ಬ್ರೇಕಿಂಗ್ ನ್ಯೂಸ್
08-11-25 08:31 pm Mangalore Correspondent ಕರಾವಳಿ
ಮಂಗಳೂರು, ನ.8 : ಸುರತ್ಕಲ್ ಗುಡ್ಡೆಕೊಪ್ಲ ಸಮುದ್ರ ತೀರದಲ್ಲಿ ಆರು ವರ್ಷಗಳ ಹಿಂದೆ ಮರಳಿನಲ್ಲಿ ಹೂತು ಹೋಗಿದ್ದ ಭಗವತಿ ಪ್ರೇಮ್ ಡ್ರೆಜ್ಜರ್ ಹಡಗು ಬಹುತೇಕ ಭಾಗ ಈಗ ತಳ ಸೇರಿಕೊಂಡಿದೆ. ಹಡಗನ್ನು ಇನ್ನೂ ತೆಗೆಯದೇ ಇರುವುದರಿಂದ ಸ್ಥಳೀಯವಾಗಿ ಮೀನುಗಾರಿಕೆಗೆ ಅಡಚಣೆ ಎದುರಾಗಿದೆ. ಅಲ್ಲದೆ, ಸ್ಥಳೀಯ ನಿವಾಸಿಗಳ ಆತಂಕಕ್ಕೂ ಕಾರಣವಾಗಿದೆ.
ಪಣಂಬೂರು ಬಂದರಿನಲ್ಲಿ ಹೂಳೆತ್ತುವ ಗುತ್ತಿಗೆ ಪಡೆದಿದ್ದ ಮುಂಬೈ ಮೂಲದ ಕಂಪನಿಗೆ ಈ ಡ್ರೆಜ್ಜರ್ ಸೇರಿದ್ದು ತಾಂತ್ರಿಕ ಕಾರಣಗಳಿಂದಾಗಿ ತೀರಕ್ಕೆ ಬಂದು ಮರಳಿನಲ್ಲಿ ಹೂತು ಹೋಗಿದ್ದರಿಂದ ಬಾಕಿಯಾಗಿತ್ತು. 2019ರ ಅಕ್ಟೋಬರ್ 29ರಂದು ಹಡಗನ್ನು ನಿಲ್ಲಿಸಲಾಗಿತ್ತು. ಬಳಿಕ ಬೇರೆಡೆ ಕೊಂಡೊಯ್ಯಲು ಸಾಧ್ಯವಾಗದೆ ಸ್ಥಳದಲ್ಲೇ ಹಡಗನ್ಹು ಒಡೆದು ಹೊರ ತೆಗೆಯುವ ಬಗ್ಗೆ ಹಡಗು ಕಂಪನಿ ಭರವಸೆ ನೀಡಿತ್ತು. ಆದರೆ ಹಡಗನ್ನು ಪೂರ್ತಿ ಒಡೆದು ತೆಗೆಯುವುದು ಸಾಧ್ಯವಾಗಲಿಲ್ಲ.


ಒಂದು ವರ್ಷದ ಹಿಂದೆ ಬಾರ್ಜ್ ಆಧರಿತ ಕ್ರೇನ್ ಮೂಲಕ ಹಡಗನ್ನು ಒಡೆಯುವ ಯತ್ನ ನಡೆದಿತ್ತು. ಡ್ರೆಜ್ಜರ್ನ ಒಂದು ಭಾಗದಷ್ಟು ಮಾತ್ರ ತೆರವು ಮಾಡಲಾಗಿದ್ದು, ಎರಡು ಭಾಗ ಇನ್ನೂ ಸಮುದ್ರದಲ್ಲೇ ಇದೆ. ಶಾಸಕ ಭರತ್ ಶೆಟ್ಟಿ ಮಧ್ಯಸ್ಥಿಕೆಯಲ್ಲಿ ಹಡಗು ಕಂಪನಿ ಜೊತೆಗಿನ ಮಾತುಕತೆಯಲ್ಲಿ ಶೀಘ್ರದಲ್ಲೇ ತೆರವು ಕಾರ್ಯ ಮುಗಿಸಲು ಸೂಚಿಸಲಾಗಿದ್ದರೂ, ಚಂಡಮಾರುತ ಹಾಗೂ ತಾಂತ್ರಿಕ ತೊಂದರೆಗಳಿಂದ ವಿಳಂಬವಾಗಿದೆ.
ಬಾರ್ಜ್ ಆಧರಿತ ಕ್ರೇನ್ ಮತ್ತೆ ಸುರತ್ಕಲ್ ಬರಲಿದೆ ಎನ್ನಲಾಗುತ್ತಿದ್ದು ಮುಂಬೈನಿಂದ ಕಟ್ಟರ್ಸ್ ಹಾಗೂ ಕಾರ್ಮಿಕರ ತಂಡ ಆಗಮಿಸಲಿದೆ ಅಂತೆ. ಡ್ರೆಜ್ಜರ್ ಹಡಗು ನಿಂತಿರುವ ಜಾಗ ಮೀನುಗಾರಿಕೆಯ ಪ್ರಮುಖ ವಲಯ. ಆದರೆ ಡ್ರೆಜ್ಜರ್ ಅವಶೇಷದಿಂದಾಗಿ ಈ ಭಾಗದಲ್ಲಿ ಮೀನುಗಾರಿಕೆ ನಡೆಸಿದರೆ ಬಲೆಗಳಿಗೆ ಹಾನಿಯಾಗುತ್ತಿದೆ. ಮೀನುಗಾರರು ಅಸಹಾಯಕರಾಗಿದ್ದಾರೆ ಎಂದು ಗುಡ್ಡೆಕೊಪ್ಲ ಮೊಗವೀರ ಸಭಾದ ಅಧ್ಯಕ್ಷ ಕೇಶವ ಕುಂದರ್ ಹೇಳಿದ್ದಾರೆ. ಒಂದೆಡೆ ಡ್ರೆಜ್ಜರ್ನ ಅವಶೇಷದಿಂದ ಮೀನುಗಾರರು ಸಂಕಷ್ಟದಲ್ಲಿದ್ದರೆ, ಪ್ರವಾಸಿಗರಿಗೆ ಮಾತ್ರ ಕುತೂಹಲದ ಕೇಂದ್ರವಾಗಿದೆ. ಡ್ರೆಜ್ಜರ್ ವೀಕ್ಷಣೆಗೆ ಹೊರ ಜಿಲ್ಲೆಗಳಿಂದಲೂ ಜನರು ಬರುತ್ತಿದ್ದಾರೆ. ಈಗ ಪ್ರೀವೆಡ್ಡಿಂಗ್ ಫೋಟೋ ಶೂಟ್ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ.
The Bhagwati Prem dredger ship, which got stuck in the sand at Surathkal’s Gudddekopla beach nearly six years ago, is now almost completely buried under the sand. However, the stranded vessel continues to disrupt fishing activities and has become a cause of concern for local fishermen and residents.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
16-09-26 10:51 am
HK News Staffer
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm