ಬ್ರೇಕಿಂಗ್ ನ್ಯೂಸ್
11-03-21 03:29 pm Source: FILMIBEAT ಸಿನಿಮಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಇಂದು (ಮಾರ್ಚ್ 11) ಕರ್ನಾಟಕ ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗಿದೆ. ಬೆಳ್ಳಂಬೆಳಗ್ಗೆ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಕ್ಯೂ ನಿಂತು ರಾಬರ್ಟ್ ನೋಡಿ ಸಂಭ್ರಮಿಸುತ್ತಿದ್ದಾರೆ.
ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿರುವ ರಾಬರ್ಟ್ ಸಿನಿಮಾಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡದ ಜೊತೆಗೆ ತೆಲುಗಿನಲ್ಲೂ ದೊಡ್ಡ ಮಟ್ಟದಲ್ಲಿ ತೆರೆಗೆ ಬಂದಿರುವ ರಾಬರ್ಟ್ ಚಿತ್ರಕ್ಕೆ ಅಭಿಮಾನಿಗಳು ಮಾತ್ರವಲ್ಲದೇ ಸಿನಿ ಗಣ್ಯರು ಸಹ ಶುಭಾಶಯ ತಿಳಿಸುತ್ತಿದ್ದಾರೆ. ಟ್ವಿಟ್ಟರ್ ವಿಮರ್ಶೆ: ರಾಬರ್ಟ್ ಚಿಂದಿ, ಉಮಾಪತಿ ಗಿಫ್ಟ್ ಇದು, ತರುಣ್ಗೆ ಕ್ರೆಡಿಟ್ ಈಗಾಗಲೇ ಅನೇಕ ನಿರ್ದೇಶಕರು ಮತ್ತು ಕಲಾವಿದರು ರಾಬರ್ಟ್ ತಂಡಕ್ಕೆ ವಿಶ್ ಮಾಡಿದ್ದಾರೆ.
ಇದೀಗ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಹ ರಾಬರ್ಟ್ ತಂಡಕ್ಕೆ ಶುಭ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಶಾಂತ್ ನೀಲ್, 'ರಾಬರ್ಟ್ ತಂಡಕ್ಕೆ ಒಳ್ಳೆಯದಾಗಲಿ. ದರ್ಶನ್ ಸರ್ ಅವರಿಗೆ ಅಭಿನಂದನೆಗಳು. ತರುಣ್ ಸುಧೀರ್ ಮತ್ತು ಉಮಾಪತಿ ಅವರಿಗೂ ಅಭಿನಂದನೆಗಳು. ರಾಬರ್ಟ್ ಗ್ರ್ಯಾಂಡ್ ಆಗಿ ತೆರೆಗೆ ಬಂದಿದೆ. ಇಂದು ಎರಡು ದೊಡ್ಡ ಹಬ್ಬ' ಎಂದು ಟ್ವೀಟ್ ಮಾಡಿದ್ದಾರೆ.
ಪ್ರಶಾಂತ್ ನೀಲ್ ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಕೆಜಿಎಫ್-2 ಅಪ್ ಡೇಟ್ ಕೇಳಿ ಕಾಮೆಂಟ್ ಮಾಡುತ್ತಿದ್ದಾರೆ. ಮಾರ್ಚ್ 13ಕ್ಕೆ ಕೆಜಿಎಫ್-2 ಸಿನಿಮಾದ ಬಗ್ಗೆ ಮಾಹಿತಿ ನೀಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಇನ್ನು ರಾಬರ್ಟ್ ಸಿನಿಮಾದ ಮೊದಲ ಪ್ರದರ್ಶನ ಈಗಾಗಲೇ ಮುಕ್ತಾಯವಾಗಿದೆ.
ಬೆಳ್ಳಂಬೆಳಗ್ಗೆ ಸಿನಿಮಾ ನೋಡಿದ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೂಲಕ ದಾಖಲೆ ನಿರ್ಮಿಸಿದೆ.
This News Article Is A Copy Of FILMIBEAT
18-06-26 01:25 pm
HK News Staffer
Jayadeva Hospital, Mysuru: ಮೈಸೂರಿನ ಜಯದೇವ ಆಸ್ಪ...
18-06-26 01:17 pm
ಧರ್ಮಸ್ಥಳ ಕೇಸ್ ; ಎಡಪಂಥೀಯರ ಒತ್ತಡಕ್ಕೆ ಎಸ್ಐಟಿ, ಷಡ...
17-06-26 10:12 pm
ಆರ್ಎಸ್ಎಸ್ ಲೆಕ್ಕ ಕೇಳಲು ಇವನ್ಯಾರು? ಪ್ರಿಯಾಂಕ್ ಖ...
17-06-26 06:59 pm
ಜಿಮ್ ಮುಗಿಸಿ ಮನೆಗೆ ಬಂದ ಯುವಕನಿಗೆ ಹೃದಯಾಘಾತ ; ಹೆ...
17-06-26 06:35 pm
18-06-26 01:23 pm
HK News Staffer
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
18-06-26 12:33 pm
HK News Staffer
ಬಸ್ಸೋ, ಬಸ್ ನಿಲ್ದಾಣವೋ ? ಗುರುಪುರ ಬಂಡಸಾಲೆಯಲ್ಲಿ ವ...
16-06-26 11:35 am
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
18-06-26 01:20 pm
HK News Staffer
ಸ್ಕೂಟರಲ್ಲಿ ನಾಲ್ವರು ಹೆಣ್ಮಕ್ಕಳ ಜಾಲಿ ರೈಡ್; ನಿಯಂತ...
17-06-26 01:41 pm
ವಾಯುಪಡೆ ಅಧಿಕಾರಿ ಪತ್ನಿಗೆ ಅಮಲು ಪದಾರ್ಥ ನೀಡಿ ಅತ್ಯ...
16-06-26 08:32 pm
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm