ಬ್ರೇಕಿಂಗ್ ನ್ಯೂಸ್
31-10-26 09:40 pm Mangaluru Staffer ಕರಾವಳಿ
ಮಂಗಳೂರು, ಅ.31: ಮತದಾನದ ಹಕ್ಕು ಕಸಿಯುವ ಎಸ್ಐಆರ್ ವಿರುದ್ಧ ಮಾತ್ರ ನಮ್ಮ ಹೋರಾಟ ಅಲ್ಲ. ಬಿಜೆಪಿ ಸರಕಾರ ಇಳಿಸಲೆಂದೇ ನಮ್ಮ ಹೋರಾಟ ಎಂದು ಬಹುಭಾಷಾ ನಟ, ಹೋರಾಟಗಾರ ಪ್ರಕಾಶ್ ರಾಜ್ ಪುನರುಚ್ಚರಿಸಿದ್ದಾರೆ.
ಮಂಗಳೂರಿನಲ್ಲಿ ಜನತಾ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಕಾಶ್ ರಾಜ್ ಮಾತನಾಡಿದರು. ನಗರದ ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರೆಗೆ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ನಡೆದ ಜನತಾ ನಡಿಗೆ ಕಾರ್ಯಕ್ರಮದಲ್ಲಿ ಪ್ರಕಾಶ್ ರಾಜ್ ಪ್ರಮುಖ ಭಾಷಣ ಮಾಡಿದರು. ಈ ಹೋರಾಟ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಹಾಗೂ ಆರೆಸ್ಸೆಸ್ ಪ್ರೇರಿತ ಸರಕಾರದ ವಿರುದ್ಧ ಹೋರಾಟ. ಎಸ್ಐಆರ್ ವಿರುದ್ಧ, ಗ್ಯಾನೇಶ್ ಕುಮಾರ್ ಪದಚ್ಯುತಿಗೆ ಒತ್ತಾಯಿಸಿ ಹೋರಾಟ. ಮೋದಿಯವರು ನಮ್ಮ ಸರಕಾರ ಉರುಳಿಸಲು ಬಂದಿರುವುದು ಎಂದು ನಮ್ಮ ಹೋರಾಟದ ಬಗ್ಗೆ ಹೇಳಿದ್ದಾರೆ. ಹೌದು ನಾವು ನಿಮ್ಮ ಸರಕಾರ ಉರುಳಿಸಲೇ ಬಂದಿರುವುದು ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.



ನಾವು ನೇಪಾಳ, ಬಾಂಗ್ಲಾದೇಶ ರೀತಿ ಹಿಂಸೆ ಮಾಡುವುದರಿಂದ ಅಲ್ಲ. ನಾವು ಪ್ರೀತಿಯಿಂದ, ಅಂಬೇಡ್ಕರ್ ಅವರು ಸಂವಿಧಾನದಲ್ಲಿ ನೀಡಿರುವ ಮತದಾನದ ಹಕ್ಕಿನಿಂದ ಸರಕಾರ ಬದಲಿಸಲಿದ್ದೇವೆ. ಈ ರಂಗಾ ಬಿಲ್ಲಾ ಬಿಜೆಪಿ ಸರಕಾರವನ್ನು ಬುಡ ಸಮೇತ ಇಳಿಸಲಿದ್ದೇವೆ ಎನ್ನುವ ಮೂಲಕ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ರಂಗಾ ಬಿಲ್ಲಾ ಎಂದು ಹೋಲಿಸಿದರು.
ಎಸ್ಐಆರ್ ಮೂಲಕ ಬರೀ ಮತ ಕಳ್ಳತನ ನಡೆಯುತ್ತಿರುವುದಲ್ಲ. ಇತ್ತೀಚಿನ ಚುನಾವಣೆಗಳಲ್ಲಿ ಹೆಚ್ಚಿಸಿರುವ ಮತಗಳನ್ನು ಅಳಿಸಿ ಹಾಕಲು ಎಸ್ ಐ ಆರ್ ತಂದಿರುವುದು. ಅದರ ವಿರುದ್ಧ ಈ ನಮ್ಮ ಹೋರಾಟ. ಈ ಹೋರಾಟ ಗೆಲ್ಲುವುದು ಪ್ರಜೆಗಳಿಂದ ಮಾತ್ರ ಸಾಧ್ಯ. ಇದು ರಾಜಕೀಯ ಪಕ್ಷಗಳಿಂದ ಸಾಧ್ಯವಿಲ್ಲ. ಎಲ್ಲ ರಾಜಕೀಯ ಪಕ್ಷಗಳಿಗೆ ನಾವು ಓಟಿನ ಮಿಶನ್ ಮಾತ್ರ.
ಕರಾವಳಿಯ ಜನರನ್ನು ಹುಂಬರನ್ನಾಗಿಸಿ, ಮಂಗಗಳಾಗಿಸಿ ಮೆದುಳಿಗೆ ಸೆಗಣಿ ತುಂಬುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ, ಆರ್ಥಿಕ ಸ್ಥಿತಿ, ಯುವಕರ ಉದ್ಯೋಗ ಸ್ಥಿತಿ ಏನಾಗಿದೆ ಎನ್ನುವುದನ್ನು ನಾವು ಯೋಚನೆ ಮಾಡಬೇಕಿದೆ. ಈಗ, ಆರಂಭವಾಗಿರುವ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲದು ಎಂದು ಪ್ರಕಾಶ್ ರಾಜ್ ಹೇಳಿದರು. ಜಾಥಾದಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
30-10-26 08:26 pm
HK News
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
'ಮೈಸೂರು ಅರಮನೆ ಸರ್ಕಾರಕ್ಕೆ ಸೇರಿದ್ದು' ತನ್ನ ಹೇಳಿಕ...
28-10-26 10:52 pm
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
31-10-26 09:40 pm
Mangaluru Staffer
14 ವರ್ಷಗಳ ಬಳಿಕ ಸೌಜನ್ಯ ಕೇಸ್ ಮರುತನಿಖೆ ; ಮೃತದೇಹ...
31-10-26 05:19 pm
ಉದ್ಘಾಟನೆಗೂ ಮುನ್ನವೇ ಇಂದಿರಾ ಕ್ಯಾಂಟೀನ್ ಹೆದ್ದಾರಿಗ...
31-10-26 02:25 pm
ಸೌಜನ್ಯಾ ಮರು ತನಿಖೆ ; ಎಸ್ಐಟಿ ಮುಖ್ಯಸ್ಥರಾಗಿ ಚೇತನ್...
30-10-26 12:51 pm
ಸೌಜನ್ಯಾ ಪ್ರಕರಣ ತನಿಖೆಯಲ್ಲಿ ಭಾಗಿಯಾಗಿದ್ದ ಎಲ್ಲ ಪೊ...
30-10-26 12:19 pm
31-10-26 01:16 pm
HK News Staffer
ಕಾರವಾರದ ಮುದಗಾ ಬಂದರಿನಲ್ಲಿ ಮತ್ತೆ ವಿಷಾನಿಲ ದುರಂತ:...
31-10-26 01:05 pm
ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್ ; ಕಾಂಗ್ರೆ...
30-10-26 11:01 pm
Cyprian Pinto, Mangalore: 50ಕ್ಕೂ ಹೆಚ್ಚು ಬಾಲಕರ...
30-10-26 09:57 pm
ಆನ್ಲೈನಲ್ಲಿ ಕೇರಳ ಲಾಟರಿ ಗೆದ್ದ ಮಂಗಳೂರಿನ ವ್ಯಕ್ತಿಗ...
30-10-26 05:16 pm