ಬ್ರೇಕಿಂಗ್ ನ್ಯೂಸ್
11-11-25 10:42 pm Mangalore Correspondent ಕರಾವಳಿ
ಮಂಗಳೂರು, ನ.11: ಉಳ್ಳಾಲದ ಸಯ್ಯದ್ ಮದನಿ ದರ್ಗಾದಲ್ಲಿ ಮತ್ತೆ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಎರಡು ವರ್ಷಗಳ ಹಿಂದೆ ಆಡಳಿತಕ್ಕೆ ಬಂದು ಅಧ್ಯಕ್ಷರಾಗಿರುವ ಬಿ.ಜಿ ಹನೀಫ್ ಹಾಜಿ ಮತ್ತು ಪದಾಧಿಕಾರಿಗಳು ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಇದರ ಬಗ್ಗೆ ವಕ್ಫ್ ಇಲಾಖೆಗೆ ದೂರಿತ್ತರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದರ್ಗಾ ಕಮಿಟಿಯ ಸದಸ್ಯರೇ ದೂರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ವಕ್ಫ್ ಇಲಾಖೆಗೆ ಸೇರಿದ ಉಳ್ಳಾಲದ ಸಯ್ಯದ್ ಮದನಿ ದರ್ಗಾ ಮತ್ತು ಜುಮಾ ಮಸೀದಿಯ ಆಡಳಿತದಲ್ಲಿ ಭಾರೀ ಅವ್ಯವಹಾರ ಆಗುತ್ತಿದ್ದು, ಈ ಬಗ್ಗೆ ನಾವು ಪ್ರಶ್ನೆ ಮಾಡಿದರೂ ಕ್ಯಾರೆನ್ನುತ್ತಿಲ್ಲ. ವಕ್ಫ್ ಇಲಾಖೆಯವರಿಗೆ, ಕ್ಷೇತ್ರದ ಶಾಸಕ ಯುಟಿ ಖಾದರ್ ಅವರಿಗೂ ದೂರು ನೀಡಿದ್ದೇವೆ. ಆರ್ಟಿಐನಲ್ಲಿ ಮಾಹಿತಿ ಕೇಳಿದರೂ ಮಾಹಿತಿ ನೀಡುತ್ತಿಲ್ಲ. ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಉಳ್ಳಾಲ ದರ್ಗಾ ಉರೂಸಿಗೆ ರಾಜ್ಯ ಸರಕಾರದಿಂದ ಏಳು ಕೋಟಿ ಅನುದಾನ ಮಂಜೂರಾಗಿದ್ದು, ಇದಲ್ಲದೆ ದಾನಿಗಳಿಂದ ಕೋಟ್ಯಂತರ ರೂಪಾಯಿ ಸಂಗ್ರಹ ಆಗಿದೆ.

ಇದರ ಬಗ್ಗೆ ಲೆಕ್ಕ ಕೇಳಿದರೆ ಅದನ್ನು ಕೊಡುತ್ತಿಲ್ಲ. ದರ್ಗಾಕ್ಕೆ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳ ಬಗ್ಗೆಯೂ ರಹಸ್ಯ ಕಾಪಾಡಿದ್ದಾರೆ. ದರ್ಗಾ ಕಮಿಟಿಯಲ್ಲಿ 55 ಮಂದಿ ಸದಸ್ಯರಿದ್ದರೂ ಕೇವಲ ಏಳೆಂಟು ಮಂದಿ ಸೇರಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಸದಸ್ಯರ ಸಭೆ ಕರೆಯದೆ ತಮಗೆ ಬೇಕಾದಂತೆ ನಿರ್ಣಯಗಳನ್ನು ಮಾಡಿಕೊಂಡು ಖರ್ಚು- ವೆಚ್ಚದ ಲೆಕ್ಕ ತೋರಿಸದೆ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಆಡಳಿತ ವಹಿಸಿಕೊಂಡು ಎರಡು ವರ್ಷ ಕಳೆದರೂ ಒಂದು ಬಾರಿಯೂ ಮಹಾಸಭೆ ನಡೆಸಿಲ್ಲ. ಲೆಕ್ಕಪತ್ರ ಕೇಳಿದ ದರ್ಗಾ ಕಮಿಟಿಯ 30ಕ್ಕೂ ಹೆಚ್ಚು ಸದಸ್ಯರನ್ನು ಉಚ್ಛಾಟಿಸುವ ಬೆದರಿಕೆ ಹಾಕಿ ಸಭೆಗಳಿಗೆ ಕರೆಯದೆ ದೂರ ಇಟ್ಟಿದ್ದಾರೆ.
