Kuthar, Mangalore, UT Khader: ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣಕ್ಕೆ ಮುಸ್ಲಿಂ ಗುಂಪಿನ ಆಕ್ಷೇಪ ; ಸ್ಪೀಕರ್ ಯುಟಿ ಖಾದರ್ ಗೆ ಘೇರಾವ್ ಹಾಕಿ ತರಾಟೆ, ವೀಡಿಯೋ ವೈರಲ್

08-05-26 10:33 pm       HK News Staffer   ಕರಾವಳಿ

ನಿಟ್ಟೆ ಪರಿಗಣಿತ ವಿವಿ ವತಿಯಿಂದ ಕುತ್ತಾರು ಜಂಕ್ಷನ್ ನಲ್ಲಿ ಕುತ್ತಾರ್ ಜಂಕ್ಷನ್ನಲ್ಲಿ ವೃತ್ತವೊಂದನ್ನ ನಿರ್ಮಿಸಲು ರೂಪುರೇಷೆ ಸಿದ್ಧಗೊಂಡಿದ್ದು, ಇದೇ ವೇಳೆ ಅಲ್ಲಿ ಕೊರಗಜ್ಜನ ಹೆಸರಲ್ಲಿ ವೃತ್ತ ನಿರ್ಮಿಸಬಾರದೆಂದು ಅಲ್ಪಸಂಖ್ಯಾತ ಸಮುದಾಯದ ಗುಂಪೊಂದು ಸ್ಪೀಕರ್ ಖಾದರ್ ಅವರನ್ನ ತಡೆದು ಘೇರಾವ್ ಮಾಡಿ ತರಾಟೆಗೈದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉಳ್ಳಾಲ, ಮೇ 8: ನಿಟ್ಟೆ ಪರಿಗಣಿತ ವಿವಿ ವತಿಯಿಂದ ಕುತ್ತಾರು ಜಂಕ್ಷನ್ ನಲ್ಲಿ ಕುತ್ತಾರ್ ಜಂಕ್ಷನ್ನಲ್ಲಿ ವೃತ್ತವೊಂದನ್ನ ನಿರ್ಮಿಸಲು ರೂಪುರೇಷೆ ಸಿದ್ಧಗೊಂಡಿದ್ದು, ಇದೇ ವೇಳೆ ಅಲ್ಲಿ ಕೊರಗಜ್ಜನ ಹೆಸರಲ್ಲಿ ವೃತ್ತ ನಿರ್ಮಿಸಬಾರದೆಂದು ಅಲ್ಪಸಂಖ್ಯಾತ ಸಮುದಾಯದ ಗುಂಪೊಂದು ಸ್ಪೀಕರ್ ಖಾದರ್ ಅವರನ್ನ ತಡೆದು ಘೇರಾವ್ ಮಾಡಿ ತರಾಟೆಗೈದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಉಳ್ಳಾಲ ಮಾಸ್ತಿಕಟ್ಟೆಯ ರೆಸಾರ್ಟ್ ಒಂದರಲ್ಲಿ ಗುರುವಾರ ರಾತ್ರಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮುಸ್ಲಿಮರ ಗುಂಪೊಂದು ಸ್ಪೀಕರ್ ಖಾದರ್ ಅವರನ್ನು ಪ್ರಶ್ನೆ ಮಾಡಿ ಕುತ್ತಾರು ಜಂಕ್ಷನ್ ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣ ಮಾಡದಂತೆ ತಗಾದೆ ಎತ್ತಿದ್ದಾರೆ. ಈ ವೇಳೆ, ಮಾತಿಗೆ ಮಾತು ಬೆಳೆದಿದ್ದು ಇದರ ಸಣ್ಣ ವೀಡಿಯೋವನ್ನು ಅಲ್ಲಿದ್ದವರೇ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. 

ಕುತ್ತಾರು ಕೊರಗಜ್ಜನ ಆದಿಕ್ಷೇತ್ರಕ್ಕೆ ರಾಜ್ಯದ ವಿವಿಧ ಕಡೆಗಳಿಂದ ಬರುವ ಭಕ್ತಾಧಿಗಳಿಗೆ ಮಾಹಿತಿ ನೀಡುವುದಕ್ಕಾಗಿ ವರ್ಷಗಳ ಹಿಂದೆ ಕುತ್ತಾರು ಜಂಕ್ಷನ್ ನಲ್ಲಿ ಸ್ಥಳೀಯ ಬಜರಂಗದಳ ಕಾರ್ಯಕರ್ತರು ಕೊರಗಜ್ಜನ ಮುಟ್ಟಾಳೆಯ ಪ್ರತಿಕೃತಿಯುಳ್ಳ ಸಣ್ಣ ವೃತ್ತವೊಂದನ್ನ ನಿರ್ಮಿಸಿದ್ದರು. ಈಗಲೂ ಆ ವೃತ್ತವು ಕುತ್ತಾರು ಜಂಕ್ಷನ್ ನಲ್ಲಿದೆ. ಇದೀಗ ನಿಟ್ಟೆ ವಿವಿಯ ವತಿಯಿಂದ ಕುತ್ತಾರು ಜಂಕ್ಷನ್ ನಲ್ಲಿ ನೂತನ ವೃತ್ತವನ್ನ ನಿರ್ಮಿಸಲು ಮುಂದಾಗಿದ್ದಾರೆ.  ವೃತ್ತದಲ್ಲಿ ಕೊರಗಜ್ಜನ ಆದಿ ಕ್ಷೇತ್ರದ ಮಾಹಿತಿ ಮತ್ತು ಕೊರಗಜ್ಜನ ಮುಟ್ಟಾಳೆ ಸೇರಿ ಇತರ ಧರ್ಮೀಯರ ಕ್ಷೇತ್ರದ ಬಗ್ಗೆಯೂ ಮಾಹಿತಿಯನ್ನು ನೀಡುವ ಸಿದ್ಧತೆ ನಡೆದಿದೆ. 

ಆದರೆ ಈ ವಿಚಾರ ತಿಳಿಯದ ಮುಸ್ಲಿಂ ಗುಂಪು ಸ್ಥಳೀಯ ಶಾಸಕ ಹಾಗೂ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಪ್ರಶ್ನಿಸಿ ಘೇರಾವ್ ಹಾಕಿದ್ದು ಅದರ ವೀಡಿಯೋವನ್ನು ಜಾಲತಾಣಗಳಲ್ಲಿ ಹರಿಬಿಡಲಾಗಿದೆ.