ಬ್ರೇಕಿಂಗ್ ನ್ಯೂಸ್
05-07-26 06:33 pm HK News Staffer ಕರಾವಳಿ
ಮಂಗಳೂರು, ಜುಲೈ 5: ಎನ್ಎಂಪಿಟಿ ಬಂದರಿಗೆ ಆಗಮಿಸಿದ್ದ ಬೃಹತ್ ಟ್ರಕ್ ಒಂದು ಪಣಂಬೂರು ಬೀಚ್ ರಸ್ತೆಯಿಂದ ಹೆದ್ದಾರಿಗೆ ನುಗ್ಗುವ ಸಂದರ್ಭದಲ್ಲಿ ಮುಂದಕ್ಕೆ ಚಲಿಸಲಾಗದೆ ಸಿಕ್ಕಿಬಿದ್ದಿದ್ದರಿಂದ ರಾಷ್ಟ್ರೀಯ ಹೆದ್ದಾರಿ -66ರಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸಂಚಾರ ಅಸ್ತವ್ಯಸ್ತವಾದ ಘಟನೆ ನಡೆದಿದೆ.
ಪಡುಬಿದ್ರೆಯ PRAJ ಇಂಡಸ್ಟ್ರೀಸ್ ಸಂಸ್ಥೆಗೆ ಸೇರಿದ್ದ 144 ಚಕ್ರದ ಬೃಹತ್ ಟ್ರಕ್ ಶನಿವಾರ ರಾತ್ರಿ ರಫ್ತು ಉದ್ದೇಶದ ಸರಕಿನೊಂದಿಗೆ ಪಣಂಬೂರು ಬಂದರಿಗೆ ಆಗಮಿಸಿತ್ತು. ರಾತ್ರಿ 11 ಗಂಟೆಗೆ ಪಡುಬಿದ್ರಿಯಿಂದ ಹೊರಟು ನಸುಕಿನ ನಾಲ್ಕು ಗಂಟೆ ವೇಳೆಗೆ ಪಣಂಬೂರು ತಲುಪಿತ್ತು. ಬಂದರಿನಲ್ಲಿ ಸರಕು ಅನ್ ಲೋಡ್ ಮಾಡಿ ಭಾನುವಾರ ಸಂಜೆ ನಾಲ್ಕು ಗಂಟೆಗೆ ಹೊರಗೆ ಬಂದು ಹೆದ್ದಾರಿಗೆ ನುಗ್ಗಿತ್ತು. ಆದರೆ ಬೀಚ್ ರಸ್ತೆಯಿಂದ ಹೊರಕ್ಕೆ ಬರುವಾಗ ಬದಿಯಲ್ಲಿ ವಾಹನ ಇದ್ದುದರಿಂದ ಟ್ರಕ್ ಮುಂಭಾಗ ಹೆದ್ದಾರಿ ಡಿವೈಡರ್ ಮೇಲೇರಿ ನಿಂತಿತ್ತು. ಹಿಂಭಾಗ ಪೂರ್ತಿಯಾಗಿ ಹೆದ್ದಾರಿಗೆ ಅಡ್ಡಲಾಗಿ ನಿಂತಿದ್ದರಿಂದ ಮಂಗಳೂರಿನಿಂದ ಸುರತ್ಕಲ್ ಕಡೆಗೆ ಹೋಗುವ ರಸ್ತೆ ಪೂರ್ತಿ ಬಂದ್ ಆಗಿತ್ತು.










ಇದರಿಂದಾಗಿ ಬೃಹತ್ ಟ್ರಕ್ ಹಿಂದಕ್ಕು ಮುಂದಕ್ಕೂ ಚಲಿಸಲಾಗದೆ ಬಾಕಿಯಾಗಿದ್ದು ಹೆದ್ದಾರಿಯಲ್ಲಿ ವಾಹನಗಳು ಫುಲ್ ಟ್ರಾಫಿಕ್ ಜಾಮ್ ಉಂಟಾಯಿತು. ಪಣಂಬೂರಿನಿಂದ ಇತ್ತ ಕುಳೂರು, ಕೊಟ್ಟಾರದ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನಗಳ ಪ್ರಯಾಣಿಕರು, ಚಾಲಕರು ರಸ್ತೆಗೆ ಬಂದು ಬೃಹತ್ ಟ್ರಕ್ಕನ್ನು ಹಗಲಿನಲ್ಲಿ ಹೆದ್ದಾರಿಗೆ ತಂದಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ, ಮುಂಭಾಗದಲ್ಲಿದ್ದ ಟ್ರಕ್ ಇಂಜಿನನ್ನು ತೆರವು ಮಾಡಿ ಹಿಂಭಾಗದಿಂದ ಕಟ್ಟಿ ಹಿಂದಕ್ಕೆ ಎಳೆಯುವ ಪ್ರಯತ್ನ ನಡೆಯಿತು. ಆಮೂಲಕ ಸಂಜೆ ಆರು ಗಂಟೆ ವೇಳೆಗೆ ಟ್ರಕ್ಕನ್ನು ಎಳೆದು ಹೆದ್ದಾರಿ ಬದಿಗೆ ತರಲಾಯಿತು.
ಅಷ್ಟರಲ್ಲಿ ಎರಡು ಗಂಟೆ ಕಾಲ ವಾಹನಗಳು ಸಿಕ್ಕಿಬಿದ್ದು ಪ್ರಯಾಣಿಕರು ಪರದಾಡುವಂತಾಯಿತು. ಪ್ರಜ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಟ್ರಕ್ ತೆರವು ಮಾಡಲು ಮುಂದಾದ ವೇಳೆ, ಸಾರ್ವಜನಿಕರು ತರಾಟೆಗೆತ್ತಿಕೊಂಡ ಸನ್ನಿವೇಶ ನಡೆಯಿತು. ಪೊಲೀಸರು ಕುಳೂರು ಕಡೆಯಿಂದ ಏಕಮುಖ ರಸ್ತೆಯನ್ನೇ ದ್ವಿಪಥ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿದರೂ, ತುರ್ತು ಸಾಗಬೇಕಿದ್ದ ವಾಹನಗಳಿಗೆ ತೀವ್ರ ಸಂಕಷ್ಟ ಎದುರಾಯಿತು. ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು ಬೃಹತ್ ವಾಹನವನ್ನು ನೋಡಿ ಮೊಬೈಲಿನಲ್ಲಿ ವಿಡಿಯೋ ಮಾಡುತ್ತಿದ್ದರು.
ಪಣಂಬೂರು ಬೀಚ್ ಬಂದಿದ್ದ ವಾಹನಗಳು ಕೂಡ ಹೊರಕ್ಕೆ ಬರಲಾಗದೆ ಸಿಕ್ಕಿಬಿದ್ದಿದ್ದವು. ಸುಮಾರು ನೂರು ಅಡಿ ಉದ್ದವಿದ್ದ ಬೃಹತ್ ಟ್ರಕ್ ಜನರ ಪಾಲಿಗೆ ಕುತೂಹಲಕ್ಕೂ ಕಾರಣವಾಯಿತು. ಟ್ರೇಲರ್ ವಾಹನವನ್ನು ಹೆದ್ದಾರಿಗೆ ತಂದು ನಿರ್ಲಕ್ಷ್ಯ ವಹಿಸಿದ್ದಕ್ಕೆ ಪ್ರಕರಣ ದಾಖಲಿಸಲಾಗುವುದು ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
A massive 144-wheel trailer transporting heavy industrial equipment caused a major traffic disruption on National Highway 66 near Panambur on Sunday after it got stuck while merging onto the highway from the Panambur Beach Road.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 06:52 pm
HK News Staffer
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm