Apex Capital Fraud Investment, Mangalore: ಬಿಜಿ ವೆಲ್ತ್ ಷೇರಿಂಗ್ ಮುಂಡಾ ಮೋಚ್ತು ! ಡಾಲರ್ ಲೆಕ್ಕದಲ್ಲಿ ಹೂಡಿಕೆಗೆ ಅಪೆಕ್ಸ್ ಕ್ಯಾಪಿಟಲ್ ಬಂತು..! ಕರಾವಳಿಯಲ್ಲಿ ಮತ್ತೊಂದು ನೆಟ್ವರ್ಕ್ ಬಿಸ್ನೆಸ್ ಹೆಸರಲ್ಲಿ ಮೋಸದ ಜಾಲ

07-06-26 01:57 pm       HK News Desk   ಕರಾವಳಿ

ಮೋಸ ಹೋಗೋರು ಇರೋ ತನಕ ಮೋಸ ಮಾಡೋರು ಇದ್ದೇ ಇರುತ್ತಾರೆ. ಇದಂತೂ ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಕರಾವಳಿಯ ಮಂಗಳೂರು, ಉಡುಪಿ ಜಿಲ್ಲೆಯನ್ನು ಗುರಿಯಾಗಿರಿಸಿ ನೆಟ್ವರ್ಕ್ ಬಿಸ್ನೆಸ್ ಆರಂಭಿಸಿ, ಮತ್ತೆ ಮತ್ತೆ ಜನರನ್ನು ಯಾಮಾರಿಸುವುದು, ಯಾರೋ ಡಾಲರ್ ಲೆಕ್ಕದಲ್ಲಿ ಹಣ ಹೊತ್ತುಕೊಂಡು ಹೋಗುತ್ತಿರುವುದು ನಡೆಯುತ್ತಲೇ ಇದೆ.

ಮಂಗಳೂರು, ಜೂನ್ 7: ಮೋಸ ಹೋಗೋರು ಇರೋ ತನಕ ಮೋಸ ಮಾಡೋರು ಇದ್ದೇ ಇರುತ್ತಾರೆ. ಇದಂತೂ ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಕರಾವಳಿಯ ಮಂಗಳೂರು, ಉಡುಪಿ ಜಿಲ್ಲೆಯನ್ನು ಗುರಿಯಾಗಿರಿಸಿ ನೆಟ್ವರ್ಕ್ ಬಿಸ್ನೆಸ್ ಆರಂಭಿಸಿ, ಮತ್ತೆ ಮತ್ತೆ ಜನರನ್ನು ಯಾಮಾರಿಸುವುದು, ಯಾರೋ ಡಾಲರ್ ಲೆಕ್ಕದಲ್ಲಿ ಹಣ ಹೊತ್ತುಕೊಂಡು ಹೋಗುತ್ತಿರುವುದು ನಡೆಯುತ್ತಲೇ ಇದೆ.

ಬಿಜಿ ವೆಲ್ತ್ ಷೇರಿಂಗ್ ಹೆಸರಲ್ಲಿ ಎರಡು ಜಿಲ್ಲೆಗಳ ಅದೆಷ್ಟೋ ಜನರು ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದನ್ನು ಇತ್ತೀಚೆಗೆ ವರದಿ ಮಾಡಿದ್ದೆವು. ಆ ವರದಿಯ ಪರಿಣಾಮ ಎಷ್ಟಾಯ್ತು ಅಂದ್ರೆ, ಬಿಜಿ ವೆಲ್ತ್ ಷೇರಿಂಗ್ ಹೆಸರಲ್ಲಿ ಬಿಸ್ನೆಸ್ ಮಾಡುತ್ತಿದ್ದವರು, ಪ್ರಮೋಟರ್ ಆಗಿದ್ದವರೇ ನಾಪತ್ತೆಯಾಗಿದ್ದಾರೆ. ಮೋಸಕ್ಕೀಡಾದ ಅದೆಷ್ಟೋ ಮಂದಿ ತಮ್ಮ ಹಣ ಕಳಕೊಂಡು ಪ್ರಮೋಟರ್ ಗಳನ್ನು ಹುಡುಕುತ್ತಿದ್ದಾರೆ. ಆದರೆ ಇಂಥ ಎಡವಟ್ಟುಗಳ ನಡುವೆಯೇ ಮತ್ತೊಂದು ನೆಟ್ವರ್ಕ್ ಬಿಸ್ನೆಸ್ ಸದ್ದಿಲ್ಲದೆ ಕರಾವಳಿಯಲ್ಲಿ ಶುರುವಾಗಿದೆ.

ಅಪೆಕ್ಸ್ ಕ್ಯಾಪಿಟಲ್ (Apex Capital) ಎಂಬ ಹೊಸ ಹೆಸರಲ್ಲಿ ಉಡುಪಿ ಮತ್ತು ಮಂಗಳೂರಿನಲ್ಲಿ ಹೊಸತೊಂದು ನೆಟ್ವರ್ಕ್ ಬಿಸ್ನೆಸ್ ಆರಂಭಗೊಂಡಿದ್ದು ಒಂದೇ ತಿಂಗಳಲ್ಲಿ ಹಣ ದುಪ್ಪಟ್ಟಾಗುವ ಆಮಿಷ ಒಡ್ಡಲಾಗುತ್ತಿದೆ. ಬಿಜಿ ವೆಲ್ತ್ ರೀತಿಯಲ್ಲೇ ಡಾಲರ್ ಲೆಕ್ಕದಲ್ಲಿ ಹೂಡಿಕೆ ಮಾಡುವ ಬಿಸ್ನೆಸ್ ಇದಾಗಿದ್ದು, ಈಗಾಗಲೇ ಎರಡೂ ಜಿಲ್ಲೆಗಳಲ್ಲಿ ಪ್ರಮೋಟರ್, ಏಜಂಟರು ಕೆಲಸ ಆರಂಭಿಸಿದ್ದಾರೆ. ಇದರಲ್ಲಿ ಹಣ ಹೂಡಿಕೆ ಮಾಡಿಸಿ, ಹೆಚ್ಚು ಜನರನ್ನು ಸೇರಿಸಿದವರಿಗೆ ಆಕರ್ಷಕ ಆಫರ್ ನೀಡಲಾಗಿದೆ. ಇದರ ಬ್ರೋಷರ್ ಗಳನ್ನು ಈಗಾಗಲೇ ವಾಟ್ಸಪ್ ಜಾಲತಾಣದಲ್ಲಿ ಹಾಕಿ ಹೂಡಿಕೆದಾರರನ್ನು ಆಕರ್ಷಿಸಲಾಗುತ್ತಿದೆ.

ಒಂದು ಸಾವಿರ ಡಾಲರ್ ಹೂಡಿಕೆ ಮಾಡಿದರೆ, ವಾರಕ್ಕೆ 5 ಶೇ. ಲಾಭ, ಜೊತೆಗೆ ತಿಂಗಳಿಗೆ 100 ಡಾಲರ್ ಖಚಿತ ಎನ್ನುವ ಆಮಿಷ ತೋರಲಾಗಿದೆ. ಹೆಚ್ಚು ಮಂದಿಯನ್ನು ಸೇರಿಸಿ ಸಾಧನೆ ಮಾಡಿದವರಿಗೆ ಫಾರಿನ್ ಟ್ರಿಪ್, ದುಬಾರಿ ಕಾರು ಗೆಲ್ಲುವ ಆಫರ್ ತೋರಿಸಲಾಗಿದೆ. ಅಪೆಕ್ಸ್ ಕ್ಯಾಪಿಟಲ್ ಹೆಸರಿನಲ್ಲಿ ಈಗಾಗಲೇ ಹಲವಾರು ಮಂದಿ ಹೂಡಿಕೆ ಮಾಡಿದ್ದು, ಆರಂಭ ಆಗಿರುವುದರಿಂದ ಒಂದಷ್ಟು ಹಣ ಬರುತ್ತಿರುವ ಬಗ್ಗೆ ಇತರರಿಗೆ ಹೇಳುತ್ತಿದ್ದಾರೆ. ಇದರಿಂದ ಈ ಹಿಂದೆ ಹಣ ಕಳಕೊಂಡವರು ಇದರಲ್ಲಾದ್ರೂ ಒಂದು ಕೈ ನೋಡೋಣ ಎಂದು ಸಾಲ ಮಾಡಿಯಾದ್ರೂ ಹಣ ಹೂಡಿಕೆಗೆ ಮುಂದಾಗಿದ್ದಾರೆ.

ಈಗಾಗಲೇ ಮಂಗಳೂರಿನಲ್ಲಿ ಡ್ರೀಮ್ ಡೀಲ್, ಅಸ್ತ್ರ ರೀತಿಯ ಹಲವಾರು ನೆಟ್ವರ್ಕ್ ಬಿಸ್ನೆಸ್ ಗಳಿದ್ದು, ತಿಂಗಳ ಕಂತಿನಲ್ಲಿ ಹೂಡಿಕೆ ಮಾಡಿದವರಿಗೆ ಮೋಸ ಮಾಡುತ್ತಿರುವುದು, ತಮ್ಮಲ್ಲಿ ಜುವೆಲ್ಲರಿ ಇದೆ, ಹಲವಾರು ಬಿಸ್ನೆಸ್ ಇದೆಯೆಂದು ನಂಬಿಸಿ ಜನರಿಗೆ ಟೋಪಿ ಹಾಕುವುದನ್ನು ಮಾಡುತ್ತಿದ್ದಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಇಂಥ ಕಪಟಿಗಳು ವಿದೇಶಿ ಕಂಪನಿ ಹೆಸರಲ್ಲಿ ಡಾಲರ್ ಲೆಕ್ಕದಲ್ಲಿ ಹೂಡಿಕೆಯ ಆಮಿಷ ಒಡ್ಡುತ್ತಿದ್ದಾರೆ.

ಅಪೆಕ್ಸ್ ಕ್ಯಾಪಿಟಲ್ ಕಂಪನಿಯನ್ನು ಮಲೇಶ್ಯಾದಲ್ಲಿ ನೆಲೆಸಿರುವ ಕರಾವಳಿ ಮೂಲದ ವ್ಯಕ್ತಿ ಹ್ಯಾಂಡಲ್ ಮಾಡುತ್ತಿದ್ದು, ತನ್ನ ಆಪ್ತರನ್ನು ಉಡುಪಿ ಮತ್ತು ಮಂಗಳೂರಿನಲ್ಲಿ ಪ್ರಮೋಟರ್ ಆಗಿ ಸೇರಿಸಿಕೊಂಡಿದ್ದಾನೆ. ಬ್ರೋಷರ್ ನಲ್ಲಿ ಕೆನಡಾ, ಮಲೇಶ್ಯಾ, ಕಾಂಬೋಡಿಯಾ, ಇಂಡೋನೇಶ್ಯಾದಲ್ಲಿ ಈ ಕಂಪನಿ ಚಾಲ್ತಿಯಲ್ಲಿ ಇರೋದಾಗಿ ಹೇಳಿಕೊಂಡಿದ್ದಾರೆ. ಇಂಥ ದೇಶಗಳಲ್ಲಿದ್ದುಕೊಂಡು ಭಾರತೀಯರನ್ನು ಗುರಿಯಾಗಿಸಿ ಸೈಬರ್ ದಾಳಿ ನಡೆಸಿ, ಷೇರು ಮಾರುಕಟ್ಟೆ, ತಾವು ಪೊಲೀಸ್ ಅಧಿಕಾರಿಗಳೆಂದು ಬಿಂಬಿಸಿ ಕೋಟ್ಯಂತರ ರೂಪಾಯಿ ಬಾಚಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ, ನೆಟ್ವರ್ಕ್ ಬಿಸ್ನೆಸ್ ಹೆಸರಲ್ಲಿ ಬುದ್ಧಿ ಕಡಿಮೆ ಇರುವ ವಿದ್ಯಾವಂತರನ್ನು ಹಣ ಹೂಡಿಕೆ ಮಾಡಿಸಿ ಯಾಮಾರಿಸುವ ಕೆಲಸಗಳಾಗುತ್ತಿದ್ದು ಪೊಲೀಸ್ ಇಲಾಖೆ ಮಾತ್ರ ಇದರಲ್ಲೇನೋ ಮಾಮೂಲಿ ಬರುತ್ತೆ ಅಂತಲೋ, ಇದೇನೂ ದೊಡ್ಡ ವಿಷ್ಯ ಅಲ್ಲ ಅಂತಲೋ ಮೌನವಾಗಿಬಿಟ್ಟಿದೆ.

Following the collapse of the widely discussed "Busy Wealth Sharing" platform, a new investment venture called Apex Capital has reportedly begun attracting investors across Coastal Karnataka with promises of dollar-based returns and high earnings through network-based marketing.