ಬ್ರೇಕಿಂಗ್ ನ್ಯೂಸ್
02-11-26 05:34 pm HK News Staffer ಕರಾವಳಿ
ಮಂಗಳೂರು, ನ.2: ಮಂಗಳೂರು ಕಡಲ ತೀರದಿಂದ ನೂರು ಕಿಮೀ ದೂರದ ಆಳ ಸಮುದ್ರದಲ್ಲಿ ಸಮುದ್ರಕ್ಕೆ ಬಿದ್ದು ಸಂಕಷ್ಟಕ್ಕೀಡಾಗಿದ್ದ ಮೀನುಗಾರನನ್ನು ಕರಾವಳಿ ಕಾವಲು ಪಡೆ ತುರ್ತಾಗಿ ಸ್ಥಳಕ್ಕೆ ಧಾವಿಸಿ ರಕ್ಷಣೆ ಮಾಡಿದೆ. ನವೆಂಬರ್ 1ರ ರಾತ್ರಿ ಮಂಗಳೂರು ತೀರದಿಂದ ಸುಮಾರು 54 ನಾಟಿಕಲ್ ಮೈಲಿ ದೂರದ ಆಳ ಸಮುದ್ರದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆದಿದೆ.
ಆಳ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ‘ಶಿವ್ ಸಾಗರ್’ ಎಂಬ ಮೀನುಗಾರಿಕಾ ದೋಣಿಯಲ್ಲಿದ್ದ ಕಾರ್ಮಿಕ ಸಮುದ್ರಕ್ಕೆ ಬಿದ್ದು ಸಂಕಷ್ಟಕ್ಕೀಡಾಗಿದ್ದರು. ಈ ಬಗ್ಗೆ VHF ರೇಡಿಯೋ ಮೂಲಕ ಕೋಸ್ಟ್ ಗಾರ್ಡ್ ಪಡೆಗೆ ತುರ್ತು ಕರೆಯನ್ನು ರವಾನಿಸಲಾಗಿತ್ತು. ದೋಣಿಯಲ್ಲಿದ್ದ ಮೀನುಗಾರನೊಬ್ಬ ರಾತ್ರಿ ವೇಳೆ ಸಮುದ್ರಕ್ಕೆ ಹಾಕಿದ್ದ ಬಲೆಗಳನ್ನು ಮೇಲಕ್ಕೆ ಎಳೆಯುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದ.
ತಕ್ಷಣವೇ ಕಾರ್ಯ ಪ್ರವೃತ್ತರಾದ ದೋಣಿಯ ಇತರ ಸಿಬ್ಬಂದಿ ಆತನನ್ನು ನೀರಿನಿಂದ ಮೇಲೆತ್ತಲು ಯಶಸ್ವಿಯಾಗಿದ್ದರೂ, ಆತನ ಆರೋಗ್ಯ ತೊಂದರೆಗೀಡಾಗಿತ್ತು. ತುರ್ತು ವೈದ್ಯಕೀಯ ನೆರವಿನ ಅಗತ್ಯವಿದ್ದುದರಿಂದ ಕೋಸ್ಸ್ ಗಾರ್ಡ್ ಕರೆಸಲಾಗಿತ್ತು.



ತುರ್ತು ಕರೆಯ ಬೆನ್ನಲ್ಲೇ ತಕ್ಷಣವೇ ಭಾರತೀಯ ಕರಾವಳಿ ಕಾವಲು ಪಡೆ, ಮಂಗಳೂರು ಘಟಕದಿಂದ ‘ಐಸಿಜಿಎಸ್ ಸಿ-448’ ವೇಗದ ನೌಕೆಯನ್ನು ರಕ್ಷಣಾ ಕಾರ್ಯಾಚರಣೆಗೆ ರವಾನಿಸಿತು. ಕಠಿಣ ಸಮುದ್ರದಲ್ಲಿ ಕರಾವಳಿ ಕಾವಲು ಪಡೆಯ ಕಮಾಂಡಿಂಗ್ ತಂಡವು ಜಿಪಿಎಸ್ ಹಾಗೂ ರೇಡಾರ್ ನೆರವಿನಿಂದ ಅಪಾಯಕ್ಕೀಡಾಗಿದ್ದ ‘ಶಿವ್ ಸಾಗರ್’ ದೋಣಿಯನ್ನು ಯಶಸ್ವಿಯಾಗಿ ಪತ್ತೆಹಚ್ಚಿದೆ.
ಸಂಕಷ್ಟದಲ್ಲಿದ್ದ ಮೀನುಗಾರನನ್ನು ಕೂಡಲೇ ಕೋಸ್ಟ್ ಗಾರ್ಡ್ ನೌಕೆಗೆ ಸ್ಥಳಾಂತರಿಸಿದ ಯೋಧರು, ತಕ್ಷಣವೇ ತುರ್ತು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ನೌಕೆಯನ್ನು ಕರಾವಳಿಯತ್ತ ಚಲಾಯಿಸಿ, ನವ ಮಂಗಳೂರು ಬಂದರು ಪ್ರಾಧಿಕಾರದ ಜೆಟ್ಟಿಗೆ ಸುರಕ್ಷಿತವಾಗಿ ತಲುಪಿಸಲಾಗಿದೆ. ಅಲ್ಲಿ ಮುಂಚಿತವಾಗಿಯೇ ಸಿದ್ಧವಾಗಿದ್ದ ಆಂಬುಲೆನ್ಸ್ ಮೂಲಕ ಮೀನುಗಾರನನ್ನು ಮಂಗಳೂರಿನ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಒದಗಿಸಲಾಗಿದೆ.
30-10-26 08:26 pm
HK News
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
'ಮೈಸೂರು ಅರಮನೆ ಸರ್ಕಾರಕ್ಕೆ ಸೇರಿದ್ದು' ತನ್ನ ಹೇಳಿಕ...
28-10-26 10:52 pm
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
02-11-26 05:34 pm
HK News Staffer
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ; ಆರಿಫ್...
01-11-26 10:49 pm
ಮಂಗಳೂರಿನ ಮಂಜುಗಡ್ಡೆ ತಯಾರಿಕಾ ಘಟಕಕ್ಕೆ ಆಹಾರ ಸುರಕ್...
01-11-26 10:13 pm
ದೇಶದಲ್ಲಿ ಆಡಳಿತ ಬದಲಿಸುವುದಕ್ಕೇ ನಮ್ಮ ಹೋರಾಟ ; ರಂಗ...
31-10-26 09:40 pm
14 ವರ್ಷಗಳ ಬಳಿಕ ಸೌಜನ್ಯ ಕೇಸ್ ಮರುತನಿಖೆ ; ಮೃತದೇಹ...
31-10-26 05:19 pm
02-11-26 11:31 am
HK News Staffer
ಪ್ರೀತಿಸುತ್ತಿದ್ದ ಯುವತಿಯ ಖಾಸಗಿ ಫೋಟೊ ಜಾಲತಾಣದಲ್ಲಿ...
01-11-26 04:08 pm
ಪ್ರೇಮ ಪ್ರಕರಣ ; ಪ್ರೀತಿಸುತ್ತಿದ್ದ ಯುವತಿ ಮನೆಗೆ ಕರ...
31-10-26 01:16 pm
ಕಾರವಾರದ ಮುದಗಾ ಬಂದರಿನಲ್ಲಿ ಮತ್ತೆ ವಿಷಾನಿಲ ದುರಂತ:...
31-10-26 01:05 pm
ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್ ; ಕಾಂಗ್ರೆ...
30-10-26 11:01 pm