ಶಿಕ್ಷಣ ಉದ್ದೇಶದ ಕಟ್ಟಡವೊಂದನ್ನು ಸರಕಾರದ ಅನುದಾನದಲ್ಲಿ ನಿರ್ಮಿಸುತ್ತಿದ್ದು, ನಿಯಮಗಳನ್ನು ಉಲ್ಲಂಘಿಸಿ ತಮ್ಮ ಆಪ್ತರಿಗೆ ಗುತ್ತಿಗೆ ನೀಡಿದ್ದಾರೆ. ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ಎಸಗಲಾಗಿದ್ದು, ವಕ್ಫ್ ಇಲಾಖೆ ಮತ್ತು ದರ್ಗಾಕ್ಕೆ ದ್ರೋಹ ಎಸಗುತ್ತಿದ್ದಾರೆ. ಹಾಲಿ ದರ್ಗಾ ಕಮಿಟಿಯ ಅಧ್ಯಕ್ಷ ಬಿಜಿ ಹನೀಫ್, ಉಪಾಧ್ಯಕ್ಷ ಅಶ್ರಫ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಿಹಾಬುದ್ದೀನ್ ಸಕಾಫಿ, ಖಜಾಂಚಿ ನಾಝಿಂ ರೆಹ್ಮಾನ್, ಕಾರ್ಯದರ್ಶಿ ಇಸಾಕ್ ಮೇಲಂಗಡಿ ದರ್ಗಾ ಆಡಳಿತವನ್ನು ತಮ್ಮ ಮೂಗಿನ ನೇರಕ್ಕೆ ನಡೆಸುತ್ತಿದ್ದಾರೆ. ಇದಕ್ಕೆ ಸ್ಥಳೀಯ ಪ್ರಭಾವಿ ರಾಜಕೀಯ ನಾಯಕರ ಕೃಪಾಶೀರ್ವಾದ ಇದೆಯೆಂಬ ಸಂಶಯ ಇದೆ. ಹೀಗಾಗಿ ಆಡಳಿತ ಕಮಿಟಿ ವಿರುದ್ಧ ನಾವು ಅವಿಶ್ವಾಸ ಹೊಂದಿದ್ದು, ವಕ್ಫ್ ಬೋರ್ಡ್ ಕೂಡಲೇ ಸಭೆ ಕರೆದು ಅವಿಶ್ವಾಸ ಗೊತ್ತುವಳಿಗೆ ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದಾರೆ.
ದರ್ಗಾ ಕಮಿಟಿ ಸದಸ್ಯರಾದ ಫಾರೂಕ್ ಮುಕ್ಕಚ್ಚೇರಿ, ರಿಯಾಜ್ ಅಲೇಕಳ, ಮಹಮ್ಮದ್ ಮುಸ್ತಾಫ, ತಹಸೀನ್ ತೋಟ, ಅಬ್ದುಲ್ ಅಜೀಜ್ ಕೋಡಿ, ಅಬ್ದುಲ್ ಸಮದ್ ಮೇಲಂಗಡಿ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Fresh allegations of corruption have surfaced once again in the Sayyid Madani Dargah Committee at Ullal. Members have accused Committee President B.G. Hanif Haji and office-bearers of nepotism and misuse of power during their two-year tenure. Despite repeated complaints to the Waqf Department, officials have allegedly taken no action.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 10:56 pm
HK News Desk
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm