ಬ್ರೇಕಿಂಗ್ ನ್ಯೂಸ್
27-02-26 12:34 pm HK News Desk ಕ್ರೈಂ
ಶಿವಮೊಗ್ಗ, ಫೆ.27: ಸೈಬರ್ ಅಪರಾಧಗಳಿಗೆ ಬಳಕೆಯಾಗುತ್ತಿದ್ದ 15 ಬೇನಾಮಿ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಗಳನ್ನು ಪೊಲೀಸರು ಪತ್ತೆಹಚ್ಚಿದ್ದು ಮೂವರನ್ನು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶರಾವತಿ ನಗರದ ಜಗದೀಶ್ (43), ಚಿಕ್ಕಮಗಳೂರಿನ ಅರ್ಷಾದ್ (39), ಶಿವಮೊಗ್ಗ ಹೊಸಮನೆ ಬಡಾವಣೆಯ ಅನಂತ (34) ಬಂಧಿತರು.
ಆರೋಪಿಗಳು ವಿವಿಧ ಬೇನಾಮಿ ಹೆಸರಿನಲ್ಲಿದ್ದ 15 ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದರು. ಈ ಖಾತೆಗಳ ಮೇಲೆ ದೇಶಾದ್ಯಂತ 352 ಕ್ಕೂ ಹೆಚ್ಚು ಸೈಬರ್ ಸಂಬಂಧಿತ ಪ್ರಕರಣಗಳು ದಾಖಲಾಗಿದ್ದು ಕೋಟ್ಯಂತರ ರೂಪಾಯಿ ಹಣದ ವಹಿವಾಟು ನಡೆದಿದೆ. 15 ಅಕೌಂಟ್ ಗಳಲ್ಲಿ ಸುಮಾರು 82 ಕೋಟಿ ರೂ. ಹಣ ವಂಚನೆಯಾಗಿರುವ ಬಗ್ಗೆ ಮಾಹಿತಿ ಇದೆ. ಸದ್ಯಕ್ಕೆ ವಂಚನೆಗೆ ಬಳಸಿದ 15 ಖಾತೆಗಳಲ್ಲಿ ಒಟ್ಟು 14 ಕೋಟಿ 71 ಲಕ್ಷ ರೂ. ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿ ಡ್ರಾ ಮಾಡಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಇದರಂತೆ, ಬ್ಯಾಂಕ್ ಖಾತೆಯನ್ನು ತೆರೆಮರೆಯಲ್ಲಿ ನಿಂತು ನಿರ್ವಹಣೆ ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 2 ಮೊಬೈಲ್, 11 ATM ಕಾರ್ಡ್, 9 QR Code Scanner, 15 Airtel SIM cards ವಶಕ್ಕೆ ಪಡೆಯಲಾಗಿದೆ. ವಿಲ್ಸನ್ ಎಂಬವರು ನೀಡಿದ್ದ ವಂಚನೆ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾಗ ಬೇನಾಮಿ ಖಾತೆಗಳ ಜಾಲ ಬಯಲಾಗಿದೆ. ಶಿವಮೊಗ್ಗ ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
16-08-26 09:33 pm
Mangaluru Staffer
After Rotten Chicken Scare at KFC, McDonald’s...
16-08-26 08:29 pm
McDonald's City Centre Raid, Mangalore: ಕೆಎಫ್...
16-08-26 08:20 pm
ಫೈವ್ ಸ್ಟಾರ್ ಹೊಟೇಲ್ ರೈಡ್ ಆದ್ರೂ ಕೊಳೆತ ಮಾಂಸ ಇಟ್ಕ...
16-08-26 04:14 pm
ಸ್ವಾತಂತ್ರ್ಯ ದಿನಾಚರಣೆ ವೇಳೆ ವಂದೇ ಮಾತರಂ ಗೀತೆಗೆ ಸ...
16-08-26 03:47 pm
16-08-26 09:03 pm
HK News Staffer
Kfc Raid, City Centre, Mangalore: ಸಿಟಿ ಸೆಂಟರ್...
15-08-26 09:06 pm
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm