ಬ್ರೇಕಿಂಗ್ ನ್ಯೂಸ್
28-10-26 09:28 pm HK News Desk ಕರಾವಳಿ
ಉಳ್ಳಾಲ, ಅ.28 ಶಾಲೆಗೆ ತೆರಳುತ್ತಿದ್ದ ಒಂಬತ್ತನೇ ತರಗತಿಯ ಪರಿಶಿಷ್ಟ ಜಾತಿಯ ಅಪ್ರಾಪ್ತ ವಿದ್ಯಾರ್ಥಿನಿಯೋರ್ವಳನ್ನ ಪುಸಲಾಯಿಸಿ ಕಾರಿನಲ್ಲಿ ಅಪಹರಿಸಿದ ಬಾಗಲಕೋಟೆ ಮೂಲದ ಆರೋಪಿಯನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದು ಪೋಕ್ಸೋ ಹಾಗೂ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮೂಲದ ಉಳ್ಳಾಲ ಭಾಗದಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿದ್ದ ಗೂಡಸಾಬ್ ಯಾನೆ ಆಶಿಫ್ (23) ಬಂಧಿತ ಆರೋಪಿ. ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿರುವ ಬಾಗಲಕೋಟೆ ಮೂಲದ ಕುಟುಂಬವೊಂದರ ಇಬ್ಬರು ಅಪ್ರಾಪ್ತ ಸಹೋದರಿಯರು ಕನ್ನಡ ಮಾಧ್ಯಮ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದರೆನ್ನಲಾಗಿದೆ.
ಮಂಗಳವಾರ ಬೆಳಗ್ಗೆ ಪೋಷಕರು ಎಂದಿನಂತೆ ಇಬ್ಬರು ಹೆಣ್ಮಕ್ಕಳನ್ನ ಶಾಲಾ ವಾಹನದಲ್ಲಿ ಶಾಲೆಗೆ ಕಳುಹಿಸಿದ್ದರು. ಆದರೆ ಇಬ್ಬರು ಸಹೋದರಿಯರಲ್ಲಿ ಹಿರಿಯವಳು ಶಾಲೆಗೆ ಬಂದಿಲ್ಲವೆಂದು ಶಾಲಾ ಟೀಚರ್ ಪೋಷಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ನಾಪತ್ತೆಯಾದ ಅಪ್ರಾಪ್ತ ಬಾಲಕಿ ತನ್ನನ್ನ ಗೂಡಸಾಬ್ ಯಾನೆ ಆಶಿಫ್ ಎಂಬಾತ ಶಾಲೆಯ ಬಳಿ ಹಿಂಬಾಲಿಸಿ ಬಂದು ಮಾತನಾಡಿಸುತ್ತಿದ್ದ ವಿಚಾರವನ್ನು ತಾಯಿಯಲ್ಲಿ ಈ ಹಿಂದೆಯೇ ತಿಳಿಸಿದ್ದಳಂತೆ. ತಾಯಿ ಬಳಿಕ ತನ್ನ ಊರಿನವನು ಮತ್ತು ಪರಿಚಯಸ್ಥನಾಗಿದ್ದ ಗೂಡಸಾಬ್ ನನ್ನ ಭೇಟಿಯಾಗಿ ನಾವು ಪರಿಶಿಷ್ಟ ಜಾತಿಯವರಾಗಿದ್ದು ತನ್ನ ಮಗಳು ಕೂಡ ಅಪ್ರಾಪ್ತೆಯಾಗಿದ್ದು ಆಕೆಯ ವಿಚಾರಕ್ಕೆ ಬರಬಾರದೆಂದು ಎಚ್ಚರಿಕೆ ನೀಡಿದ್ದರು. ತನ್ನ ಮಗಳನ್ನ ಗೂಡಸಾಬನೇ ಪುಸಲಾಯಿಸಿ ಅಪಹರಣ ಮಾಡಿದ್ದು ಆತನ ವಿರುದ್ಧ ಕ್ರಮ ಕೈಗೊಂಡು, ಮಗಳನ್ನ ಪತ್ತೆ ಹಚ್ಚಿ ಕೊಡುವಂತೆ ಉಳ್ಳಾಲ ಪೊಲೀಸ್ ಠಾಣೆಗೆ ಮಂಗಳವಾರ ಸಂಜೆ ದೂರು ನೀಡಿದ್ದರು.
ಬಾಲಕಿ ತಾಯಿಯ ದೂರಿನನ್ವಯ ಉಳ್ಳಾಲ ಪೊಲೀಸರು ಆರೋಪಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಕಲಂ 3(2)(V) ಅಡಿ ಬಿಎನ್ಎಸ್ 137(2) ಪ್ರಕರಣ ದಾಖಲಿಸಿದ್ದರು. ಗೂಡಸಾಬ್ ಅಪ್ರಾಪ್ತ ಬಾಲಕಿಯನ್ನ ಪುಸಲಾಯಿಸಿ ಕಾರಿನಲ್ಲಿ ಅಪಹರಿಸಿದ್ದು, ಪ್ರಕರಣದ ಬೆನ್ನು ಬಿದ್ದ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಂಗಳವಾರ ರಾತ್ರಿಯೇ ಸೋಮೇಶ್ವರದಲ್ಲಿ ಆರೋಪಿಯನ್ನ ವಶಕ್ಕೆ ಪಡೆದಿದ್ದು, ಅಪ್ರಾಪ್ತ ಬಾಲಕಿಯನ್ನೂ ರಕ್ಷಿಸಿದ್ದಾರೆ. ಬಾಲಕಿಯ ಹೇಳಿಕೆಯನ್ನ ಆಧರಿಸಿ ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
28-10-26 10:52 pm
HK News Desk
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
ಅರಮನೆ ಮಂಡಳಿ ಸರಕಾರದ್ದು, ಅರಮನೆ ಜಾಗವೂ ಸರಕಾರದ್ದು...
27-10-26 01:23 pm
ದೇವೇಗೌಡ್ರ ಕುಟುಂಬವನ್ನು ಮುಗಿಸಲು ಡಿಕೆಶಿಯಿಂದ 600...
26-10-26 11:55 am
Rahul Gandhi, Siddaramaiah: ಸ್ಟಿಂಗ್ ಆಪರೇಶನ್ ;...
26-10-26 11:53 am
25-10-26 09:40 pm
HK News Staffer
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
28-10-26 09:28 pm
HK News Desk
TIVA Investment Scam, Mangalore: ಮತ್ತೊಂದು ದೋಖ...
28-10-26 07:18 pm
ವೇದವ್ಯಾಸ ಕಾಮತರೇ ಮಂಗಳೂರಿನ ಅಭಿವೃದ್ಧಿಗೆ ನಿಮ್ಮ ಕೊ...
28-10-26 04:59 pm
ಉದಯೋನ್ಮುಖ ನಟಿ ವಿನುತಾ ನಾಯಕ್ ಹಠಾತ್ ಕುಸಿದು ಬಿದ್ದ...
28-10-26 11:53 am
CT Ravi, Mangalore, SIR: ನೇಪಾಳ ಮಾದರಿ ಅರಾಜಕತೆ...
27-10-26 10:52 pm
28-10-26 10:42 pm
HK News Desk
ಬ್ರಹ್ಮಾವರ ರೌಡಿಶೀಟರ್ ಕೊಲೆ ; ಸೋದರರಿಬ್ಬರ ಬಂಧನ, ಹ...
28-10-26 04:57 pm
ತಮಿಳುನಾಡು ಜೈಲಿನಿಂದ 17 ಕೈದಿಗಳ ಪರಾರಿ; 30 ವರ್ಷಗಳ...
28-10-26 10:28 am
ಬ್ರಹ್ಮಾವರದಲ್ಲಿ ರೌಡಿಶೀಟರ್ ಬರ್ಬರ ಹತ್ಯೆ: ಹಣಕಾಸಿನ...
28-10-26 10:25 am
ಆನ್ಲೈನ್ ಬೆಟ್ಟಿಂಗ್ ದಂಧೆ ; ಚಿತ್ರದುರ್ಗದ ಕಾಂಗ್ರೆಸ...
27-10-26 09:32 pm