ಬ್ರೇಕಿಂಗ್ ನ್ಯೂಸ್
14-01-26 03:15 pm Mangalore Correspondent ಕರಾವಳಿ
ಬೆಳ್ತಂಗಡಿ, ಜ.14 : ಗೇರುಕಟ್ಟೆ ಬಳಿಯ ಕುವೆಟ್ಟು ಪಂಚಾಯತ್ ಓಡಿಲ್ನಾಳ ಗ್ರಾಮದ ಬರಮೇಲು ಎಂಬಲ್ಲಿ ಬೆಳಗ್ಗೆ ದೇವಸ್ಥಾನಕ್ಕೆ ಹೊರಟಿದ್ದ ಬಾಲಕನೊಬ್ಬ ಶವವಾಗಿ ಕೆರೆಯಲ್ಲಿ ಪತ್ತೆಯಾದ ಘಟನೆ ನಡೆದಿದ್ದು ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬರಮೇಲು ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಗೇರುಕಟ್ಟೆ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಮಂತ್ (16) ಮೃತ ಬಾಲಕ. ಸುಮಂತ್ ಪ್ರತಿ ವಾರ ಬೆಳಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗುವ ಪರಿಪಾಠ ಬೆಳೆಸಿಕೊಂಡಿದ್ದ. ಅದರಂತೆ, ಇಂದು ಬೆಳಗ್ಗೆ ಮನೆಯಿಂದ ಬೆಳಗ್ಗೆ 5 ಗಂಟೆಗೆ ದೇವಸ್ಥಾನಕ್ಕೆ ತೆರಳಿದ್ದ. ಆದರೆ ಆನಂತರ ಮನೆಗೆ ಹಿಂತಿರುಗದೇ ಇದ್ದಾಗ ಮನೆಯವರು ಹುಡುಕಾಡಿದ್ದು 500 ಮೀಟರ್ ದೂರದ ಬಾವಿಯಲ್ಲಿ ಶವ ಪತ್ತೆಯಾಗಿದೆ.
ಬಾಲಕನ ದೇಹದಲ್ಲಿ ಗಾಯದ ಗುರುತುಗಳಿದ್ದು ಇದು ಬಾವಿಗೆ ಬಿದ್ದ ಸಂದರ್ಭದಲ್ಲಿ ಆಗಿರುವ ಗಾಯಗಳೇ, ಯಾರಾದ್ರೂ ಹೊಡೆದು ಬಾವಿಗೆ ಹಾಕಿದ್ದಾರೆಯೇ ಎಂಬ ಸಂಶಯ ಸ್ಥಳೀಯ ಜನರಲ್ಲಿದೆ. ಸ್ಥಳಕ್ಕೆ ಎಸ್ಪಿ ಅರುಣ್ ಭೇಟಿ ನೀಡಿದ್ದು ಪೋಸ್ಟ್ ಮಾರ್ಟಂನಲ್ಲಿ ಗಾಯದ ಬಗ್ಗೆ ಮಾಹಿತಿ ಬರಲಿದ್ದು ತನಿಖೆ ನಡೆಸುತ್ತೇವೆ ಎಂದಿದ್ದಾರೆ.
A 16-year-old boy who had left home early in the morning to visit a temple was found dead in a well at Baramelu in Odilnala village of Kuvettu Panchayat near Gerukatte, Belthangady taluk. The deceased has been identified as Sumanth, a Class 9 student of Gerukatte Government High School and son of Subrahmanya Nayak. He had left home around 5 a.m. but did not return, prompting a search by family members. His body was later discovered in a well about 500 metres from his house.
08-05-26 08:05 pm
HK News Staffer
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
ಇರು ಅಂದ್ರೆ ಇರ್ತೀನಿ, ಹೈಕಮಾಂಡ್ ಮಾತನ್ನಷ್ಟೇ ಕೇಳ್ತ...
06-05-26 07:41 pm
ಗದಗದತ್ತ ಹೊರಟಿದ್ದ ಪಲ್ಲಕ್ಕಿ ಬಸ್ಸಿಗೆ ಬೆಂಕಿ ; ನಡು...
05-05-26 03:52 pm
08-05-26 06:45 pm
HK News Staffer
ದ್ರಾವಿಡರ ನಾಡಲ್ಲಿ ದಳಪತಿ ವಿಜಯ್ ಸರ್ಕಾರ್ ! ಮ್ಯಾಜಿ...
08-05-26 06:38 pm
ಒಬ್ಬನಿಗಾಗಿ ಒಂದೂವರೆ ಗಂಟೆ ಕಾದು ನಿಂತ ವಿಮಾನ; ಇತರ...
08-05-26 12:06 pm
ಬಂಗಾಳದಲ್ಲಿ ಟಿಎಂಸಿ ಯುಗಾಂತ್ಯ ; ಮಮತಾ ಸರ್ಕಾರ ವಜಾಗ...
07-05-26 10:29 pm
ಬಂಗಾಳದಲ್ಲಿ ಟಿಎಂಸಿ ಯುಗಾಂತ್ಯ ; ಮಮತಾ ಸರ್ಕಾರ ವಜಾಗ...
07-05-26 10:29 pm
08-05-26 10:33 pm
HK News Staffer
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
ಚೆನ್ನಾಗಿದ್ದ ಕಾಂಕ್ರೀಟ್ ರಸ್ತೆಗೆ ಡಾಂಬರ್ ಶಾಕ್ ! ಕ...
07-05-26 07:40 pm
ಸವಣೂರು ಬಳಿ ಭೀಕರ ಅಪಘಾತ ; ಟ್ಯಾಂಕರ್ ಡಿಕ್ಕಿಯಾಗಿ ಬ...
05-05-26 11:01 pm
ಕೋರ್ಟ್ ಜಟಾಪಟಿ ಬಳಿಕ ಉಳ್ಳಾಲ ದರ್ಗಾ ಆಡಳಿತ ಸಮಿತಿಗೆ...
02-05-26 11:05 pm
08-05-26 07:02 pm
HK News Staffer
ಬಸ್ ಚಲಿಸುತ್ತಿರುವಾಗಲೇ ಡ್ರೈವರ್ ಗೆ ಹೃದಯಾಘಾತ; ಪ್...
08-05-26 06:20 pm
ಪೋಕ್ಸೋ ಕೇಸ್ ಭಯಕ್ಕೆ ಠಾಣೆಯಲ್ಲೇ ಕೀ ನುಂಗಿದ ಆರೋಪಿ...
08-05-26 06:12 pm
ಬೆಂಗಳೂರಿನ ಆಸ್ಪತ್ರೆಯ ಒಳಗೇ ಆಭರಣ ದರೋಡೆ ! ರೋಗಿಯ 9...
07-05-26 08:00 pm
ಬಂಗಾಳದಲ್ಲಿ ಬಿಜೆಪಿ ಭರ್ಜರಿ ಗೆಲುವಿನ ಬೆನ್ನಲ್ಲೇ ಸು...
07-05-26 12:17 pm