ಬ್ರೇಕಿಂಗ್ ನ್ಯೂಸ್
19-02-26 03:54 pm Mangalore Correspondent ಕರಾವಳಿ
ಪುತ್ತೂರು, ಫೆ.19: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮೂಲದ ಯುವಕನೊಬ್ಬ ಐರ್ಲೆಂಡ್ ದೇಶದಲ್ಲಿ ನಿಗೂಢ ಸಾವನ್ನಪ್ಪಿದ ಘಟನೆ ನಡೆದಿದ್ದು ಸಾವಿನ ಬಗ್ಗೆ ಹಲವು ರೀತಿಯ ಅನುಮಾನ ಮೂಡಿದೆ. ಐರ್ಲೆಂಡ್ ದೇಶದ ಡಬ್ಲಿನ್ ನಗರದಲ್ಲಿ ವಾಸವಿದ್ದ ಸಾಂಜೋ ಸುನಿಲ್(31) ಎಂಬವರು ತನ್ನ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಡಬ್ಲಿನ್ ನಗರದ ಫಿಂಗ್ಲಾಸ್ ಎಂಬ ಪ್ರದೇಶದ ಚಾರ್ಲ್ಸ್‌ಟೌನ್ ಏರಿಯಾದಲ್ಲಿ ಇವರು ಪತ್ನಿಯೊಂದಿಗೆ ಮನೆ ಮಾಡಿಕೊಂಡಿದ್ದರು. ಸಾಂಜೋ ಸುನಿಲ್, ಕಡಬ ತಾಲೂಕಿನ ಕುಟ್ರುಪಾಡಿ ವಿಮಲಗಿರಿ ಎಂಬಲ್ಲಿನ ನಿವಾಸಿಯಾಗಿದ್ದು ವರ್ಷದ ಹಿಂದೆ ಐರ್ಲೆಂಡಿನಲ್ಲಿ ನರ್ಸ್ ಆಗಿರುವ ಕಡಬದ ಯುವತಿಯನ್ನೇ ವಿವಾಹವಾಗಿದ್ದರು.
ಹಿಂದೆ ಇಸ್ರೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಸುನಿಲ್ ಅವರು ಕೆಲ ತಿಂಗಳ ಹಿಂದಷ್ಟೇ ಐರ್ಲೆಂಡಿಗೆ ತೆರಳಿದ್ದರು. ಪತ್ನಿ ಐರ್ಲೆಂಡ್ ನಲ್ಲಿ ನರ್ಸ್ ಆಗಿ ಕೆಲಸ ಆಗಿದ್ದರಿಂದ ಸುನಿಲ್ ಕೂಡ ತನ್ನ ಕೆಲಸವನ್ನು ಐರ್ಲೆಂಡಿಗೆ ಶಿಫ್ಟ್ ಮಾಡಿಸಿದ್ದರು. ಇದೀಗ ಐರ್ಲೆಂಡಿನ ತಮ್ಮ ಮನೆಯಲ್ಲೇ ಸುನಿಲ್ ಪತ್ನಿ ಇಲ್ಲದೇ ಇದ್ದಾಗ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಅನುಮಾನಗಳಿದ್ದು ಇದರ ಜೊತೆಗೆ ಇತರೇ ಸಾಧ್ಯತೆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪತ್ನಿ ಕೆಲಸಕ್ಕೆ ಹೋಗಿದ್ದ ವೇಳೆ ಘಟನೆ ನಡೆದಿದ್ದಾಗಿ ಮಾಹಿತಿ ಲಭಿಸಿದೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am