ಬ್ರೇಕಿಂಗ್ ನ್ಯೂಸ್
15-09-22 04:34 pm Source: Vijayakarnataka ಸಿನಿಮಾ
ಬಾಲಿವುಡ್ ನಟ ಸಂಜಯ್ ದತ್ (Sanjay Dutt) 'ಕೆಜಿಎಫ್: ಚಾಪ್ಟರ್ 2' ಸಿನಿಮಾದಲ್ಲಿ ಅಧೀರನ ಪಾತ್ರ ಮಾಡಿ ಎಲ್ಲರ ಗಮನಸೆಳೆದಿದ್ದು ಗೊತ್ತೇ ಇದೆ. ಆ ಸಿನಿಮಾದಿಂದ ಅವರಿಗೂ ಕೂಡ ದೊಡ್ಡ ಬ್ರೇಕ್ ಸಿಕ್ಕಿದೆ. ಇದೀಗ ಸಂಜಯ್ ದತ್ ಮೇಲೆ ದಕ್ಷಿಣ ಭಾರತದ ಫಿಲ್ಮ್ ಮೇಕರ್ಸ್ ಕಣ್ಣಿಟ್ಟಿದ್ದಾರೆ. ಸದ್ಯ 'ಜೋಗಿ' ಪ್ರೇಮ್ ಆ ಸಾಲಿನಲ್ಲಿ ಮುಂಚೂಣಿಯಲ್ಲಿದ್ದು, ತಮ್ಮ ಹೊಸ ಸಿನಿಮಾಕ್ಕೆ ಸಂಜಯ್ ದತ್ ಅವರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಮತ್ತೊಮ್ಮೆ ಸಂಜು ಕನ್ನಡದಲ್ಲಿ ನಟಿಸುವುದು ಖಚಿತ.
ಧ್ರುವ ಸರ್ಜಾ & ಪ್ರೇಮ್ ಸಿನಿಮಾ
'ಏಕ್ ಲವ್ ಯಾ' ನಂತರ 'ಜೋಗಿ' ಪ್ರೇಮ್ ಒಂದು ಮಾಸ್ ಆ್ಯಕ್ಷನ್ ಸಿನಿಮಾವನ್ನು ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಸಿನಿಮಾಗೆ ಧ್ರುವ ಸರ್ಜಾ ಹೀರೋ. ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಮುಹೂರ್ತ ಮುಗಿಸಿರುವ ಈ ಸಿನಿಮಾಗೆ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಸದ್ಯ ಕಲಾವಿದರ ಆಯ್ಕೆಯಲ್ಲಿ ಪ್ರೇಮ್ ಬ್ಯುಸಿ ಆಗಿದ್ದಾರೆ. ಪರಭಾಷೆಯ ಬಿಗ್ ಸ್ಟಾರ್ಗಳನ್ನು ಈ ಸಿನಿಮಾಕ್ಕಾಗಿ ಅವರು ಕರೆತರುವುದಕ್ಕೆ ಮುಂದಾಗಿದ್ದಾರೆ. ಮೊದಲನೆಯದಾಗಿ ಸಂಜಯ್ ದತ್ ಅವರಿಗೆ ಅಪ್ರೋಚ್ ಮಾಡಿದ್ದಾರೆ. ಸಂಜು ಈಗಾಗಲೇ ಸ್ಕ್ರಿಪ್ಟ್ ಓದಿದ್ದು, ಅವರಿಗೆ ಇಷ್ಟವಾಗಿದೆಯಂತೆ.
ಸಂಜುಗೆ ವಿಲನ್ ಪಾತ್ರವಿದ್ದು, ಕಥೆಯನ್ನು ಅವರು ಇಷ್ಟಪಟ್ಟಿದ್ದಾರೆ. ಇನ್ನೇನಿದ್ದರೂ ಅವರಿಂದ ಗ್ರೀನ್ ಸಿಗ್ನಲ್ ಬರಬೇಕಿದೆ. ಆ ಬಗ್ಗೆ ಅಧಿಕೃತ ಮಾಹಿತಿಗಾಗಿ ಅಭಿಮಾನಿಗಳು ಕಾದಿದ್ದಾರೆ. ಒಂದು ವೇಳೆ ಸಂಜಯ್ ದತ್ ಒಪ್ಪಿಕೊಂಡರೆ, ತೆರೆಮೇಲೆ ಧ್ರುವ ಸರ್ಜಾ ಮತ್ತು ಸಂಜು ಮುಖಾಮುಖಿಯನ್ನು ನೋಡಿ ಫ್ಯಾನ್ಸ್ ಎಂಜಾಯ್ ಮಾಡಬಹುದಾಗಿದೆ. ಸದ್ಯ ಎ.ಪಿ. ಅರ್ಜುನ್ ಅವರ 'ಮಾರ್ಟಿನ್' ಸಿನಿಮಾದಲ್ಲಿ ಧ್ರುವ ಸರ್ಜಾ ಬ್ಯುಸಿ ಆಗಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ 'ಗಾಳಿಪಟ 2' ಖ್ಯಾತಿಯ ವೈಭವಿ ಶಾಂಡಿಲ್ಯಾ ಇದ್ದಾರೆ. 'ಮಾರ್ಟಿನ್' ಕೂಡ ಬಿಗ್ ಬಜೆಟ್ನಲ್ಲಿ ತಯಾರಾಗುತ್ತಿದ್ದು, ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಮಾಪಕರು ರೆಡಿ ಆಗಿದ್ದಾರೆ.
ಇನ್ನು, 'ಜೋಗಿ' ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ನ ಸಿನಿಮಾವು ಅಕ್ಟೋಬರ್ ತಿಂಗಳ ಅಂತ್ಯದಿಂದ ಶೂಟಿಂಗ್ ಆರಂಭಿಸಲಿದೆ. ಈ ಸಿನಿಮಾಗೆ 'ರಂಗಿತರಂಗ', 'ವಿಕ್ರಾಂತ್ ರೋಣ' ಖ್ಯಾತಿಯ ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಲಿದ್ದಾರೆ. ಈ ಚಿತ್ರಕ್ಕಾಗಿ ಧ್ರುವ ಸರ್ಜಾ 15 ಕೆ.ಜಿ. ತೂಕ ಕಡಿಮೆಯಾಗಬೇಕಿದೆ. ಇದುವರೆಗೂ ಯಾರೂ ನೋಡಿರದ ಲುಕ್ನಲ್ಲಿ ಧ್ರುವ ಕಾಣಿಸಿಕೊಳ್ಳುತ್ತಿದ್ದು, ಸಂಪೂರ್ಣ ರೆಟ್ರೋ ಸ್ಟೈಲ್ನಲ್ಲಿ ಇರಲಿದೆ.
ಈ ಚಿತ್ರಕ್ಕಾಗಿ 70ರ ದಶಕವನ್ನು ನಿರ್ದೇಶಕ ಪ್ರೇಮ್ ರಿಕ್ರಿಯೇಟ್ ಮಾಡುತ್ತಿದ್ದಾರೆ. ಬೆಂಗಳೂರಿನ ಸುಂಕದಕಟ್ಟೆಯಲ್ಲಿರುವ 20 ಎಕರೆ ಸ್ಥಳದಲ್ಲಿ ಭರ್ಜರಿ ಸೆಟ್, ಮೈಸೂರು ಲ್ಯಾಂಪ್ಸ್ ಒಳಗಡೆ ಒಂದು ಸೆಟ್, ಹೈದರಾಬಾದ್, ಮುಂಬೈನ ಕೆಲ ಸ್ಟುಡಿಯೋಗಳಲ್ಲಿ ಸೆಟ್ ಹಾಕಲಾಗುತ್ತಿದೆ. ಬಹುತೇಕ ಸಿನಿಮಾ ಸೆಟ್ನಲ್ಲೇ ಪೂರ್ತಿ ಚಿತ್ರೀಕರಣವಾಲಿದೆ.
Kgf Chapter 2 Fame Sanjay Dutt Approached For Dhruva Sarja Jogi Prems Next Movie.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm