರಡೇ ವಾರಗಳಲ್ಲಿ ಈ ಕೀಬೋರ್ಡ್ ಅನ್ನು ವಿನ್ಯಾಸಗೊಳಿಸಲಾಗಿದೆ. ಮೊಬೈಲ್ನ ಸಣ್ಣ ಪರದೆಯ ಮೇಲೆ ಅಕ್ಷರಗಳನ್ನು ಸರಿಯಾಗಿ ಗುರುತಿಸಿ ಟೈಪ್ ಮಾಡಲು ಅನುಕೂಲವಾಗುವಂತೆ ತುಳು ಫಾಂಟ್ಗಳನ್ನು ಕೀಬೋರ್ಡ್ ಲೇಔಟ್ಗೆ ನಿಖರವಾಗಿ ಜೋಡಿಸುವುದು ದೊಡ್ಡ ತಾಂತ್ರಿಕ ಸವಾಲಾಗಿತ್ತು ಎಂದು ತಂತ್ರಜ್ಞ ಹರ್ಷಿತ್ ದೇವಾಡಿಗ ತಿಳಿಸಿದ್ದಾರೆ.

ಕೇವಲ ಕೀಬೋರ್ಡ್ ಮಾತ್ರವಲ್ಲದೆ, ‘ಬರವು ಸರ್ವ’ ಆಪ್ ತುಳು ಭಾಷೆ ಹಾಗೂ ಸಂಸ್ಕೃತಿಯನ್ನು ಕಲಿಯಲು ಬಯಸುವವರಿಗೆ ಸೂಕ್ತ ವೇದಿಕೆಯಾಗಿದೆ. ಈ ಆಪ್ನಲ್ಲಿ ತುಳು ನಿಘಂಟು , ದಿನನಿತ್ಯ ಬಳಸುವ ವಾಕ್ಯಗಳು, ಆಡಿಯೋ ಆಧಾರಿತ ಕಲಿಕಾ ಸಾಮಗ್ರಿಗಳು ಹಾಗೂ ಕರಾವಳಿಯ ಪರಂಪರೆಯನ್ನು ಸಾರುವ ಅಪರೂಪದ ಛಾಯಾಚಿತ್ರಗಳಿವೆ. ಬಳಕೆದಾರರು ನಿಘಂಟಿಗೆ ಹೊಸ ತುಳು ಪದಗಳನ್ನು ಸೂಚಿಸಲು ಅವಕಾಶವಿದ್ದು, ಪರಿಶೀಲನೆಯ ನಂತರ ಅವುಗಳನ್ನು ಆಪ್ಗೆ ಸೇರಿಸಲಾಗುತ್ತದೆ. ಸಂಶೋಧಕಿ ಬನಶ್ರೀ ಅವಿನಾಶ್ ಅವರು ತುಳು ಲಿಪಿ ಕಲಿಕೆಗೆ ಅಗತ್ಯವಾದ ಪಠ್ಯ ಹಾಗೂ ವಿಡಿಯೋ ವಿಷಯಗಳನ್ನು ಒದಗಿಸುವ ಮೂಲಕ ಆಪ್ಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಕೇಂದ್ರ ಭಾರತೀಯ ಭಾಷೆಗಳ ಸಂಸ್ಥೆ ಅನುಮೋದಿಸಿದ ತುಳು ಲಿಪಿಯನ್ನು ಡಿಜಿಟಲ್ ಜಗತ್ತಿಗೆ ಪರಿಚಯಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಜೈ ತುಳುನಾಡ್ ಸಂಸ್ಥೆಯ ಶರತ್ ಕೊಡವೂರು ತಿಳಿಸಿದ್ದಾರೆ. ಇತ್ತೀಚೆಗೆ ಯೂನಿಕೋಡ್ ಕನ್ಸೋರ್ಟಿಯಂ 80 ತುಳು-ತಿಗಳಾರಿ ಅಕ್ಷರಗಳಿಗೆ ಅಧಿಕೃತ ಯೂನಿಕೋಡ್ ಮಾನ್ಯತೆ ನೀಡಿದ್ದು, ಡಿಜಿಟಲ್ ಮಾಧ್ಯಮಗಳಲ್ಲಿ ತುಳು ಬಳಕೆಗೆ ತಾಂತ್ರಿಕ ಅಡಿಪಾಯ ಹಾಕಿಕೊಟ್ಟಿದೆ. ತುಳು ಅಕಾಡೆಮಿ ಹಾಗೂ ವಿದ್ವಾಂಸರ ಸಾಲು ಸಾಲು ವರ್ಷಗಳ ಶ್ರಮದ ಫಲವಾಗಿ, ಯುವಜನತೆ ಈಗ ಇಂಗ್ಲಿಷ್ ಅಥವಾ ಕನ್ನಡ ಲಿಪಿಯಲ್ಲಿ ತುಳು ಬರೆಯುವ ಬದಲು, ತಮ್ಮದೇ ಸ್ವಂತ ತುಳು ಲಿಪಿಯಲ್ಲೇ ವಾಟ್ಸಾಪ್, ಮೆಸೇಜ್ಗಳಲ್ಲಿ ಟೈಪಿಂಗ್ ಮಾಡಬಹುದಾಗಿದೆ. ಪ್ರಸ್ತುತ ‘ಕುರಲ್ ತುಳು ಟಚ್’ ಕೀಬೋರ್ಡ್ ಆಂಡ್ರಾಯ್ಡ್ ಸಾಧನಗಳಲ್ಲಿ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಐಒಎಸ್ ಬಳಕೆದಾರರಿಗೂ ಇದನ್ನು ವಿಸ್ತರಿಸಲು ತಂತ್ರಜ್ಞರ ತಂಡ ಯೋಜಿಸಿದೆ.
07-10-26 10:45 pm
HK News Staffer
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
07-10-26 02:39 pm
HK News Staffer
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
07-10-26 04:45 pm
HK News Staffer
Areca Nut Seized: ಅಸ್ಸಾಂ ಕಡೆಯಿಂದ ಕರ್ನಾಟಕ, ತಮಿ...
07-10-26 11:12 am
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm