ಬ್ರೇಕಿಂಗ್ ನ್ಯೂಸ್
05-04-21 07:54 pm Headline Karnataka News Network ಸಿನಿಮಾ
ಬೆಂಗಳೂರು, ಎ.6: ಕಿರಿಕ್ ಪಾರ್ಟಿ ಯಶಸ್ಸಿನ ಬಳಿಕ ಪ್ರೀತಿಯಲ್ಲಿ ಬಿದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಸಂಬಂಧ ಹಳಸಿದ್ಯೋ ಏನೋ.. ಆದರೆ, ಹುಟ್ಟುಹಬ್ಬ, ಹೊಸ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಇಬ್ಬರೂ ಟ್ವೀಟ್ ಮಾಡಿಕೊಂಡು ಪರಸ್ಪರ ಶುಭ ಹಾರೈಸುತ್ತಾರೆ. ಈ ಬಾರಿಯೂ ರಶ್ಮಿಕಾ ಹುಟ್ಟುಹಬ್ಬಕ್ಕೆ ರಕ್ಷಿತ್ ಶೆಟ್ಟಿ ಹಳೆಯ ವಿಡಿಯೋವನ್ನು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.
ಕಿರಿಕ್ ಪಾರ್ಟಿ ಚಿತ್ರದ ಆಡಿಶನ್ ಸಂದರ್ಭದಲ್ಲಿನ ವಿಡಿಯೋವನ್ನು ರಕ್ಷಿತ್ ಹಂಚಿಕೊಂಡಿದ್ದು, ಬಹುಭಾಷೆಗಳಲ್ಲಿ ಯಶಸ್ವೀ ತಾರೆಯಾಗಿ ಮುನ್ನುಗ್ಗುತ್ತಿರುವ ರಶ್ಮಿಕಾಗೆ ಶುಭ ಹಾರೈಕೆ ಮಾಡಿದ್ದಾರೆ. ಕಿರಿಕ್ ಪಾರ್ಟಿ ಆಡಿಶನ್ ಸಂದರ್ಭದಲ್ಲಿ ನಿಮ್ಮ ಜೊತೆಗಿನ ಬ್ಯೂಟಿಫುಲ್ ಕ್ಷಣಗಳನ್ನು ಷೇರ್ ಮಾಡ್ತಿದ್ದೇನೆ. ಆನಂತರ ನೀವು ತುಂಬಾನೇ ಸಾಧನೆ ಮಾಡುತ್ತಾ ಹೋಗಿದ್ದೀರಿ. ಕನಸನ್ನು ನನಸಾಗಿಸಿಕೊಳ್ಳಲು ನೈಜ ವಾರಿಯರ್ ರೀತಿ ಹಿಂಬಾಲಿಸಿದ್ದೀರಿ. ನಿಮ್ಮ ಬಗ್ಗೆ ತುಂಬ ಹೆಮ್ಮೆ ಪಡುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು. ವೃತ್ತಿ ಜೀವನದಲ್ಲಿ ಮತ್ತಷ್ಟು ಯಶಸ್ಸು ಸಿಗಲಿ ಎಂದು ರಕ್ಷಿತ್ ಶೆಟ್ಟಿ ಹಾರೈಸಿದ್ದಾರೆ.
ನಿಶ್ಚಿತಾರ್ಥಿ ಮಾಡಿಕೊಂಡ ಬಳಿಕ ಇವರಿಬ್ಬರ ಸಂಬಂಧಕ್ಕೆ ಬ್ರೇಕ್ ಬಿದ್ದಿತ್ತು. ರಶ್ಮಿಕಾ ತೆಲುಗಿನಲ್ಲಿ ಬಿಝಿಯಾಗಿದ್ದರೆ, ರಕ್ಷಿತ್ ಕನ್ನಡದಲ್ಲೇ ಇತರ ಚಿತ್ರಗಳತ್ತ ತೊಡಗಿದ್ದರು. ಆಬಳಿಕ ಕೊಡಗಿನ ಬೆಡಗಿಯ ಜೊತೆ ರಕ್ಷಿತ್ ಜೊತೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ರಶ್ಮಿಕಾಗೆ ದೊಡ್ಡ ಯಶಸ್ಸು ತಂದುಕೊಟ್ಟಿದ್ದ ಕಿರಿಕ್ ಪಾರ್ಟಿ ಚಿತ್ರದ ಆಡಿಶನ್ ವೇಳೆಯ ವಿಡಿಯೋವನ್ನೇ ರಕ್ಷಿತ್ ಹಂಚಿಕೊಂಡಿದ್ದಾರೆ. ಆಕೆಯ ಜೊತೆಗೆ ಪ್ರೀತಿ ಇನ್ನೂ ಹಸಿರಾಗಿರುವುದನ್ನು ತೋರಿಸಿಕೊಂಡಿದ್ದಾರೆ.
Sharing this beautiful memory of yours from the @KirikParty audition. You have travelled so far since then, chasing you'r dreams like a real worrier. Proud of you girl and Happy Birthday to you. May you see more success 😀🤗 @iamRashmika pic.twitter.com/6M1rBCQnee
— Rakshit Shetty (@rakshitshetty) April 5, 2021
And the scene ☺️ https://t.co/wQ0B9tZbm0
— Rakshit Shetty (@rakshitshetty) April 5, 2021
It is Rashmika Mandanna's birthday today and film industry folks from across the country have taken to their social media pages to wish the national crush of the country on her birthday.
02-05-25 10:00 pm
Bangalore Correspondent
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 10:47 pm
Mangalore Correspondent
Mangalore Suhas Shetty Murder, Shobha Karandl...
02-05-25 09:26 pm
B Y Vijayendra, Suhas Shetty Murder, Mangalor...
02-05-25 06:44 pm
Brijesh Chowta, NIA, Suhas Shetty Murder: ಸುಹ...
02-05-25 06:31 pm
Mangalore Suhas Shetty Murder, ADGP Hitendra:...
02-05-25 03:10 pm
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm