ಬ್ರೇಕಿಂಗ್ ನ್ಯೂಸ್
16-08-22 03:39 pm Source: Vijayakarnataka ಸಿನಿಮಾ
ಬಾಲಿವುಡ್ನ ಜನಪ್ರಿಯ ಗಾಯಕ ಮತ್ತು ಸಂಗೀತ ನಿರ್ದೇಶಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಎಫ್ಐಆರ್ ದಾಖಲಾಗಿದೆ. 30 ವರ್ಷದ ಮಹಿಳೆಯೊಬ್ಬರು ರಾಹುಲ್ ವಿರುದ್ಧ ದೂರು ನೀಡಿದ್ದು, ತಮ್ಮ ಮೇಲೆ ರಾಹುಲ್ ಜೈನ್ ಅತ್ಯಾಚಾರ ಎಸಗಿದ್ದಾರೆ ಎಂದು ಆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಈ ಆರೋಪದ ಬಗ್ಗೆ ರಾಹುಲ್ ಜೈನ್ ಪ್ರತಿಕ್ರಿಯೆ ನೀಡಿದ್ದು, 'ಇದೆಲ್ಲವೂ ಆಧಾರರಹಿತ ಹಾಗೂ ಸುಳ್ಳು..' ಎಂದಿದ್ದಾರೆ.
ಮುಂಬೈನ ಓಹಿಶ್ವರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ. ಇನ್ಸ್ಟಾಗ್ರಾಮ್ ಮೂಲಕ ರಾಹುಲ್ ಜೈನ್ ಅವರು ಮಹಿಳೆಯನ್ನು ಸಂಪರ್ಕಿಸಿದ್ದಾರೆ. ಆ ಮಹಿಳೆಯ ಕೆಲಸವನ್ನು ಶ್ಲಾಘಿಸಿ, ಅಂಧೇರಿಯಲ್ಲಿರುವ ತನ್ನ ಅಪಾರ್ಟ್ಮೆಂಟ್ಗೆ ಬರುವಂತೆ ರಾಹುಲ್ ಆಹ್ವಾನ ನೀಡಿದ್ದಾರೆ. ಪರ್ಸನಲ್ ಕಾಸ್ಟ್ಯೂಮ್ & ಸ್ಟೈಲಿಸ್ಟ್ ಆಗಿ ನೇಮಕ ಮಾಡಿಕೊಳ್ಳುತ್ತೇನೆ ಎಂದು ಆ ಮಹಿಳೆಗೆ ಆಫರ್ ನೀಡಿದ್ದಾರೆ ಎಂದು ಪೊಲೀಸರು ದೂರಿನಲ್ಲಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಆಗಸ್ಟ್ 11ರಂದು ರಾಹುಲ್ ಜೈನ್ ಅಪಾರ್ಟ್ಮೆಂಟ್ಗೆ ಆ ಮಹಿಳೆ ಭೇಟಿ ನೀಡಿದ್ದರು. ತಮ್ಮಲ್ಲಿರುವ ಕಲೆಕ್ಷನ್ಸ್ ತೋರಿಸುವ ನೆಪದಲ್ಲಿ ರಾಹುಲ್ ಆ ಮಹಿಳೆಯನ್ನು ಬೆಡ್ರೂಮ್ಗೆ ಕರೆದುಕೊಂಡು ಹೋಗಿ, ಅಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರ ಪ್ರಕಾರ, ಆ ಮಹಿಳೆಯು ಪ್ರೀಲ್ಯಾನ್ಸ್ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. 'ತನಗೆ ಸಹಕರಿಸಲಿಲ್ಲ ಎಂಬ ಕೋಪಕ್ಕೆ ನನ್ನ ಮೇಲೆ ರಾಹುಲ್ ಜೈನ್ ಹಲ್ಲೆ ಮಾಡಿದ್ದಾರೆ. ಸಾಕ್ಷ್ಯ ನಾಶ ಮಾಡುವ ಯತ್ನ ಕೂಡ ಮಾಡಿದ್ದಾರೆ' ಎಂದು ಮಹಿಳೆಯು ಆರೋಪಿಸಿದ್ದಾರೆ.
ಸೆಕ್ಷನ್ 376, 323 ಹಾಗೂ 506 ಅಡಿಯಲ್ಲಿ ರಾಹುಲ್ ಜೈನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ ಈವರೆಗೂ ರಾಹುಲ್ ಜೈನ್ರ ಬಂಧನವಾಗಿಲ್ಲ. ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್, 'ಆ ಮಹಿಳೆ ಯಾರೆಂದೇ ನನಗೆ ಗೊತ್ತಿಲ್ಲ. ಆ ಮಹಿಳೆ ಮಾಡುತ್ತಿರುವ ಆರೋಪಗಳೆಲ್ಲ ಆಧಾರರಹಿತ ಮತ್ತು ಸುಳ್ಳು ಆಗಿದೆ. ಈ ಹಿಂದೆಯೂ ಮಹಿಳೆಯೊಬ್ಬರು ನನ್ನ ವಿರುದ್ಧ ಇದೇ ರೀತಿಯ ಆರೋಪ ಮಾಡಿದ್ದರು. ಆದರೆ ನನಗೆ ನ್ಯಾಯ ಸಿಕ್ಕಿದೆ. ಬಹುಶಃ ಈಗ ಆರೋಪ ಮಾಡುತ್ತಿರುವ ಮಹಿಳೆ ಕೂಡ ಆ ಮಹಿಳೆಯ ಗುಂಪಿನವರೇ ಇರಬೇಕು' ಎಂದಿದ್ದಾರೆ.
ಸೆಕ್ಷನ್ 376, 323 ಹಾಗೂ 506 ಅಡಿಯಲ್ಲಿ ರಾಹುಲ್ ಜೈನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ ಈವರೆಗೂ ರಾಹುಲ್ ಜೈನ್ರ ಬಂಧನವಾಗಿಲ್ಲ. ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್, 'ಆ ಮಹಿಳೆ ಯಾರೆಂದೇ ನನಗೆ ಗೊತ್ತಿಲ್ಲ. ಆ ಮಹಿಳೆ ಮಾಡುತ್ತಿರುವ ಆರೋಪಗಳೆಲ್ಲ ಆಧಾರರಹಿತ ಮತ್ತು ಸುಳ್ಳು ಆಗಿದೆ. ಈ ಹಿಂದೆಯೂ ಮಹಿಳೆಯೊಬ್ಬರು ನನ್ನ ವಿರುದ್ಧ ಇದೇ ರೀತಿಯ ಆರೋಪ ಮಾಡಿದ್ದರು. ಆದರೆ ನನಗೆ ನ್ಯಾಯ ಸಿಕ್ಕಿದೆ. ಬಹುಶಃ ಈಗ ಆರೋಪ ಮಾಡುತ್ತಿರುವ ಮಹಿಳೆ ಕೂಡ ಆ ಮಹಿಳೆಯ ಗುಂಪಿನವರೇ ಇರಬೇಕು' ಎಂದಿದ್ದಾರೆ.
Fir Filed Against Singer Rahul Jain For Allegedly Raping A Stylist He Says Allegation Baseless.
06-07-25 08:48 pm
Bangalore Correspondent
ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ಯ...
06-07-25 06:25 pm
Vandalism in Shivamogga Raghigudda: ಶಿವಮೊಗ್ಗ...
06-07-25 04:50 pm
Women's Commission Chairperson Nagalakshmi; ಥ...
04-07-25 10:44 pm
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
07-07-25 08:45 pm
HK News Desk
ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹ ; 28 ಮಕ್ಕಳ...
07-07-25 04:11 pm
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
07-07-25 05:02 pm
Mangalore Correspondent
Mangalore Car Accident, Thumbe: ಹಳೆ ಸ್ವಿಫ್ಟ್...
05-07-25 05:16 pm
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
07-07-25 10:31 pm
Mangalore Correspondent
Job Fraud, Mangalore, Doctor: ದುಬೈನ ಎನ್ಎಂಸಿ ಹ...
07-07-25 10:18 pm
ಹದಿನಾರರ ವಯಸ್ಸು ಹುಚ್ಚುಕೋಡಿ ಮನಸ್ಸು ; 16ರ ಹುಡುಗಿ...
07-07-25 07:13 pm
Digital Arrest, Cyber Fraud, Mangalore: ಡಿಜಿಟ...
07-07-25 03:30 pm
Moral policing, Puttur, Mangalore Crime: ನೀನು...
07-07-25 12:20 pm