ಬ್ರೇಕಿಂಗ್ ನ್ಯೂಸ್
07-10-26 04:45 pm HK News Staffer ಕ್ರೈಂ
ಮಂಗಳೂರು, ಅ.7: ಮೂಡುಶೆಡ್ಡೆ ವ್ಯಾಪ್ತಿಯಲ್ಲಿ ತನ್ನ ಹಾಗೂ ಇನ್ನಿತರ 60ಕ್ಕೂ ಹೆಚ್ಚು ಮಂದಿಯ ಹೆಸರನ್ನು ಮತದಾರ ಪಟ್ಟಿಯಿಂದ ತೆಗೆದುಹಾಕುವಂತೆ ಸುಳ್ಳು ಅರ್ಜಿ ಕೊಟ್ಟಿದ್ದಾರೆಂದು ಅನಿಶಾ ಎಂಬವರು ಕಾವೂರು ಠಾಣೆಗೆ ದೂರು ಕೊಟ್ಟಿದ್ದು, ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅನಿಶಾ ಅವರು 2021ರಲ್ಲಿ ಕಾವೂರಿನ ಅಬ್ದುಲ್ ಇಮ್ತಿಯಾಜ್ ಎಂಬವರನ್ನು ಮದುವೆಯಾಗಿದ್ದು, ಗಂಡ ನಾಲ್ಕು ವರ್ಷಗಳಿಂದ ಉದ್ಯೋಗ ನಿಮಿತ್ತ ಸೌದಿಯಲ್ಲಿರುವುದರಿಂದ ತನ್ನ ತಾಯಿ ಮನೆಯಾದ ಮೂಡುಶೆಡ್ಡೆಯ ಎದುರುಪದವಿನಲ್ಲಿ ವಾಸವಿದ್ದೇನೆ. ಮೂಡುಶೆಡ್ಡೆಯಲ್ಲೇ ತನ್ನ ಮತ ಚಲಾಯಿಸುತ್ತಿದ್ದು, ಐಡಿ ಕಾರ್ಡ್ ಹೊಂದಿದ್ದೇನೆ. ತಾನು ಅಲ್ಲಿಂದ ಬೇರೆಲ್ಲೂ ವಲಸೆ ಹೋಗಿಲ್ಲ. ಕಳೆದ 2023ರ ಮೂಲ್ಕಿ ಮೂಡುಬಿದ್ರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲು ಮತ ಚಲಾಯಿಸಿದ್ದೇನೆ.
ಇತ್ತೀಚೆಗೆ ನಡೆದ ಎಸ್ಐಆರ್ ಮ್ಯಾಪಿಂಗ್ ಪ್ರಕ್ರಿಯೆ ವೇಳೆ ತನ್ನ ಹೆಸರು ಮ್ಯಾಪಿಂಗ್ ಆಗಿದ್ದು ಕರಡು ಮತದಾರ ಪಟ್ಟಿಯಲ್ಲಿ ಹೆಸರು ಉಲ್ಲೇಖ ಆಗಿದೆ. ಆದರೆ ಮೂಡುಶೆಡ್ಡೆಯ ಕಿಶನ್ ಎಂಬವರು ತನ್ನ ಹೆಸರನ್ನು ಮತದಾರ ಪಟ್ಟಿಯಿಂದ ಅಳಿಸಿ ಹಾಕುವಂತೆ ಫಾರಮ್ ನಂಬರ್ 7 ಮೂಲಕ ಚುನಾವಣಾಧಿಕಾರಿಗೆ ಸುಳ್ಳು ಅರ್ಜಿ ಕೊಟ್ಟಿದ್ದಾರೆ. ಇದಲ್ಲದೆ, ತನ್ನ ತಂಗಿ ಆಯಿಷಾ ಭಾನು ಮತ್ತು ಶಿವನಗರ, ಎದುರುಪದವು ಬೂತುಗಳಲ್ಲಿ ಇತರ 68 ಮಂದಿ ನೈಜ ಮತದಾರರ ಹೆಸರು ಅಳಿಸಿ ಹಾಕುವಂತೆ ಅರ್ಜಿ ಕೊಟ್ಟಿದ್ದಾರೆ. ಸುಳ್ಳು ಮಾಹಿತಿ ಕೊಟ್ಟು ಚುನಾವಣಾ ಆಯೋಗವನ್ನು ತಪ್ಪು ದಾರಿಗೆಳೆಯಲು ಪ್ರಯತ್ನಿಸಿದ ಕಿಶನ್, ರಿತೇಶ್, ಯುವರಾಜ್, ಶಶಿಕಲಾ ಎಂಬವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಕೋರ್ಟ್ ಮೂಲಕ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಸೂಚನೆ ಬಂದಿರುವ ಕಾರಣ ಕಾವೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
07-10-26 10:45 pm
HK News Staffer
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
07-10-26 02:39 pm
HK News Staffer
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
07-10-26 04:45 pm
HK News Staffer
Areca Nut Seized: ಅಸ್ಸಾಂ ಕಡೆಯಿಂದ ಕರ್ನಾಟಕ, ತಮಿ...
07-10-26 11:12 am
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm