ಬ್ರೇಕಿಂಗ್ ನ್ಯೂಸ್
06-09-22 11:15 am Bangalore Correspondent ಸಿನಿಮಾ
ಬೆಂಗಳೂರು,ಸೆ.6: 2 ಸೆಪ್ಟೆಂಬರ್ 2022 ವೂಟ್ ಸೆಲೆಕ್ಟ್ (Voot Select) ಬಹು ನಿರೀಕ್ಷಿತ ಕನ್ನಡ ಕೌಟುಂಬಿಕ ಚಿತ್ರ 'ಸಕುಟುಂಬ ಸಮೇತ'ದ ಎಕ್ಸ್ಕ್ಲೂಸಿವ್ ವರ್ಲ್ಡ್ ಡಿಜಿಟಲ್ ಪ್ರೀಮಿಯರ್ ಅನ್ನು ಸ್ಟ್ರೀಮ್ ಮಾಡುತ್ತಿದೆ. ಪರಮವಾಹ್ ಸ್ಟುಡಿಯೋಸ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ನಿರ್ಮಿಸಿದ ಮತ್ತು ರಾಹುಲ್ ಪಿ.ಕೆ. ಬರೆದು ನಿರ್ದೇಶಿಸಿದ ಈ ಚಲನಚಿತ್ರವು ಭ್ರಾತೃತ್ವದ ಸಂದೇಶವನ್ನು ಶ್ರೇಷ್ಠ ರೀತಿಯಲ್ಲಿ ಸಾರುತ್ತಿದೆ. 'ಸಕುಟುಂಬ ಸಮೇತ'ದಲ್ಲಿ ಭರತ್ ಜಿ.ಬಿ., ಅಚ್ಯುತ್ ಕುಮಾರ್, ಪುಷ್ಪಾ ಬೆಳವಾಡಿ, ಕೃಷ್ಣ ಹೆಬ್ಬಾಳೆ ಮತ್ತು ಸಿರಿ ರವಿಕುಮಾರ್ ಪ್ರಧಾನ ಭೂಮಿಕೆಯಲ್ಲಿದ್ದಾರೆ.
ಹಾಸ್ಯಮಯ ಚಿತ್ರವಾಗಿರುವ 'ಸಕುಟುಂಬ ಸಮೇತ' ಸಂಬಂಧದ ಸಂಕೀರ್ಣತೆಗಳನ್ನೂ ಅಷ್ಟೇ ಹೃದ್ಯವಾಗಿ ಕಟ್ಟಿಕೊಟ್ಟಿದೆ. ಪ್ರತಿ ಮನೆಯಲ್ಲೂ ಇರಬಹುದಾದ ಪಾತ್ರಗಳು, ಸಂಭವಿಸಬಹುದಾದ ಸನ್ನಿವೇಶಗಳ ಮೂಲಕ ಕಥೆಯು ಕೌಟುಂಬಿಕ ಸಂಬಂಧಗಳ ಸೊಗಸನ್ನು ಸಾರುತ್ತದೆ.
ಮದುವೆಯಾಗಲು ತವಕಿಸುತ್ತಿರುವ ಸೂರಿಯ ಬದುಕಿನಲ್ಲಿ ಶ್ರದ್ಧಾ ಎಂಬ ಹುಡುಗಿಯ ಪ್ರವೇಶವಾಗುತ್ತದೆ. ಆದರೆ, ಮದುವೆಗೆ ಇನ್ನು ಒಂದು ವಾರ ಇದೆ ಎನ್ನುವಾಗ ಆಕೆ ನಿರಾಕರಿಸುತ್ತಾಳೆ. ಎರಡು ನಿಷ್ಕ್ರಿಯ ಕುಟುಂಬಗಳ ನಡುವೆ ಸಮನ್ವಯಕ್ಕಾಗಿ ಸಭೆ ನಡೆಯುತ್ತದೆ. ಅಲ್ಲಿ ಈಗೋ ಘಾಸಿಗೊಳ್ಳುತ್ತವೆ. ಹೃದಯಗಳು ಮುರಿದು ಹೋಗುತ್ತವೆ. ಈ ನಡುವೆಯೇ ಕೆಲವು ಹೃದಯಗಳ ಗಾಯವೂ ಮಾಯುತ್ತದೆ. ಸುಖಾಂತ್ಯದ ರೋಮ್ಯಾಂಟಿಕ್ ಕಾಮಿಡಿಗಾಗಿ ವೀಕ್ಷಿಸಿ- ವೂಟ್ ಸೆಲೆಕ್ಟ್ (Voot Select).
