ಬ್ರೇಕಿಂಗ್ ನ್ಯೂಸ್
28-10-26 04:59 pm HK News Staffer ಕರಾವಳಿ
ಮಂಗಳೂರು, ಅ.28: ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬೇಕಾಗಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು ಬೀದಿ ನಾಟಕ ಮಾಡ್ತಿದ್ದಾರೆ. ಆದರೆ ಮಂಗಳೂರಿನ ಜನರು ಅಷ್ಟು ಮೂರ್ಖರಲ್ಲ. 2019ರಿಂದ 2025ರ ವರೆಗೆ ಆಡಳಿತ ಇದ್ದದ್ದು ಬಿಜೆಪಿ ಕೈಯಲ್ಲಿ. ದಕ್ಷಿಣ ಕ್ಷೇತ್ರದಲ್ಲಿ 8 ವರ್ಷಗಳಿಂದ ಇವರೇ ಶಾಸಕರು. ಇವರದ್ದೇ ಸರಕಾರ ಆಡಳಿತದಲ್ಲೂ ಇತ್ತು. ಎಲ್ಲವೂ ಇವರ ಕೈಯಲ್ಲೇ ಇದ್ದಾಗ ಮಂಗಳೂರು ನಗರದ ರಸ್ತೆಗಳನ್ನು ಯಾಕೆ ಅಭಿವೃದ್ಧಿ ಪಡಿಸಿಲ್ಲ? ಶಾಸಕರು ಅವರ ಕಾಲದಲ್ಲಿ ಮಾಡಿರುವ ಅಭಿವೃದ್ಧಿ ಏನು? ಅವರನ್ನು ಆರಿಸಿ ಕಳಿಸಿದ ಜನರ ಸೇವೆಯನ್ನು ಮಾಡಿದ್ದರೆ ಇಂದು ಈ ಬೀದಿ ನಾಟಕ ಮಾಡುವ ಪ್ರಮೇಯ ಬರ್ತಾ ಇರಲಿಲ್ಲ“ ಎಂದು ಕೆಪಿಸಿಸಿ ವಕ್ತಾರ ಎಸಿ ವಿನಯರಾಜ್ ಪತ್ರಿಕಾಗೋಷ್ಟಿಯಲ್ಲಿ ಪ್ರಶ್ನಿಸಿದರು.
ಕದ್ರಿ ಶಿವಭಾಗ್ ವಾರ್ಡ್ ನಲ್ಲಿ ಇವರದ್ದೇ ಪಕ್ಷದ ಕಾವ್ಯ ನಟರಾಜ್ ಕಾರ್ಪೊರೇಟರ್ ಆಗಿದ್ದರು. ಆಗ ಯಾಕೆ ಮಾತಾಡಿಲ್ಲ? ಈಗ ಯಾಕೆ ನಾಟಕ ಮಾಡ್ತಾ ಇದ್ದೀರಿ ಶಾಸಕರೇ? ಮೂರುವರೆ ವರ್ಷಗಳಲ್ಲಿ ಮಂಗಳೂರಿಗೆ ಬಿಡುಗಡೆಯಾದ ಅನುದಾನ ಎಷ್ಟು? ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 145 ಕೋಟಿ ಹಣ ಮಂಗಳೂರು ಮಹಾನಗರ ಪಾಲಿಕೆಗೆ ಬಂದಿದೆ.
ಪ್ರತೀ ಶಾಸಕರಿಗೆ 25 ಕೋಟಿ ಅನುದಾನ, ನೈಸರ್ಗಿಕ ವಿಕೋಪದಡಿಯಲ್ಲಿ 15 ಕೋಟಿ,
15ನೇ ಹಣಕಾಸು ಆಯೋಗದಡಿ 10 ಕೋಟಿ ಅನುದಾನ ಬಂದಿದೆ, ರಾಜ್ಯ ಹಣಕಾಸು ಆಯೋಗ 5 ಕೋಟಿ ನೀಡಿದೆ. ಮೊನ್ನೆ ಮಂಗಳೂರಲ್ಲಿ ನಡೆದ ಸಂಪುಟ ಸಭೆಯಲ್ಲಿ ಡಿಕೆ ಶಿವಕುಮಾರ್ ಅವರು 400 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಅದರಲ್ಲಿ ಬಹುಪಾಲು ಟೆಂಡರ್ ಮುಗಿದು ಕಾಮಗಾರಿ ಹಂತದಲ್ಲಿದೆ. ವೇದವ್ಯಾಸ್ ಕಾಮತ್ ಅವರೇ ಇಷ್ಟು ಕೋಟಿ ಹಣದಲ್ಲಿ ನಿಮಗ್ಯಾಕೆ ರಸ್ತೆ ಅಭಿವೃದ್ಧಿ ಮಾಡಲು ಆಗಲಿಲ್ಲ? ಶಾಸಕರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆಯಿದೆ, ಹೀಗಾಗಿ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಭಯದಿಂದ ಈ ರೀತಿ ಹಾದಿ ಬೀದಿಯಲ್ಲಿ ಪ್ರಹಸನ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕರೇ ನೀವು ಮಂಗಳೂರಿಗೆ ಎಷ್ಟು ಅನುದಾನ ತಂದಿದ್ದೀರಿ ಎಂದು ಮಂಗಳೂರಿನ ಜನರಿಗೆ ಶ್ವೇತಪತ್ರ ಹೊರಡಿಸಿ. ನಾವು ನೇರಾನೇರ ಚರ್ಚೆಗೆ ತಯಾರಿದ್ದೇವೆ. ನಿಮ್ಮ ವೈಫಲ್ಯ ಮುಚ್ಚಿಹಾಕಲು ನಾಟಕ ಮಾಡಬೇಡಿ. ಅಭಿವೃದ್ಧಿ ಕಾರ್ಯಗಳು ಆಗುವಾಗ ಕಾರ್ಯಕ್ರಮದಲ್ಲಿ ನೀವೇ ಅಧ್ಯಕ್ಷ ಸ್ಥಾನವನ್ನು ವಹಿಸುತ್ತೀರಿ, ಹೀಗಿರುವಾಗ ನಿಮಗ್ಯಾಕೆ ವಾಸ್ತವ ಸ್ಥಿತಿ ತಿಳಿದಿಲ್ಲ?
ಮಂಗಳೂರು ದಸರಾ ನಡೆಯುವಾಗ ಜನರು ಜಾತಿ ಮತ ಬೇಧ ಮರೆತು ಪಾಲ್ಗೊಳ್ಳುತ್ತಾರೆ. ದಸರಾ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಇಡೀ ನಗರ ನೈರ್ಮಲ್ಯ, ವಿದ್ಯುದ್ದೀಪ ಹಾಕಲಾಗುತ್ತದೆ, ಅದು ನಿಮ್ಮ ಕೊಡುಗೆಯಲ್ಲ. ಎಲ್ಲ ಪಕ್ಷಗಳ ಒಕ್ಕೊರಳ ಒತ್ತಾಯದಿಂದ ಇದು ನಡೆಯುತ್ತದೆ. ನೀವು ಇನ್ನು ಮುಂದೆ ಎಲ್ಲೂ ಇದು ನನ್ನ ಸಾಧನೆ ಎಂದು ಹೇಳಿಕೊಂಡು ಓಡಾಡಬೇಡಿ. ಮಹಾನಗರ ಪಾಲಿಕೆಗೆ ಕಾಂಗ್ರೆಸ್ ಅನುದಾನ ಬಿಡುಗಡೆ ಮಾಡಲು ಯಾವುದೇ ಹಿಂಜರಿಕೆ ಮಾಡುತ್ತಿಲ್ಲ ಎಂದರು.
645 ಕೋಟಿಯ ಕಾಮಗಾರಿ ಘೋಷಣೆಯಾಗಿದೆ. ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಹಂತದಲ್ಲಿದೆ. ಹೀಗಿರುವಾಗ ಯಾವ ಆಧಾರದಲ್ಲಿ ಮಹಾನಗರ ಪಾಲಿಕೆಗೆ ಅನುದಾನ ಬರುತ್ತಿಲ್ಲ ಎನ್ನುತ್ತೀರಿ ಎಂದು ಕಿಡಿಕಾರಿದರು. ಪತ್ರಿಕಾಗೋಷ್ಟಿಯಲ್ಲಿ ಪ್ರಕಾಶ್ ಸಾಲಿಯಾನ್, ಸಲೀಮ್, ಅಪ್ಪಿ, ಸಂಶುದ್ದೀನ್, ಅನಿಲ್ ಪೂಜಾರಿ, ಸವಿತಾ ಮಿಸ್ಕಿತ್, ಅಶ್ರಫ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.
28-10-26 10:52 pm
HK News Desk
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
ಅರಮನೆ ಮಂಡಳಿ ಸರಕಾರದ್ದು, ಅರಮನೆ ಜಾಗವೂ ಸರಕಾರದ್ದು...
27-10-26 01:23 pm
ದೇವೇಗೌಡ್ರ ಕುಟುಂಬವನ್ನು ಮುಗಿಸಲು ಡಿಕೆಶಿಯಿಂದ 600...
26-10-26 11:55 am
Rahul Gandhi, Siddaramaiah: ಸ್ಟಿಂಗ್ ಆಪರೇಶನ್ ;...
26-10-26 11:53 am
25-10-26 09:40 pm
HK News Staffer
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
28-10-26 09:28 pm
HK News Desk
TIVA Investment Scam, Mangalore: ಮತ್ತೊಂದು ದೋಖ...
28-10-26 07:18 pm
ವೇದವ್ಯಾಸ ಕಾಮತರೇ ಮಂಗಳೂರಿನ ಅಭಿವೃದ್ಧಿಗೆ ನಿಮ್ಮ ಕೊ...
28-10-26 04:59 pm
ಉದಯೋನ್ಮುಖ ನಟಿ ವಿನುತಾ ನಾಯಕ್ ಹಠಾತ್ ಕುಸಿದು ಬಿದ್ದ...
28-10-26 11:53 am
CT Ravi, Mangalore, SIR: ನೇಪಾಳ ಮಾದರಿ ಅರಾಜಕತೆ...
27-10-26 10:52 pm
28-10-26 10:42 pm
HK News Desk
ಬ್ರಹ್ಮಾವರ ರೌಡಿಶೀಟರ್ ಕೊಲೆ ; ಸೋದರರಿಬ್ಬರ ಬಂಧನ, ಹ...
28-10-26 04:57 pm
ತಮಿಳುನಾಡು ಜೈಲಿನಿಂದ 17 ಕೈದಿಗಳ ಪರಾರಿ; 30 ವರ್ಷಗಳ...
28-10-26 10:28 am
ಬ್ರಹ್ಮಾವರದಲ್ಲಿ ರೌಡಿಶೀಟರ್ ಬರ್ಬರ ಹತ್ಯೆ: ಹಣಕಾಸಿನ...
28-10-26 10:25 am
ಆನ್ಲೈನ್ ಬೆಟ್ಟಿಂಗ್ ದಂಧೆ ; ಚಿತ್ರದುರ್ಗದ ಕಾಂಗ್ರೆಸ...
27-10-26 09:32 pm