ಬ್ರೇಕಿಂಗ್ ನ್ಯೂಸ್
27-11-21 05:00 pm Source: FilimBeat Kannada ಸಿನಿಮಾ
ಕೊರೊನಾ ಕಾರಣಕ್ಕೆ ಸತತ ಎರಡು ವರ್ಷ ಬಹುತೇಕ ಬಂದ್ ಆಗಿದ್ದ ಕನ್ನಡ ಚಿತ್ರರಂಗ ಇದೀಗ ನಿಧಾನಕ್ಕೆ ಗರಿಗೆದರುತ್ತಿದೆ. ಒಂದೊಂದಾಗಿ ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿವೆ.ಸ್ಟಾರ್ ನಟರು ಸಹ ತಮ್ಮ ಸಿನಿಮಾವನ್ನು ಚಿತ್ರಮಂದಿರಗಳಿಗೆ ತರುತ್ತಿದ್ದಾರೆ. ಇನ್ನೂ ಹಲವು ಸಿನಿಮಾಗಳು ತೆರೆಗೆ ಬರಬೇಕಿದೆ.
ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ಸಾಕಷ್ಟು ಒಳ್ಳೆಯ ಕನ್ನಡ ಸಿನಿಮಾಗಳು ತೆರೆಗೆ ಬಂದಿವೆ. ಶಿವರಾಜ್ ಕುಮಾರ್, ಸುದೀಪ್, ದುನಿಯಾ ವಿಜಯ್ ಅಂಥಹಾ ಸ್ಟಾರ್ ನಟರ ಸಿನಿಮಾಗಳು ಸಹ ಈ ಎರಡು ತಿಂಗಳ ಅವಧಿಯಲ್ಲಿ ಬಿಡುಗಡೆ ಆಗಿವೆ. 'ರತ್ನನ್ ಪ್ರಪಂಚ' ಸಿನಿಮಾ ನೇರ ಒಟಿಟಿಗೆ ಬಿಡುಗಡೆ ಆಗಿ ಹಿಟ್ ಸಹ ಎನಿಸಿಕೊಂಡಿದ್ದು ವಿಶೇಷ. ಇದೀಗ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ ಹೊಸ್ತಿಲಲ್ಲಿದ್ದು, ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ.

ಶ್ರೀಮುರಳಿ ಸಿನಿಮಾದಿಂದ ಆರಂಭ
ಡಿಸೆಂಬರ್ ತಿಂಗಳ ಮೂರನೇ ತಾರೀಖಿಗೆ ಶ್ರೀಮುರಳಿ ನಟನೆಯ 'ಮದಗಜ' ಸಿನಿಮಾ ಬಿಡುಗಡೆ ಆಗಲಿದೆ. ಟ್ರೇಲರ್, ಪೋಸ್ಟರ್ನಿಂದ ಗಮನ ಸೆಳೆದಿರುವ ಈ ಸಿನಿಮಾವನ್ನು ಮಹೇಶ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಜನಪ್ರಿಯ ನಿರ್ಮಾಪಕ ಉಮಾಪತಿ ಶ್ರೀನಿವಾಸ್. ಈ ಸಿನಿಮಾ ಹಿಟ್ ಆಗುವ ಸಾಧ್ಯತೆ ದಟ್ಟವಾಗಿದೆ. ಸಿನಿಮಾದಲ್ಲಿ ಆಶಿಕಾ ರಂಗನಾಥ್ ನಾಯಕಿ. ಜಗಪತಿ ಬಾಬು ವಿಲನ್.

ಡಿಸೆಂಬರ್ 10 ಮೂರು ಪ್ರಮುಖ ಸಿನಿಮಾಗಳು ತೆರೆಗೆ
ಡಿಸೆಂಬರ್ 10ಕ್ಕೆ ಕನ್ನಡ ಚಿತ್ರರಂಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ಆ ದಿನದಂದು ಮೂರು ಪ್ರಮುಖ ಕನ್ನಡ ಸಿನಿಮಾ ಬಿಡುಗಡೆ ಆಗಲಿವೆ. ಶರಣ್ ನಟನೆಯ 'ಅವತಾರ ಪುರುಷ', ಪ್ರೇಮ್, ರಚಿತಾ ರಾಮ್ ನಟನೆಯ 'ಲವ್ ಯೂ ರಚ್ಚು' ಸಿನಿಮಾ ಸಹ ಅದೇ ದಿನ ಬಿಡುಗಡೆ ಆಗಲಿದೆ. ರವಿಚಂದ್ರನ್ ನಟನೆಯ 'ದೃಶ್ಯ 2' ಸಿನಿಮಾ ಸಹ ಡಿಸೆಂಬರ್ 10ರಂದೇ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