ಚಿತ್ರದ ಕುರಿತು ಮಾತನಾಡಿದ ನಟ ಮತ್ತು ನಿರ್ಮಾಪಕ ರಕ್ಷಿತ್ ಶೆಟ್ಟಿ, “ಸಕುಟುಂಬ ಸಮೇತ ಸರಳವಾದ ಚಿತ್ರವಾಗಿದ್ದು, ಕೊನೆಯ ವರೆಗೂ ನಿಮ್ಮನ್ನು ನಗಿಸುತ್ತದೆ. ಲಾಕ್ಡೌನ್ ಸಮಯದಲ್ಲಿ ಈ ಪರಿಕಲ್ಪನೆ ಹುಟ್ಟಿಕೊಂಡಿತು. ಪ್ರತಿ ಪಾತ್ರವೂ ಎಷ್ಟು ಸಾಪೇಕ್ಷ ಮತ್ತು ನೈಜವಾಗಿದೆ ಎಂಬ ಅಂಶವೇ ಪ್ರೇಕ್ಷಕರನ್ನು ಬಹುವಾಗಿ ಕಾಡುತ್ತದೆ. ಏಕೆಂದರೆ, ಅಂತಹ ಪಾತ್ರಗಳು ನಮ್ಮ ಸುತ್ತಮುತ್ತ ಸಾಕಷ್ಟಿವೆ.
ನಿರ್ದೇಶಕ ರಾಹುಲ್ ಪಿ.ಕೆ. ಮಾತನಾಡಿ,"ಸಕುಟುಂಬ ಸಮೇತ ಮದುವೆ ಮತ್ತು ಕುಟುಂಬದ ಕುರಿತು ನನ್ನ ವೈಯಕ್ತಿಕ ದೃಷ್ಟಿಕೋನವಾಗಿದೆ. ಸಂಬಂಧಗಳು ಹೇಗೆ ನಿರಂತರ ಬೆಳೆಯುತ್ತಿರುತ್ತವೆ ಮತ್ತು ಬದಲಾಗುತ್ತಿರುತ್ತವೆ ಎಂಬ ಕುರಿತು ಸಂವಾದ ನಡೆಸಲು ನಾನು ಪ್ರಯತ್ನಿಸುತ್ತಿದ್ದೇನೆ" ಎಂದು ಹೇಳಿದರು.
ಸಕುಟುಂಬ ಸಮೇತವನ್ನು ವೀಕ್ಷಿಸಿ, ಇದೀಗ ವೂಟ್ ಸೆಲೆಕ್ಟ್ ನಲ್ಲಿ ಸ್ಟ್ರೀಮಿಂಗ್ ಮಾಡಲಾಗುತ್ತಿದೆ!
Voot Select brings the Exclusive World Digital Premiere of the highly anticipated Kannada family drama, Sakutumba Sametha, streaming now on the platform. Written and directed by Rahul PK, and produced by Rakshit Shetty under Paramvah Studios, the movie is a testament of Paramvah Studios’s excellence in the film fraternity. Sakutumba Sametha stars Bharath GB, Achyuth Kumar, Pushpa Belwadi, Hebbale Krishan and Siri Ravikumar in the lead.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm