ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್ಟ್ ; ಭಾರೀ ಸ್ಫೋಟಕ ಸಾಗಿಸ್ತಿದ್ದ ಶಂಕೆ, ಸ್ಥಳದಲ್ಲಿ 22 ಕಾರು, ಆಟೋ, ಬೈಕ್ ಗಳೆಲ್ಲ ಸುಟ್ಟು ಕರಕಲು, ಪ್ರಯಾಣಿಕರ ದೇಹಗಳು ಛಿದ್ರ, ಸಾವಿನ ಸಂಖ್ಯೆ ತೀವ್ರ ಹೆಚ್ಚಳ ಸಾಧ್ಯತೆ 

10-11-25 11:07 pm       HK News Desk   ದೇಶ - ವಿದೇಶ

ಕೆಂಪುಕೋಟೆ ಬಳಿ ಸ್ಫೋಟಗೊಂಡ ಕಾರಿನ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಕೆಂಪುಕೋಟೆ ಬಳಿಯ ಮೆಟ್ರೋ ಸ್ಟೇಶನ್ ಬಳಿಯಿಂದ ಹುಂಡೈ ಐ-20 ಕಾರು ಸಾಗುತ್ತಿದ್ದಂತೆ ಸ್ಫೋಟವಾಗಿದೆ. ಕಾರು ಸಿಗ್ನಲ್ ಬಳಿ ನಿಲ್ಲುತ್ತಿದ್ದಂತೆ ಸ್ಫೋಟಗೊಂಡಿದ್ದು ಅದರಲ್ಲಿ ಮೂವರು ಇದ್ದರು ಎನ್ನುವ ಮಾಹಿತಿ ಲಭಿಸಿದೆ.

ನವದೆಹಲಿ, ನ.10 : ಕೆಂಪುಕೋಟೆ ಬಳಿ ಸ್ಫೋಟಗೊಂಡ ಕಾರಿನ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಕೆಂಪುಕೋಟೆ ಬಳಿಯ ಮೆಟ್ರೋ ಸ್ಟೇಶನ್ ಬಳಿಯಿಂದ ಹುಂಡೈ ಐ-20 ಕಾರು ಸಾಗುತ್ತಿದ್ದಂತೆ ಸ್ಫೋಟವಾಗಿದೆ. ಕಾರು ಸಿಗ್ನಲ್ ಬಳಿ ನಿಲ್ಲುತ್ತಿದ್ದಂತೆ ಸ್ಫೋಟಗೊಂಡಿದ್ದು ಅದರಲ್ಲಿ ಮೂವರು ಇದ್ದರು ಎನ್ನುವ ಮಾಹಿತಿ ಲಭಿಸಿದೆ.

ಇದಲ್ಲದೆ, ಸ್ಫೋಟದ ತೀವ್ರತೆ ಮತ್ತು ಸ್ಥಳದಲ್ಲಿ ದೊರೆತ ಸಾಕ್ಷ್ಯಗಳನ್ನು ಆಧರಿಸಿ ಅಮೋನಿಯಂ ನೈಟ್ರೇಟ್ ನಿಂದ ಬ್ಲಾಸ್ಟ್ ಆಗಿರುವ ಸಾಧ್ಯತೆ ಬಗ್ಗೆ ದೆಹಲಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಭಾರೀ ವಿಧ್ವಂಸಕ ಕೃತ್ಯದ ಉದ್ದೇಶದಿಂದ ಅಮೋನಿಯಂ ನೈಟ್ರೇಟನ್ನು ಕಾರಿನಲ್ಲಿ ಸಾಗಿಸುತ್ತಿದ್ದಾಗ ಬ್ಲಾಸ್ಟ್ ಆಗಿದೆಯೇ ಎನ್ನುವ ಶಂಕೆಯಿದೆ.

