ಬ್ರೇಕಿಂಗ್ ನ್ಯೂಸ್
07-10-26 11:12 am HK News Staffer ಕ್ರೈಂ
ಬೆಂಗಳೂರು, ಅ.7: ಅಸ್ಸಾಂ, ಪಶ್ಚಿಮ ಬಂಗಾಳ ಕಡೆಯಿಂದ ಲಾರಿಯಲ್ಲಿ ಅಕ್ರಮವಾಗಿ ತರಲಾಗುತ್ತಿದ್ದ ಭಾರೀ ಪ್ರಮಾಣದ ಅಡಿಕೆ ಚೀಲಗಳನ್ನು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಅಡಿಕೆಯನ್ನು ಸಾಗಿಸುತ್ತಿದ್ದ ವೇಳೆ ಲಾರಿ ಅಡ್ಡಗಟ್ಟಿ ಯಾವುದೇ ಪರವಾನಗಿ ಇಲ್ಲದೆ ವಶಕ್ಕೆ ಪಡೆಯಲಾಗಿದೆ.
ವಾಹನ ಸಂಖ್ಯೆ: WB 17-4074 ನೋಂದಣಿ ಸಂಖ್ಯೆಯ ಲಾರಿಯಲ್ಲಿ ಅಸ್ಸಾಂನಿಂದ ಕೊಲ್ಕತ್ತಾ ಮಾರ್ಗವಾಗಿ ಕೋಲಾರ, ಬೆಂಗಳೂರು, ಪಾಲಕ್ಕಾಡ್, ತಿರುಪತಿ, ಚಿತ್ತೂರು, ಪುಂಗನೂರು ಮತ್ತು ಕರ್ನಾಟಕ ಹಾಗೂ ತಮಿಳುನಾಡು ಕಡೆಗೆ ಅಡಿಕೆ ಸಾಗಿಸುತ್ತಿದ್ದರು ಎನ್ನುವುದು ತಿಳಿದುಬಂದಿದೆ. ತಪಾಸಣೆ ಕೈಗೊಂಡ ಸಮಯದಲ್ಲಿ 174 ಮೂಟೆಗಳ ಅಡಿಕೆ ಚೀಲಗಳು ಕಂಡುಬಂದಿರುತ್ತದೆ.
ಆಹಾರ ಪದಾರ್ಥದ ಮೂಲ ಮಾಲೀಕತ್ವ ಸಾಗಾಣಿಕೆ ಪರವಾನಗಿ/ನೋಂದಣಿ, ಪ್ಯಾಕಿಂಗ್/ಲೇಬಲಿಂಗ್ ಹಾಗೂ ಗುಣಮಟ್ಟಕ್ಕೆ ಪರಿಶೀಲಿಸಿದ್ದು ಯಾವುದೇ ಮಾಹಿತಿಗಳು ಲಭ್ಯವಾಗಿರುವುದಿಲ್ಲ. ಸದರಿ ಮೂಟೆಗಳಲ್ಲಿ 05 ಅಡಿಕೆ ಮಾದರಿಗಳನ್ನು ತಪಾಸಣೆಗೆ ಒಳಪಡಿಸಿದ್ದು, ಮೂರು ಕಾನೂನಾತ್ಮಕ ಮಾದರಿಗಳಲ್ಲಿ ಒಂದು ಮಾದರಿಯು ಅಸುರಕ್ಷಿತ (Unsafe & Substandard) ಎಂದು ವರದಿಯಾಗಿರುತ್ತದೆ. ಇನ್ನೆರಡು ಮಾದರಿಯಲ್ಲಿ ಒಂದು unsafe ಹಾಗೂ 1 ಮಾದರಿಯು ಸೇಫ್ ಎಂದು ವರದಿ ಬಂದಿರುತ್ತದೆ. ಇದರ ಬಗ್ಗೆ ಸ್ಥಳಿಯ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



ಪ್ರಸ್ತುತ ಎಲ್ಲ ಅಡಿಕೆ ಮೂಟೆಗಳನ್ನು ಕೋಲಾರ ಜಿಲ್ಲಾ ಕೇಂದ್ರದಲ್ಲಿನ ಆಹಾರ ಮತ್ತು ನಾಗರಿಕ ಸರಬರಾಜು ಸಗಟು ಮಳಿಗೆಯಲ್ಲಿ ದಾಸ್ತಾನು ಮಾಡಲಾಗಿರುತ್ತದೆ. ಅಡಿಕೆ ಮಾದರಿಗಳು Unsafe & Substandard ಎಂದು ಬಂದಿರುವ ವರದಿಯನ್ವಯ FSSAI ಆಹಾರ ಸುರಕ್ಷತಾ ಕಾನೂನು ನಿಯಮಗಳನ್ವಯ ಸೆಕ್ಷನ್ 51, 59ರ ಪ್ರಕಾರ ಜೆ.