ಕ್ರಿಸ್ಮಸ್ ರಜೆಗೆ ಇಬ್ಬರು ನಟರ ಪೈಪೋಟಿ
ಆ ಬಳಿಕ ಡಿಸೆಂಬರ್ 24ರಂದು ಎರಡು ಪ್ರಮುಖ ಸಿನಿಮಾಗಳು ಪರಸ್ಪರ ಸ್ಪರ್ಧೆಗೆ ಇಳಿಯಲಿವೆ. ನಿಖಿಲ್ ಕುಮಾರಸ್ವಾಮಿ ನಟನೆಯ 'ರೈಡರ್' ಸಿನಿಮಾ ಡಿಸೆಂಬರ್ 24ಕ್ಕೆ ಬಿಡುಗಡೆ ಆಗಲಿದೆ. ಅದರ ಜೊತೆಗೆ ಡಾಲಿ ಧನಂಜಯ್ ನಟನೆಯ 'ಬಡವ ರಾಸ್ಕಲ್' ಸಿನಿಮಾ ಸಹ ಅದೇ ದಿನ ಬಿಡುಗಡೆ ಆಗಲಿದೆ. ಎರಡೂ ಸಿನಿಮಾಗಳ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ನಿಖಿಲ್ ಕುಮಾರಸ್ವಾಮಿ ಹಾಗೂ ಡಾಲಿ ಧನಂಜಯ್ ಇಬ್ಬರಿಗೂ ಪ್ರತ್ಯೇಕವಾದ ಅಭಿಮಾನಿ ಬಳಗವಿದ್ದು, ಎರಡೂ ಸಿನಿಮಾಗಳು ಭರ್ಜರಿ ಓಪನಿಂಗ್ ಅನ್ನೇ ಪಡೆದುಕೊಳ್ಳುವ ನಿರೀಕ್ಷೆ ಇದೆ.

ಪರಭಾಷೆಯ ಸಿನಿಮಾಗಳೂ ಬಿಡುಗಡೆ ಆಗಲಿವೆ
ಈ ಸಿನಿಮಾಗಳನ್ನು ಹೊರತುಪಡಿಸಿದರೆ ಕೆಲವು ಪರಭಾಷೆಯ ಪ್ರಮುಖ ಸಿನಿಮಾಗಳು ಕನ್ನಡದಲ್ಲಿಯೂ ಡಬ್ ಆಗಿ ಬಿಡುಗಡೆ ಆಗಲಿವೆ. ಅವುಗಳಲ್ಲಿ ಪ್ರಮುಖವಾದುದು ರಾಷ್ಟ್ರಪ್ರಶಸ್ತಿ ವಿಜೇತ ಮಲಯಾಳಂ ಸಿನಿಮಾ 'ಮರಕ್ಕರ್'. ಮೋಹನ್ಲಾಲ್ ನಟಿಸಿರುವ ಈ ಸಿನಿಮಾವು ಡಿಸೆಂಬರ್ 02ರಂದು ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲಿ ರಾಜ್ಯದಲ್ಲಿ ಬಿಡುಗಡೆ ಆಗಲಿದೆ. ಇನ್ನು ಡಿಸೆಂಬರ್ 17ಕ್ಕೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ನಟನೆಯ 'ಪುಷ್ಪ' ಸಿನಿಮಾವು ಕನ್ನಡ, ತೆಲುಗು ಭಾಷೆಗಳಲ್ಲಿ ರಾಜ್ಯದಲ್ಲಿ ಬಿಡುಗಡೆ ಆಗಲಿದೆ. ರಣ್ವೀರ್ ಸಿಂಗ್ ನಟನೆಯ '83' ಡಿಸೆಂಬರ್ 24ಕ್ಕೆ ಬಿಡುಗಡೆ ಆದರೆ ನಾನಿ, ಸಾಯಿ ಪಲ್ಲವಿ, ಕನ್ನಡಗಿ ಕೃತಿ ಶೆಟ್ಟಿ ನಟನೆಯ 'ಶ್ಯಾಮ್ ಸಿಂಘ ರಾಯ್' ಸಿನಿಮಾ ಡಿಸೆಂಬರ್ 24ಕ್ಕೆ ಬಿಡುಗಡೆ ಆಗಲಿದೆ.
The upcoming movies and their release dates in the month of December,2021. This listing is purely based on the announcements made by the producers/production houses and therefore, the release dates may differ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am