ಸ್ಫೋಟಕಗಳನ್ನು ಕಾರಿನಲ್ಲಿ ತುಂಬಿಸಿ ಕೆಂಪುಕೋಟೆ ಬಳಿ ಅಥವಾ ಅಲ್ಲಿನ ಮೆಟ್ರೋ ಸ್ಟೇಶನ್ ಬಳಿ ಇರಿಸಲು ಸಂಚು ನಡೆದಿತ್ತಾ ಎನ್ನುವ ಅನುಮಾನ ಉಂಟಾಗಿದೆ. ಸ್ಥಳದಲ್ಲಿ 22 ಕಾರು, ಆಟೋ ರಿಕ್ಷಾ, ಏಳೆಂಟು ಬೈಕ್ ಗಳು ಸುಟ್ಟು ಕರಕಲಾಗಿದೆ ಎನ್ನುವ ಮಾಹಿತಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅದರಲ್ಲಿದ್ದ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಮನುಷ್ಯನ ದೇಹಗಳು ಮಾಂಸದ ಮುದ್ದೆಯಂತಾಗಿ ಆಸುಪಾಸಿನಲ್ಲಿ ಬಿದ್ದುಕೊಂಡಿದ್ದವು. ಹೀಗಾಗಿ ಮೃತರ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಲಭಿಸಿಲ್ಲ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.

ಇದೇ ವೇಳೆ, ಸ್ಫೋಟಕ್ಕೆ ಬಳಸಿದ್ದ ಕಾರು ಹರ್ಯಾಣ ಮೂಲದ್ದಾಗಿದ್ದು ಅದರ ಮಾಲೀಕ ಎನ್ನಲಾಗಿರುವ ಸಲ್ಮಾನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತನ್ನ ಕಾರನ್ನು ಮಾರಾಟ ಮಾಡಿದ್ದಾಗಿ ಹೇಳಿದ್ದಾನೆ. ಕಾರಿನಲ್ಲಿ ಮೂವರಿದ್ದರು ಎನ್ನುವ ಮಾಹಿತಿಯನ್ನು ಅದಕ್ಕೂ ಹಿಂದಿನ ಜಾಗದ ಸಿಸಿಟಿವಿಗಳನ್ನು ಗಮನಿಸಿ ಪೊಲೀಸರು ಅಂದಾಜಿಸಿದ್ದು ಅದು ಆತ್ಮಹತ್ಯಾ ಬಾಂಬರ್ ಆಗಿರಲಿಕ್ಕಿಲ್ಲ. ಸ್ಫೋಟಕಗಳನ್ನು ತುಂಬಿಕೊಂಡು ಒಯ್ಯುತ್ತಿದ್ದಾಗಲೇ ಸ್ಫೋಟ ಸಂಭವಿಸಿದೆ ಎನ್ನಲಾಗುತ್ತಿದೆ.

ಮೇಲ್ನೋಟಕ್ಕೆ ಭಯೋತ್ಪಾದಕ ಕೃತ್ಯ ಎನ್ನುವ ಬಲವಾದ ಶಂಕೆ ಮೂಡಿದೆ. ಸ್ಥಳದಲ್ಲಿ ಎನ್ಐಎ, ಎಫ್ಎಸ್ಎಲ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ಆಸ್ಪತ್ರೆಗೆ ಭೇಟಿ ನೀಡಿದ್ದು ಗಾಯಾಳುಗಳನ್ನು ಪರಿಶೀಲಿಸಿ ಉನ್ನತ ಅಧಿಕಾರಿಗಳ ಜೊತೆಗೆ ಸ್ಥಳದಲ್ಲೇ ಸಭೆಯನ್ನೂ ನಡೆಸಿದ್ದಾರೆ. ರಾತ್ರಿ 10 ಗಂಟೆ ವೇಳೆಗ 13 ಜನರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಆದರೆ ಅಲ್ಲಿ ಎಷ್ಟು ಜನರು ಇದ್ದರು ಎನ್ನುವ ಮಾಹಿತಿ ಇಲ್ಲದೇ ಇರುವುದರಿಂದ ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.

 A car explosion near the historic Red Fort in India’s capital city killed eight people on Monday and injured at least 19 others, police in New Delhi said.  The blast, which triggered a fire that damaged several vehicles parked nearby, was reported near one of the gates of the Red Fort metro station, the fire services said. The cause is being investigated.