ಎಂ.ಎಫ್.ಸಿ ಹಾಗೂ ADC ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಲಾಗುವುದು. ಪರಿಶೀಲನೆ ಸಂದರ್ಭದಲ್ಲಿ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಮಧ್ಯೆ ಲಾರಿಯಲ್ಲಿ ದೊರೆತ ದಾಖಲೆಗಳಲ್ಲಿ ವ್ಯಾಪಾರಿಗಳಾದ ಖಾಜಾರೆಡ್ಡಿ, ಎಸ್, ಚೆನ್ನೈ (10 ಮೂಟೆಗಳು), ಎಸ್.ಡಿ.ಸಿ ಎಂಟರ್ ಪ್ರೈಸಸ್, ಪಾಲಕ್ಕಾಡ್ (12 ಮೂಟೆಗಳು), ಗೋಲ್ಡನ್ ಟ್ರೇಡರ್ಸ್, ತಿರುಪತಿ (20 ಮೂಟೆಗಳು), ನಿಮ್ಮ ಟ್ರೇಡರ್ಸ್, ಪುಂಗನೂರು (15 ಮೂಟೆಗಳು), ఎನ್.ಎಂ ಟ್ರೇಡರ್ಸ್, ವೇಪನಪಲ್ಲಿ, ತಮಿಳುನಾಡು (10 ಮೂಟೆಗಳು), ಬಸವೇಶ್ವರ ಟ್ರೇಡರ್ಸ್, ಬೆಂಗಳೂರು (02 ಡಾಕೆಟ್ಗಳು- 28 ಮೂಟೆಗಳು ಹಾಗೂ 26 ಮೂಟೆಗಳು), ಬಿ.ಎಸ್. ಎಂಟರ್ಪ್ರೈಸಸ್, ಕೋಲಾರ (53 ಮೂಟೆಗಳು) ಎಂಬಿತ್ಯಾದಿ ಬಿಲ್ಲುಗಳ ಮೇಲೆ ಲಭ್ಯವಿದ್ದ ದೂರವಾಣಿ ಸಂಖ್ಯೆಗಳ ಆಧಾರದಲ್ಲಿ ಸದರಿ FBOಯವರನ್ನು ಕೋಲಾರಕ್ಕೆ ಕರೆಸಲಾಗಿದ್ದು, ಇದೇ ಮೊದಲ ಬಾರಿಗೆ ಸದರಿ ಅಡಿಕೆ ಸಾಮಗ್ರಿಗಳನ್ನು ಸಗಟು ಮಾರಾಟಗಾರರನ್ನು ಸಂಪರ್ಕಿಸಿ ಆನ್ಲೈನ್ ಮೂಲಕ ಖರೀದಿಸಿರುವುದಾಗಿ ತಿಳಿಸಿರುತ್ತಾರೆ.
Food Safety Department officials have seized 174 sacks of areca nuts that were allegedly being transported without the required documents and licences in Mulbagal taluk of Kolar district.
07-10-26 10:45 pm
HK News Staffer
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
07-10-26 02:39 pm
HK News Staffer
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
07-10-26 04:45 pm
HK News Staffer
Areca Nut Seized: ಅಸ್ಸಾಂ ಕಡೆಯಿಂದ ಕರ್ನಾಟಕ, ತಮಿ...
07-10-26 11:12 am
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm